newsfirstkannada.com

ವರ್ಲ್ಡ್​​ಕಪ್​ಗೆ ಆಯ್ಕೆಯಾಗದೆ ಇದ್ದಿದ್ದ ರೋಹಿತ್​ ಶರ್ಮಾ ಈಗ ಕ್ಯಾಪ್ಟನ್​.. ಅಂದು ಹಿಟ್​​ಮ್ಯಾನ್​ಗೆ ಯುವಿ ಹೇಳಿದ್ದೇನು?

Share :

06-09-2023

  ರೋಹಿತ್​ ಶರ್ಮಾ ಕಮ್​​ಬ್ಯಾಕ್​ ಮಾಡಿದ ಸಖತ್​ ರೋಚಕ ಕಥೆ

  ಕಳೆದ ವಿಶ್ವಕಪ್​ನಲ್ಲಿ ಕ್ಯಾಪ್ಟನ್​ ರೋಹಿತ್​ಗೆ ಅವಕಾಶ​ ಸಿಕ್ಕಿರಲಿಲ್ಲ

  ಟ್ಯಾಲೆಂಟ್​ ಇದ್ದವರಿಗೆ ಸಾಧಿಸಲು ಇನ್ನು ಅವಕಾಶಗಳಿವೆ- ಯುವಿ

ಅಂದು ಯುವರಾಜ್​ ಸಿಂಗ್​ ಆ ಒಂದು ಕೆಲಸವನ್ನ ಮಾಡದೇ ಇದ್ದಿದ್ರೆ, ಇಂದು ರೋಹಿತ್​ ಶರ್ಮಾ ಟೀಮ್​ ಇಂಡಿಯಾದಲ್ಲೇ ಇರುತ್ತಿರಲಿಲ್ಲ. ಈ ಬಾರಿಯ ವಿಶ್ವಕಪ್​ನಲ್ಲಿ ರೋಹಿತ್​ ಟೀಮ್​ ಇಂಡಿಯಾದ ಕ್ಯಾಪ್ಟನ್​. ಆದ್ರೆ, 2011ರಲ್ಲಿ ತಂಡದಲ್ಲೇ ಇರಲಿಲ್ಲ.. ಅಂದು ಕುಗ್ಗಿ ಹೋಗಿದ್ದ ರೋಹಿತ್​, ಕಮ್​​ಬ್ಯಾಕ್​ ಮಾಡಿದ ರೋಚಕ ಕಥೆಯೇ ಇವತ್ತಿನ ಸಖತ್​ ಸ್ಟೋರಿ.

ಭಾರತದಲ್ಲಿ ನಡೆದ ವಿಶ್ವಕಪ್​ ತಂಡದಲ್ಲಿ ಚಾನ್ಸೇ ಸಿಕ್ಕಿರಲಿಲ್ಲ

ಏಕದಿನ ವಿಶ್ವಕಪ್​ ಟೂರ್ನಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಗೊಂಡಿದೆ. 15 ಸದಸ್ಯರ ತಂಡವನ್ನ ಆಯ್ಕೆ ಮಾಡಲಾಗಿದ್ದು, ಕ್ಯಾಪ್ಟನ್​ ರೋಹಿತ್​ ಶರ್ಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಸ್ಫೋಟಕ, ಸ್ಮಾರ್ಟ್​ ಕ್ಯಾಪ್ಟೆನ್ಸಿಯಿಂದ ಗಮನ ಸೆಳೆದಿರೋ ರೋಹಿತ್​, ಟ್ರೋಫಿ ಗೆಲ್ಲಿಸಿಕೊಡ್ತಾರೆ ಎಂದು ಭಾರತೀಯ ಅಭಿಮಾನಿಗಳು ನಿರೀಕ್ಷೆಯಿಟ್ಟಿದ್ದಾರೆ. ಇಂದು ಯಾವ ಆಟಗಾರನ ಮೇಲೆ ಅಭಿಮಾನಿ ನಿರೀಕ್ಷೆಯಿಟ್ಟು ಕಾಯ್ತಿದ್ದಾರೋ ಆ ರೋಹಿತ್​ಗೆ 2011ರಲ್ಲಿ ಅಂದ್ರೆ, ಭಾರತದಲ್ಲಿ ನಡೆದ ವಿಶ್ವಕಪ್​ ತಂಡದಲ್ಲಿ ಚಾನ್ಸೇ ಸಿಕ್ಕಿರಲಿಲ್ಲ.

ಕ್ಯಾಪ್ಟನ್​ ರೋಹಿತ್ ಶರ್ಮಾ ಮತ್ತು ಮಾಜಿ ಆಟಗಾರ ರೋಹಿತ್ ಶರ್ಮಾ

2011ರ ಏಕದಿನ ವಿಶ್ವಕಪ್​ ತಂಡದಿಂದ ಅಚ್ಚರಿಯ ರೀತಿಯಲ್ಲಿ ರೋಹಿತ್​ ಶರ್ಮಾರನ್ನ ಡ್ರಾಪ್​ ಮಾಡಲಾಗಿತ್ತು. ವಿಶ್ವಕಪ್​ ಆಡೋ ಕನಸು ಕಂಡಿದ್ದ ರೋಹಿತ್​ಗೆ ಇದ್ರಿಂದ ಸಹಜವಾಗಿಯೇ ತೀವ್ರ ನಿರಾಸೆಯಾಗಿತ್ತು. ಆಗ ರೋಹಿತ್, ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ರು. ಚಾನ್ಸ್​ ಸಿಗದ್ದಕ್ಕೆ ಸಿಕ್ಕಾಪಟ್ಟೆ ಬೇಸರಗೊಂಡಿದ್ದ ರೋಹಿತ್​ ಡಿಪ್ರೆಶನ್​ಗೆ ಹೋಗಿದ್ರಂತೆ. ಆಗ ಹಿಟ್​ಮ್ಯಾನ್​ ಸಂತೈಸಿದ್ದು ಸಿಕ್ಸರ್​​ ಕಿಂಗ್​ ಯುವರಾಜ್​ ಸಿಂಗ್​.

ಬೇಸರಗೊಂಡಿದ್ದ ರೋಹಿತ್​ರನ್ನ ಒಂದು ದಿನ ಡಿನ್ನರ್​ಗೆ ಕರೆದೊಯ್ದಿದ್ದ ಯುವರಾಜ್​ ಸಿಂಗ್​ ಸಮಾಧಾನ ಪಡಿಸಿದ್ರಂತೆ. ಸ್ಪೂರ್ತಿಯ ಮಾತುಗಳನ್ನ ಹೇಳಿ ಕ್ರಿಕೆಟ್​ ಮೇಲಿನ ಆಸಕ್ತಿ ಕಳೆದುಕೊಂಡಿದ್ದ ರೋಹಿತ್​ರನ್ನ ಮೋಟಿವೇಟ್​ ಮಾಡಿದ್ರಂತೆ. ಟ್ಯಾಲೆಂಟ್​ ಇದ್ದವರಿಗೆ ಸಾಧಿಸಲು ಇನ್ನೂ ಅವಕಾಶಗಳಿರುತ್ತೆ ಉದ್ವೇಗಕ್ಕೆ ಒಳಗಾಗಬೇಡ, ಅಭ್ಯಾಸ ಹಾಗೂ ಕಠಿಣ ಪರಿಶ್ರಮ ಮುಂದುವರೆಸು ಎಂದು ಯುವಿ ಕಿವಿಮಾತನ್ನ ಹೇಳಿದ್ರಂತೆ. ಅಂದು ಯುವರಾಜ್ ಹೇಳಿದ ಮಾತಿನಿಂದಲೇ ನನ್ನ ಕರಿಯರ್​ ಬದಲಾಯ್ತು ಎಂದು ಸ್ವತಃ ರೋಹಿತ್​ ಶರ್ಮಾ ಈಗ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವರ್ಲ್ಡ್​​ಕಪ್​ಗೆ ಆಯ್ಕೆಯಾಗದೆ ಇದ್ದಿದ್ದ ರೋಹಿತ್​ ಶರ್ಮಾ ಈಗ ಕ್ಯಾಪ್ಟನ್​.. ಅಂದು ಹಿಟ್​​ಮ್ಯಾನ್​ಗೆ ಯುವಿ ಹೇಳಿದ್ದೇನು?

https://newsfirstlive.com/wp-content/uploads/2023/09/YUVARAJ_ROHIT.jpg

Load More