newsfirstkannada.com

ಯುವಿ ನೀಡಿದ ಆ ಒಂದು ಸಲಹೆ ಕೊಹ್ಲಿ ಬದುಕನ್ನೇ ಬದಲಿಸಿಬಿಡ್ತು.. ವಿರಾಟ್ ‘ಕಿಂಗ್ ಕೊಹ್ಲಿ’ ಆಗಲು ಕಾರಣ ಇವರೇ!

Share :

20-07-2023

    ಅಂದು ಸಚಿನ್​​ರನ್ನು ಹೆಗಲ ಮೇಲೆ ಹೊತ್ತು ಮೆರೆಸಿದ್ಕೆ ಇದೆ ಕಾರಣ

    499 ಪಂದ್ಯದಲ್ಲಿ ಅದ್ಭುತ ಸಾಧನೆ, ಇಂದು ಮತ್ತೊಂದು ಮೈಲಿಗಲ್ಲು

    ವಿರಾಟ್ ಕ್ರಿಕೆಟ್​ ಕರಿಯರ್​ಗೆ ಟ್ವಿಸ್ಟ್​ ಕೊಟ್ಟ ಯುವರಾಜ್​ ಸಲಹೆ

ಇಂದು 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾಗಿರುವ ಕೊಹ್ಲಿ, ಯುವರಾಜ್​ ಸಿಂಗ್​ಗೆ ಧನ್ಯವಾದ ಹೇಳಲೇಬೇಕು. ಅಂದು ಯುವಿ ಆ ಒಂದು ಸಲಹೆಯನ್ನ ನೀಡಿದೆ ಇದ್ದಿದ್ರೆ ಕೊಹ್ಲಿ.. ಕಿಂಗ್​ ಕೊಹ್ಲಿ ಆಗ್ತಾನೆ ಇರಲಿಲ್ಲ. ವಿರಾಟ್​ ಕ್ರಿಕೆಟ್​ ಕರಿಯರ್​ಗೆ ಟ್ವಿಸ್ಟ್​ ಕೊಟ್ಟ ಯುವರಾಜ್​ ಸಲಹೆ ಏನು?

ಇಂದಿನಿಂದ ಆರಂಭವಾಗಲಿರುವ ಇಂಡೋ-ವಿಂಡೀಸ್​​​ 2ನೇ ಟೆಸ್ಟ್​​ ಪಂದ್ಯ ವಿರಾಟ್​ ಕೊಹ್ಲಿ ಪಾಲಿಗೆ ವೆರಿ ವೆರಿ ಸ್ಪೆಷಲ್. ಟೀಮ್​ ಇಂಡಿಯಾವನ್ನು ಜಸ್ಟ್​ ಒಂದು ಪಂದ್ಯದಲ್ಲಿ ಪ್ರತಿನಿಧಿಸಿದ್ರೆ ಸಾಕು ಅನ್ನೋ ಕನಸು ಹೊತ್ತು ಜರ್ನಿಯನ್ನು ಆರಂಭಿಸಿದ ಕೊಹ್ಲಿ, ಇದೀಗ 500ನೇ ಪಂದ್ಯವನ್ನಾಡುವ ಹೊಸ್ತಿಲಲ್ಲಿ ನಿಂತಿದ್ದಾರೆ. ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯೋದ್ರೊಂದಿಗೆ ವಿರಾಟ್ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಸಾಧನೆ ಮಾಡಲಿದ್ದಾರೆ.

499 ಪಂದ್ಯದಲ್ಲಿ ಅವಿಸ್ಮರಣೀಯ ಸಾಧನೆಗಳು

18 ಅಗಸ್ಟ್​​ 2008… ವಿರಾಟ್​ ಕೊಹ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ದಿನ. ಅಂದು ಶ್ರೀಲಂಕಾ ವಿರುದ್ಧ ಕೊಹ್ಲಿ ಪದಾರ್ಪಣೆ ಮಾಡಿದಾಗ ಮುಂದೊಂದು ದಿನ ಈತ ಮಾಡ್ರನ್​ ಡೇ ಕ್ರಿಕೆಟ್​ನ ಅಧಿಪತಿಯಾಗ್ತಾನೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಸಾಮಾನ್ಯ ಆಟಗಾರನಾಗಿ ಕ್ರಿಕೆಟ್​​ ಅಂಗಳಕ್ಕೆ ಕಾಲಿಟ್ಟ ವಿರಾಟ್​, ಕ್ರಿಕೆಟ್​​ ಲೋಕದ ಕಿಂಗ್ ಆಗಿ ಬೆಳೆದಿದ್ದಾರೆ. ಅದೆಷ್ಟೋ ಐತಿಹಾಸಿಕ ಗೆಲುವುಗಳು, ಅವಿಸ್ಮರಣೀಯ ಇನ್ನಿಂಗ್ಸ್​ಗಳು, ಮನಮೋಹಕ ಬೌಂಡರಿ, ಸಿಕ್ಸರ್​ಗಳು ಕೊಹ್ಲಿ ಬ್ಯಾಟ್​ನಿಂದ ಮೂಡಿಬಂದಿವೆ.

ಆರಂಭದಲ್ಲೇ ಯಶಸ್ಸಿನ ಮತ್ತಲ್ಲಿದ್ದ ಕೊಹ್ಲಿ

ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟ ದಿನಗಳಲ್ಲಿ ಕೊಹ್ಲಿ ಕ್ರಿಕೆಟನ್ನು ಸೀರಿಯಸ್ಸಾಗೇ ಪರಿಗಣಿಸಿರಲಿಲ್ಲ. ಆರಂಭದಲ್ಲೇ ಯಶಸ್ಸಿನ ಸಿಹಿಯುಂಡಿದ್ದ ಕೊಹ್ಲಿ, ಎಲ್ಲವನ್ನೂ taken for granted ಆಗೇ ತೆಗೆದುಕೊಂಡಿದ್ರಂತೆ. ಆನ್​ಫೀಲ್ಡ್​​ ಆಟಕ್ಕಿಂತ ಆಫ್​ ಫೀಲ್ಡ್​ನ ಪಾರ್ಟಿ, ಪಬ್​, ಸುತ್ತಾಟಗಳಿಂದಲೇ ಹೆಚ್ಚಾಗಿ ಸುದ್ದಿಯಾಗಿದ್ರು. ಅದ್ರಲ್ಲೂ ಸೌತ್​ ಆಫ್ರಿಕಾದಲ್ಲಿ ನಡೆದ 2009ರ ಐಪಿಎಲ್​​ ವೇಳೆ ಕೊಹ್ಲಿ ಪಾರ್ಟಿಗೆ ಹೆಚ್ಚು ಒತ್ತು ನೀಡ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಪರಿಣಾಮ ಅಂದಿನ ಸೆಲೆಕ್ಟರ್ಸ್​​ ಕೊಹ್ಲಿಯನ್ನು ತಂಡದಿಂದ ಕೈ ಬಿಡೋ ಯೋಚನೆ ಮಾಡಿದ್ರಂತೆ.

ಯುವಿ ಕೊಟ್ಟ 1 ಸಲಹೆಯಿಂದ ಬದಲಾಯ್ತು ಜೀವನ

ವಿರಾಟ್​ ಕೊಹ್ಲಿಗೆ ಅದ್ಭುತ ಟ್ಯಾಲೆಂಟ್​ ಇದೆ ಅನ್ನೋದನ್ನು ಆರಂಭದಲ್ಲೇ ಎಲ್ಲರೂ ಐಡೆಂಟಿಫೈ ಮಾಡಿದ್ದರು. ಆದ್ರೆ ಮೋಜು ಮಸ್ತಿಯ ಸುತ್ತವೇ ಗಿರಕಿ ಹೊಡೀತಿದ್ದ ಕೊಹ್ಲಿ, ತನ್ನ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ರು. ಬ್ಯಾಟಿಂಗ್​ಗಿಂತ, ಹೇರ್​ಸ್ಟೈಲ್​, ಟ್ಯಾಟೋಸ್​​, ಪಾರ್ಟಿ ಲೈಫ್​ಸ್ಟೈಲ್​ನ ಫಾಲೋ ಮಾಡ್ತಿದ್ದ ಕೊಹ್ಲಿಗೆ ಯುವರಾಜ್​ ಸಿಂಗ್​​ ಒಂದು ಸಲಹೆ ನೀಡಿದ್ರು. ಆ ಒಂದು ಸಲಹೆ ಕೊಹ್ಲಿ ಕರಿಯರ್​ಗೆ ಟ್ವಿಸ್ಟ್​ ನೀಡ್ತು.

‘ಸಚಿನ್​ರನ್ನ​ ಸ್ಪೂರ್ತಿಯಾಗಿ ತೆಗೆದುಕೋ

‘ನಾನು ವಿರಾಟ್ ಕೊಹ್ಲಿ ಜೊತೆಗೆ ಒಮ್ಮೆ ತುಂಬಾ ಗಂಭೀರವಾಗಿ ಮಾತನಾಡಿದೆ. ನೀನೆನಾದ್ರೂ ಟಾಪ್​ ಕ್ಲಾಸ್​ ಆಟಗಾರನಾಗಬೇಕು ಅಂದರೆ, ನನ್ನನ್ನ ಅನುಸರಿಸಬೇಡ. ಸಚಿನ್​ ತೆಂಡುಲ್ಕರ್​ ಅವರನ್ನ ಸ್ಫೂರ್ತಿಯಾಗಿ ತೆಗೆದುಕೋ. ಅವರಂತೆ ಶಿಸ್ತಿನಿಂದ ಇರು. ನನ್ನಂತೆ ಕೇರ್​​ ಫ್ರಿಯಾಗಿರಬೇಡ’
ಯುವರಾಜ್​ ಸಿಂಗ್​, ಮಾಜಿ ಕ್ರಿಕೆಟಿಗ

ಯುವರಾಜ್​ ಸಿಂಗ್​ ಹೇಳಿದ್ದನ್ನು ಸೀರಿಯಸ್ಸಾಗಿ ಕೊಹ್ಲಿ ತೆಗೆದುಕೊಂಡ್ರೋ ಇಲ್ವೋ..? ಗೊತ್ತಿಲ್ಲ. ಆದ್ರೆ, ಆ ಬಳಿಕ ಸಚಿನ್​ರನ್ನ ಕೊಹ್ಲಿ ಹೆಚ್ಚು ಫಾಲೋ ಮಾಡಿದ್ದಂತೂ ಸತ್ಯ. ಸಚಿನ್​ರಂತೆ ಕ್ರಿಕೆಟ್​ ಅನ್ನ ತುಂಬಾ ಸೀರಿಯಸ್ಸಾಗಿ ತೆಗೆದುಕೊಂಡ ಕೊಹ್ಲಿ, ಲೈಫ್​ ಸ್ಟೈಲ್​ ಅನ್ನ ಸಂಪೂರ್ಣ ಬದಲಿಸಿಕೊಂಡ್ರು. ವರ್ಕೌಟ್​​, ಫಿಟ್​ನೆಸ್​​ ಕಡೆಗೆ ಗಮನ ಹರಿಸಿದ ಕೊಹ್ಲಿ ಕ್ರಿಕೆಟ್​ ಲೋಕದ ಮಾಡ್ರನ್​ ಡೇ ಲೆಜೆಂಡ್​ ಆಗಿ ಬೆಳೆದು ನಿಂತಿದ್ದಾರೆ.

ಕ್ರಿಕೆಟ್​ ದೇವರ ಕನಸು ನನಸು ಮಾಡಲು ಪಣ.!

ಸಚಿನ್​​ರನ್ನ ಸ್ಫೂರ್ತಿಯಾಗಿ ತೆಗೆದುಕೊಂಡ ಕೊಹ್ಲಿ, ಕ್ರಿಕೆಟ್​ ಕರಿಯರ್​ ರೂಪಿಸಿಕೊಂಡಿದ್ದ ಮಾತ್ರವಲ್ಲ. ಸಚಿನ್​ಗೆ ಬಹುಕಾಲದಿಂದ ಕಾಡ್ತಿದ್ದ ಕೊರಗನ್ನೂ ನೀಗಿಸಿದ್ರು. ಎಲ್ಲವನ್ನೂ ಸಾಧಿಸಿದ್ದ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್​​ಗೆ ಏಕದಿನ ವಿಶ್ವಕಪ್​ ಗೆದ್ದಿಲ್ಲ ಅನ್ನೋ ಕೊರಗು ಕಾಡ್ತಿತ್ತು. 2011ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದ ಕೊಹ್ಲಿ, ಟ್ರೋಫಿ ಗೆಲುವಿನಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ರು. ಇಷ್ಟೇ ಅಲ್ಲ.. ಟ್ರೋಫಿ ಗೆದ್ದ ಬಳಿಕ ಕ್ರಿಕೆಟ್​ ದೇವರನ್ನ ಹೆಗಲ ಮೇಲೆ ಹೊತ್ತು ಮೈದಾನದ ತುಂಬೆಲ್ಲಾ ಮೆರೆಸಿದ್ರು.

ವಿಶ್ವ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ತನ್ನದೇ ಸಾಮ್ರಾಜ್ಯ ಸೃಷ್ಟಿಸಿಕೊಂಡಿದ್ದಾರೆ. ಶತಕದ ಮೇಲೆ ಶತಕ ಸಿಡಿಸಿ, ಟನ್​ಗಟ್ಟಲೇ ರನ್​ ಗಳಿಸಿ ಅಸಾಧ್ಯ ಎಂದ ದಾಖಲೆಗಳನ್ನ ಪುಡಿಗಟ್ಟಿದ್ದಾರೆ. ಅಂದು ಸಚಿನ್​ ತೆಂಡುಲ್ಕರ್​​​ರನ್ನ ಸ್ಫೂರ್ತಿಯಾಗಿ ತೆಗೆದುಕೊಂಡ ಕೊಹ್ಲಿ, ಈಗ ಅದೇ ಸಚಿನ್​ ಜೊತೆಗೆ ಹೋಲಿಕೆಯಾಗುವಷ್ಟರ ಬೆಳೆದುನಿಂತಿದ್ದಾರೆ. ಕೊಹ್ಲಿಯ ಈ ಸಾಧನೆ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯ ಕಥನ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಯುವಿ ನೀಡಿದ ಆ ಒಂದು ಸಲಹೆ ಕೊಹ್ಲಿ ಬದುಕನ್ನೇ ಬದಲಿಸಿಬಿಡ್ತು.. ವಿರಾಟ್ ‘ಕಿಂಗ್ ಕೊಹ್ಲಿ’ ಆಗಲು ಕಾರಣ ಇವರೇ!

https://newsfirstlive.com/wp-content/uploads/2023/07/VIRAT.jpg

Load More