ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು
ಸೋಲಿನ ಬಳಿಕ ಅಚ್ಚರಿ ಹೇಳಿಕೆ ಕೊಟ್ಟ ಇಂಗ್ಲೆಂಡ್ ಪ್ಲೇಯರ್..!
ಇಂಗ್ಲೆಂಡ್ ಟೀಂನ ಆರಂಭಿಕ ಬ್ಯಾಟ್ಸ್ಮನ್ ಜಾಕ್ ಕ್ರಾವ್ಲೆ ಏನಂದ್ರು?
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರೋ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಇಂಗ್ಲೆಂಡ್ ಟೀಂ 2ನೇ ಪಂದ್ಯವನ್ನು ಶತಾಯಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿದೆ. ಈಗಾಗಲೇ ಲಾರ್ಡ್ಸ್‌ನಲ್ಲಿ ನಡೆಯಲಿರೋ 2ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಭರ್ಜರಿ ತಯಾರಿ ನಡೆಸಿಕೊಂಡಿದೆ. ಈ ಮಧ್ಯೆ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಜಾಕ್ ಕ್ರಾವ್ಲೆ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಟೆಸ್ಟ್ ಸೋತ ಬಳಿಕ ಮಾತಾಡಿದ ಜಾಕ್ ಕ್ರಾವ್ಲೆ, ನಾವು ರಿಸಲ್ಟ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಫೋಕಸ್ ಯಾವಾಗಲೂ ಎಂಟರ್ಟೈನ್ಮೆಂಟ್ ಮೇಲೆ ಎಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಜಾಕ್ ಕ್ರಾವ್ಲೆ ಈ ಹೇಳಿಕೆ ನೀಡಿದ್ದು, ಭಾರೀ ವೈರಲ್ ಆಗಿದೆ.
ರಿಸಲ್ಟ್ ಬಗ್ಗೆ ನಮಗೆ ಚಿಂತೆ ಇಲ್ಲ. ನಾವು ಯಾವಾಗಲೂ ಎಂಟರ್ಟೈನ್ಮೆಂಟ್ ನೀಡುವುದರ ಬಗ್ಗೆ ಚರ್ಚೆ ಮಾಡುತ್ತೇವೆ. ನಮ್ಮ ಆಟ ನಾವು ಆಡುತ್ತೇವೆ. ಸೋಲು ಗೆಲುವಿನ ಬಗ್ಗೆ ಆಲೋಚನೆ ಮಾಡಲ್ಲ ಎಂದರು. ಈ ಮೂಲಕ ಟೀಕೆ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟರು.
ಇಂಗ್ಲೆಂಡ್ ಟೀಂ ಪ್ರದರ್ಶನದ ಬಗ್ಗೆ ಕ್ರಿಕೆಟ್ ಪಂಡಿತರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ನಾವು ನಮ್ಮ ಆಟ ಆಡಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ಆಟದ ಶೈಲಿಯನ್ನು ನಾವು ಬದಲಿಸುವುದಿಲ್ಲ ಎಂದಿದೆ ಇಂಗ್ಲೆಂಡ್ ಟೀಂ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ