Advertisment

ಸಿಎಂ ಸಿದ್ದರಾಮಯ್ಯ ಆಪ್ತ ಜಮೀರ್​ ಅಹ್ಮದ್​​ಗೂ ಸಂಕಷ್ಟ; ಏನಿದು ಪ್ರಕರಣ..?

author-image
Ganesh
Updated On
ಸಿಎಂ ಸಿದ್ದರಾಮಯ್ಯ ಆಪ್ತ ಜಮೀರ್​ ಅಹ್ಮದ್​​ಗೂ ಸಂಕಷ್ಟ; ಏನಿದು ಪ್ರಕರಣ..?
Advertisment
  • ಸಿಎಂ ಸಮರ್ಥಿಸಿಕೊಳ್ಳೋ ಭರದಲ್ಲಿ ಸಚಿವ ಜಮೀರ್ ಯಡವಟ್ಟು
  • ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಸಿದ್ಧತೆ
  • ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿರುವ ಟಿ.ಜೆ ಅಬ್ರಾಹಂ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಕೇಸ್​ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ವಿಚಾರದಲ್ಲಿ ಸಿದ್ದರಾಮಯ್ಯರನ್ನು ಸಮರ್ಥಿಸಿಕೊಂಡಿದ್ದ ಸಚಿವ ಜಮೀರ್ ಅಹ್ಮದ್​ಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

Advertisment

ಸಿಎಂ ಸಮರ್ಥಿಸಿಕೊಳ್ಳೋ ಭರದಲ್ಲಿ ಸಚಿವ ಜಮೀರ್ ಯಡವಟ್ಟು ಹೇಳಿಕೆ ನೀಡಿದ್ದರು. ರಾಜ್ಯಪಾಲರು ಪ್ರಾಸಿಕ್ಯೂಶನ್​ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ಅರ್ಜಿಯನ್ನು ವಜಾ ಮಾಡಿತ್ತು. ಈ ಬೆನ್ನಲ್ಲೇ ಮಾತನಾಡಿದ್ದ ಜಮೀರ್, ‘ಹೈಕೋರ್ಟ್​​ ಆದೇಶ ಪೊಲಿಟಿಕಲ್ ಜಡ್ಜ್​ಮೆಂಟ್’ ಎಂದಿದ್ದರು.

ಇದನ್ನೂ ಓದಿ:ಪತಿಗೆ ನಿದ್ರೆ ಮಾತ್ರೆ ಹಾಕಿ ಪ್ರಿಯಕರನ ಜೊತೆ ದೈಹಿಕ ಸಂಬಂಧ -ಕೊನೆಗೂ ಬಯಲಾಯ್ತು ಸಾವಿನ ರಹಸ್ಯ

ಇದೀಗ ಸಚಿವ ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಆರ್​ಟಿಐ ಕಾರ್ಯಕರ್ತ ಟಿಜೆ ಅಬ್ರಾಹಂ ಮುಂದಾಗಿದ್ದಾರೆ. ಇದಕ್ಕಾಗಿ ಸಕ್ಷಮ ಪ್ರಾಧಿಕಾರದ ಅನುಮತಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನ್ಯಾಯಾಂಗ ನಿಂದನೆ ಕಾಯ್ದೆ ಸೆ 15(1)ಬಿ ಅಡಿ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ರಾಜ್ಯ ಆಡ್ವೊಕೇಟ್ ಜನರಲ್ ರವರಿಗೆ ಅಬ್ರಾಹಂ ಪತ್ರ ಕೂಡ ಬರೆದಿದ್ದು, ಹೈಕೋರ್ಟ್ ಮುಂದೆ ಕೇಸ್ ದಾಖಲಿಸಲು ಅನುಮತಿ ಕೋರಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment