newsfirstkannada.com

ಇನ್ಮುಂದೆ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ; ಸಚಿವ ಜಮೀರ್ ಖಾನ್​​​​​​ ಆದೇಶ

Share :

29-08-2023

    ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಎಂದು ಜಮೀರ್​ ಆದೇಶ

    ಸಚಿವ ಜಮೀರ್​ ಅಹ್ಮದ್​ ಖಾನ್​ಗೆ ಕನ್ನಡಿಗರಿಂದ ಭಾರೀ ಮೆಚ್ಚುಗೆ

    ಜಮೀರ್ ಖಾನ್​​​​ ಕನ್ನಡ ಪರ ನಿಲುವನ್ನು ಕೊಂಡಾಡಿದ ಕನ್ನಡಿಗರು!

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆದ್ದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಬದಲಿಗೆ ಇಂಗ್ಲೀಷ್​​ನಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದರು. ಸಚಿವ ಜಮೀರ್ ನಡೆಗೆ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಕೂಡಲೇ ಎಚ್ಚೆತ್ತ ಜಮೀರ್​​ ‘ನಾನು ಮೊದಲು ಕನ್ನಡಿಗ ಆಮೇಲೆ ಮುಸ್ಲಿಂ ಎಂದು ಎಲ್ಲವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು. ಅಂದು ಆಕ್ರೋಶ ಹೊರಹಾಕಿದ್ದ ಕನ್ನಡಿಗರೇ ಇಂದು ಸಚಿವ ಜಮೀರ್​ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಜಮೀರ್​​​ ತೆಗೆದುಕೊಂಡ ಕನ್ನಡಪರ ನಿಲುವು.

ಹೌದು, ಇನ್ಮುಂದೆ ಮದರಸಾಗಳಲ್ಲಿ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ಸೇರಿದಂತೆ ಎಲ್ಲಾ ವಿಷಯಗಳನ್ನು ಬೋಧಿಸಬೇಕು. ಅದರಲ್ಲೂ ಕನ್ನಡದ ಕಲಿಕೆ ಕಡ್ಡಾಯವಾಗಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ. ಸೋಮವಾರ ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಮೀರ್​​, ಮದರಸಾಗಳಲ್ಲಿ ಕಡ್ಡಾಯ ಕನ್ನಡ ಕಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದಾರೆ.

ಇನ್ನು, ವಕ್ಫ್ ಬೋರ್ಡ್‌ನಲ್ಲಿ 1,265 ಮದರಸಾಗಳು ಇವೆ. ಆರಂಭಿಕ ಹಂತದಲ್ಲಿ 100 ಮದರಸಾಗಳಲ್ಲಿ 5,000 ಮಕ್ಕಳಿಗೆ ಕನ್ನಡ ಬೋಧಿಸಿ ಪ್ರಯೋಗ ಮಾಡಬೇಕು. ನಂತರದಲ್ಲಿ ರಾಜ್ಯದ ಎಲ್ಲಾ ಮದರಸಾಗಳಲ್ಲಿ ಕನ್ನಡ ಕಲಿಸಲೇಬೇಕು. ಇದಕ್ಕೆ ಅಗತ್ಯವಿರೋ ಪ್ರಸ್ತಾವನೆ ಸಿದ್ಧಪಡಿಸಿ ಎಂದಿದ್ದಾರೆ.

ಜಮೀರ್​ ನಡೆಗೆ ಮೆಚ್ಚುಗೆ

ಸದ್ಯ ಜಮೀರ್ ನಡೆಗೆ ಕನ್ನಡಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಲು ಇಷ್ಟು ವರ್ಷಗಳು ಬೇಕಾಯ್ತು. ಈ ನಿರ್ಧಾರ ತೆಗೆದುಕೊಂಡ ಜಮೀರ್ ಅಹ್ಮದ್​​ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ಮುಂದೆ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ; ಸಚಿವ ಜಮೀರ್ ಖಾನ್​​​​​​ ಆದೇಶ

https://newsfirstlive.com/wp-content/uploads/2023/08/Zameer-Khan-1.jpg

Load More