newsfirstkannada.com

ರಶ್ಮಿಕಾ ಮಂದಣ್ಣ ಡೀಪ್ ಫೇಕ್‌ನಲ್ಲಿರೋದು ನಾನೇ ಆದ್ರೆ.. ಜರಾ ಪಟೇಲ್ ಶಾಕಿಂಗ್‌ ಹೇಳಿಕೆ!

Share :

07-11-2023

    ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋದಲ್ಲಿರೋದು ಜರಾ ಪಟೇಲ್

    ನನ್ನ ವಿಡಿಯೋ ಬಳಸಿಕೊಂಡು ಡೀಪ್ ಫೇಕ್ ವಿಡಿಯೋ ಸೃಷ್ಟಿಸಿದ್ದಾರೆ

    ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡೋದು ತಪ್ಪಾ?

ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ರಶ್ಮಿಕಾ ಮಂದಣ್ಣ ಅವರ ಪರವಾಗಿ ನಿಂತಿರುವ ಅನೇಕ ಬಾಲಿವುಡ್, ಟಾಲಿವುಡ್‌ ಸೆಲಬ್ರಿಟಿಗಳು ಇದರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ ಎಂದು ಒತ್ತಾಯಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಫೇಕ್‌ ವಿಡಿಯೋ ವೈರಲ್ ಆದ ಬಳಿಕ ಅಸಲಿ ವಿಡಿಯೋದಲ್ಲಿರೋ ಜರಾ ಪಟೇಲ್ ತನ್ನ ಹೇಳಿಕೆಯನ್ನ ಬಿಡುಗಡೆ ಮಾಡಿದ್ದಾರೆ. ಹೌದು.. ಅಸಲಿಗೆ ಡೀಪ್‌ ಫೇಕ್ ವಿಡಿಯೋದಲ್ಲಿರೋದು ಜರಾ ಪಟೇಲ್. ಇವರು ಭಾರತೀಯ ಮೂಲದವರಾಗಿದ್ದು ಸದ್ಯ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. ಇವ್ರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳನ್ನ ನೀಡುವ ಸೋಷಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್‌. ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಜರಾ ಪಟೇಲ್ 4 ಲಕ್ಷದ 52 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋದಲ್ಲಿದ್ದ ಜರಾ ಪಟೇಲ್ ಅವರು ತನ್ನ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸದ್ಯ ಏನಾಗುತ್ತಿದೆಯೋ ಅದರಿಂದ ನನಗೆ ಬೇಸರವಾಗಿದೆ. ನನ್ನ ವಿಡಿಯೋ ಬಳಸಿಕೊಂಡು ಡೀಪ್ ಫೇಕ್ ವಿಡಿಯೋ ಸೃಷ್ಟಿ ಮಾಡಿರೋದು ನನ್ನ ಗಮನಕ್ಕೆ ಬಂದಿದೆ. ಫೇಮಸ್‌ ಬಾಲಿವುಡ್ ನಟಿಯ ಮುಖದ ವಿಡಿಯೋ ಬಳಸಿಕೊಂಡು ಯಾರೋ ಈ ವಿಡಿಯೋ ಸೃಷ್ಟಿ ಮಾಡಿದ್ದಾರೆ. ಈ ಡೀಪ್ ಫೇಕ್ ವಿಡಿಯೋದಲ್ಲಿ ನಾನು ಭಾಗಿಯಾಗಿಲ್ಲ ಎಂದಿದ್ದಾರೆ.

ಈ ಡೀಪ್ ಫೇಕ್‌ ವಿಡಿಯೋದಿಂದ ನಾನು ಭಾರೀ ನೋವು ಹಾಗೂ ಬೇಸರಕ್ಕೊಳಗಾಗಿದ್ದೇನೆ. ನಾನು ಮಹಿಳೆಯರು, ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತಳಾಗಿದ್ದೇನೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುವ ಮಹಿಳೆ, ಹುಡುಗಿಯರ ಭವಿಷ್ಯದ ಬಗ್ಗೆ ಯೋಚನೆಯಾಗಿದೆ.

ಇನ್ನು, ಇಂಟರ್‌ನೆಟ್‌ನಲ್ಲಿ ಇರುವುದೆಲ್ಲ ಅಸಲಿಯಲ್ಲ. ಇಂಟರ್‌ನೆಟ್‌ನಲ್ಲಿ ನೀವು ನೋಡುವುದನ್ನು ಫ್ಯಾಕ್ಟ್ ಚೆಕ್ ಮಾಡಿ ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಜರಾ ಪಟೇಲ್ ಅವರು ಪೋಸ್ಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಶ್ಮಿಕಾ ಮಂದಣ್ಣ ಡೀಪ್ ಫೇಕ್‌ನಲ್ಲಿರೋದು ನಾನೇ ಆದ್ರೆ.. ಜರಾ ಪಟೇಲ್ ಶಾಕಿಂಗ್‌ ಹೇಳಿಕೆ!

https://newsfirstlive.com/wp-content/uploads/2023/11/Rashmika-Mandanna-Zara-Patel.jpg

Load More