newsfirstkannada.com

ಖಗೋಳದಲ್ಲಿ ಅಚ್ಚರಿ ವಿಸ್ಮಯ..! ಇವತ್ತು ನಮ್ಮ ನೆರಳು ನಮಗೇ ಕಾಣಿಸಲಿಲ್ಲ.. ಶೂನ್ಯ ನೆರಳಿನ ವಿಡಿಯೋ ಇಲ್ಲಿದೆ

Share :

18-08-2023

    ನಮಗೆ ಕಾಣಿಸದ ಅಪರೂಪದ ಖಗೋಳ ವಿದ್ಯಮಾನ

    ಇದೊಂದು ವಿಸ್ಮಯ ಆಗಾಗ ಭೂಮಿ ಮೇಲೆ ನಡೆಯುತ್ತೆ

    ವರ್ಷದಲ್ಲಿ 2 ಬಾರಿ ಸಿಲಿಕಾನ್ ಸಿಟಿಯಲ್ಲಿ ಶೂನ್ಯ ನೆರಳು

ಬೆಂಗಳೂರು: ಸರಿಯಾಗಿ 12 ಗಂಟೆ 24 ನಿಮಿಷಕ್ಕೆ ಸಿಲಿಕಾನ್​ ಸಿಟಿಯಲ್ಲಿ ಶೂನ್ಯ ನೆರಳು 2 ನಿಮಿಷ ಗೋಚರವಾಗಿದೆ ಎಂದು ಜವಾಹರ್ ಲಾಲ್ ತಾರಾಗಣ ಮಾಹಿತಿ ನೀಡಿದೆ.

ಈ ಬಗ್ಗೆ ಹಿರಿಯ ವಿಜ್ಞಾನಿ ಆನಂದ್ ಅವರು ಮಾಹಿತಿ ಕೊಟ್ಟಿದ್ದು, ಇದು ಸಾಮಾನ್ಯವಾಗಿ ಎಲ್ಲ ಪ್ರದೇಶದಲ್ಲಿಯೂ ಈ ರೀತಿಯ ವಿಸ್ಮಯ ನಡೆಯುತ್ತಲೇ ಇರುತ್ತದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಒಂದೇ ವರ್ಷದಲ್ಲಿ 2 ಬಾರಿ ಶೂನ್ಯ ನೆರಳು ಗೋಚರವಾಗಿರುವುದು ವಿಶೇಷವಾಗಿದೆ. ಇಂದು ಸರಿಯಾಗಿ 12 ಗಂಟೆ 24 ನಿಮಿಷಕ್ಕೆ ಝೀರೋ ಶಾಡೋ 2 ನಿಮಿಷ ಕಾಣಿಸಿಕೊಂಡಿದೆ. ಪ್ರತಿ ನಿತ್ಯವು ಸೂರ್ಯ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಹೋದಾಗ ನಮ್ಮ ನೆರಳು ಬೀಳುವ ಜಾಗ ಸಹ ಬದಲಾಗುತ್ತದೆ ಎಂದರು.

ಇದೇ ವರ್ಷ ಏಪ್ರಿಲ್​ 25 ರಂದು ಕೂಡ ಬೆಂಗಳೂರಿನಲ್ಲಿ ಶೂನ್ಯ ನೆರಳು ಸಂಭವಿಸಿತ್ತು. ಅದೇ ಇವತ್ತು ಕೂಡ ಝೀರೋ ಶ್ಯಾಡೋ ಕಾಣಿಸಿಕೊಂಡಿದೆ. ಝೀರೋ ಶ್ಯಾಡೋ ದಿನದಂದು ಸೂರ್ಯ ನೇರವಾಗಿ ನಮ್ಮ ತಲೆಯ ಮೇಲೆ ಇರುತ್ತಾನೆ. ಈ ಸಮಯದಲ್ಲಿ ಭೂಮಿಯ ಮೇಲ್ಮೈಯಲ್ಲಿ ಯಾವುದೇ ನೆರಳು ಕಾಣಿಸದು. ಸೂರ್ಯನು ಆಕಾಶದಲ್ಲಿ ತನ್ನ ಅತ್ಯಧಿಕ ಎತ್ತರಕ್ಕೆ ತಲುಪುವಾಗ ಮತ್ತು ನಮ್ಮ ಮೇಲೆ ನೇರವಾಗಿ ಇರುವಾಗ ಈ ವಿದ್ಯಮಾನ ಸಂಭವಿಸುತ್ತದೆ.

ಏನಿದು ಶೂನ್ಯ ನೆರಳು ?

  • ಶೂನ್ಯ ನೆರಳು ದಿನವು +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವಿನ ಸ್ಥಳಗಳಲ್ಲಿ ವರ್ಷಕ್ಕೆ 2 ಬಾರಿ ಸಂಭವಿಸುವ ಖಗೋಳ ವಿದ್ಯಮಾನ
  • ಈ ದಿನ ನಮ್ಮ ನೇರಳು ನಮಗೆ ಕಾಣಿಸುವುದಿಲ್ಲ
  • ಸೂರ್ಯ ಸರಿಯಾಗಿ ನಮ್ಮ ತಲೆಯ ಮೇಲೆ ಇರುತ್ತಾನೆ
  • ವ್ಯಕ್ತಿ ತಲೆಯ ಮೇಲೆ ನೇರವಾಗಿ ಸೂರ್ಯನ ಬೆಳಕು ಬೀಳಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖಗೋಳದಲ್ಲಿ ಅಚ್ಚರಿ ವಿಸ್ಮಯ..! ಇವತ್ತು ನಮ್ಮ ನೆರಳು ನಮಗೇ ಕಾಣಿಸಲಿಲ್ಲ.. ಶೂನ್ಯ ನೆರಳಿನ ವಿಡಿಯೋ ಇಲ್ಲಿದೆ

https://newsfirstlive.com/wp-content/uploads/2023/08/ZERO_SHADO_1.jpg

Load More