newsfirstkannada.com

Breaking News: ಚಿಕ್ಕಬಳ್ಳಾಪುರದಲ್ಲಿ ಡೇಂಜರಸ್ ಝಿಕಾ ವೈರಸ್ ಪತ್ತೆ; ಗಾಬರಿಗೆ ಬಿದ್ದ ಜಿಲ್ಲೆಯ ಜನ

Share :

02-11-2023

    ಸೊಳ್ಳೆ ಒಂದರಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ

    ಝಿಕಾ ವೈರಸ್‌ ಸೊಳ್ಳೆಗಳಿಂದ ಹರಡುವ ಕಾಯಿಲೆ

    ಝಿಕಾ ವೈರಸ್​​ನ ಲಕ್ಷಣಗಳು ಏನು..?

ಚಿಕ್ಕಬಳ್ಳಾಪುರದಲ್ಲಿ ಡೇಂಜರಸ್ ಝಿಕಾ ವೈರಸ್ ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಶಿಡ್ಲಘಟ್ಟ ತಾಲೂಕಿನ ತಲಕಾಯಬೆಟ್ಟ ಗ್ರಾಮದ ಬಳಿ ಸೊಳ್ಳೆ ಒಂದರಲ್ಲಿ ಝಿಕಾ ವೈರಸ್ ಕಂಡುಬಂದಿದೆ.

ಕೀಟಶಾಸ್ತ್ರಜ್ಞರು ಪರೀಕ್ಷಿಸಿದ ಸೊಳ್ಳೆಯಲ್ಲಿ ಜಿಕಾ ವೈರಸ್ ಪತ್ತೆಯಾಗಿದೆ. ಈಡಿಸ್ ಸೊಳ್ಳೆ (Aedes mosquito) ಕಡಿತದಿಂದ ಝಿಕಾ ವೈರಸ್ ಉಂಟಾಗುತ್ತದೆ. ಜ್ವರ, ಕೆಮ್ಮು ಚರ್ಮದ ಮೇಲೆ ದದ್ದುಗಳು, ಮಾಂಸ ಖಂಡಗಳ ಸೆಳೆತ ಮೈಕೈ ನೋವು ಝಿಕಾದ ಲಕ್ಷಣಗಳಾಗಿದೆ. ಝಿಕಾ ವೈರಸ್ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ನ್ಯೂಸ್​ಫಸ್ಟ್​ ಜೊತೆ ಮಾತನಾಡಿರುವ ಡಿಹೆಚ್ಒ ಡಾ.ಎಸ್.ಎಸ್ ಮಹೇಶ್.. ಪ್ರಕರಣ ಸಂಬಂಧ ತಲಕಾಯಬೆಟ್ಟ, ಬಚ್ಚನಹಳ್ಳಿ, ವೆಂಕಟಾಪುರ ದಿಬ್ಬೂರಹಳ್ಳಿ ಗ್ರಾಮಗಳಲ್ಲಿ ಗರ್ಭಿಣಿ‌ ಮಹಿಳೆಯರಿಗೆ ರಕ್ತ ಪರೀಕ್ಷೆ ನಡೆಸುವಂತೆ ಸೂಚಿಸಿದ್ದೇವೆ ಎಂದಿದ್ದಾರೆ.

ಜೊತೆಗೆ ಆ ಗ್ರಾಮದ ಸುತ್ತುಮುತ್ತ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಝಿಕಾ ವೈರಸ್ ಪತ್ತೆ ಸಂಬಂಧ ರಾಜ್ಯಾದ್ಯಂತ ಸುಮಾರು 100 ಸ್ಯಾಂಪಲ್​ಗಳನ್ನು ಸಂಗ್ರಹಿಸಲಾಗಿತ್ತು. ಅದರಲ್ಲಿ 6 ಚಿಕ್ಕಬಳ್ಳಾಪುರದಿಂದ ಸಂಗ್ರಹ ಮಾಡಲಾಗಿತ್ತು. 6 ಸ್ಯಾಂಪಲ್​ಗಳಲ್ಲಿ ಐದು ನೆಗೆಟೀವ್ ಬಂದಿದೆ. ಅಕ್ಟೋಬರ್ 25 ರಂದು ಬಂದ ವರದಿಯಲ್ಲಿ ಒಂದು ಪಾಸಿಟಿವ್ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್​​ನಲ್ಲಿ ಝಿಕಾ ವೈರಸ್

ಇನ್ನು ತೀವ್ರ ಜ್ವರದಿಂದ ಬಳಲುತ್ತಿದ್ದ ಮೂವರು ರೋಗಿಗಳ ಸ್ಯಾಂಪಲ್​​ಗಳನ್ನು ವೈಜ್ಞಾನಿಕ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸದ್ಯ ಅವರ ಆರೋಗ್ಯ ಚೆನ್ನಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 1947ರಲ್ಲಿ ಉಗಾಂಡದಲ್ಲಿ ಮೊದಲ ಬಾರಿಗೆ ಝಿಕಾ ವೈರಸ್ ಪತ್ತೆಯಾಗಿತ್ತು. ಕಳೆದ ಡಿಸೆಂಬರ್​ನಲ್ಲಿ ರಾಜ್ಯದ ರಾಯಚೂರಿನ ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ಇರೋದು ದಾಖಲಾಗಿತ್ತು. ಅದಾದ ನಂತರ ಕರ್ನಾಟ ಸರ್ಕಾರ ಝಿಕಾ ವೈರಸ್ ತಡೆಗೆ ಸೂಕ್ತ ಕ್ರಮ ತೆಗೆದುಕೊಂಡಿತ್ತು. ಅದೇ ಡಿಸೆಂಬರ್​ನಲ್ಲಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರಲ್ಲೂ ಝಿಕಾ ವೈರಸ್ ಪತ್ತೆಯಾಗಿತ್ತು.

ಝಿಕಾ ವೈರಸ್‌ ಸೊಳ್ಳೆಗಳಿಂದ ಹರಡುವ ಕಾಯಿಲೆಯಾಗಿದೆ. ಪ್ರಾರಂಭದಲ್ಲಿ ಸೌಮ್ಯ ಲಕ್ಷಣ ತೋರಲಿದ್ದು, ನಂತರದಲ್ಲಿ ಜೀವ ತೆಗೆಯುವ ಮಾರಣಾಂತಿಕ ರೋಗವಾಗಿ ಬದಲಾಗುತ್ತದೆ. ರೋಗದ ಲಕ್ಷಣಗಳು ವಾರದೊಳಗೆ ಕಣ್ಮರೆಯಾಗುತ್ತವೆ. ಗರ್ಭಿಣಿ ಸೋಂಕಿಗೆ ಒಳಗಾದರೆ ಹುಟ್ಟಲಿರುವ ಮಗುವಿನ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಚಿಕ್ಕಬಳ್ಳಾಪುರದಲ್ಲಿ ಡೇಂಜರಸ್ ಝಿಕಾ ವೈರಸ್ ಪತ್ತೆ; ಗಾಬರಿಗೆ ಬಿದ್ದ ಜಿಲ್ಲೆಯ ಜನ

https://newsfirstlive.com/wp-content/uploads/2023/11/ZIKA.jpg

Load More