newsfirstkannada.com

ಲೆಜೆಂಡರಿ ಕ್ರಿಕೆಟರ್​ ಹೀತ್ ಸ್ಟ್ರೀಕ್ ನಿಧನಕ್ಕೆ ಕಂಬನಿ; ಸೆಹ್ವಾಗ್, ಲಕ್ಷ್ಮಣ್, ಹರ್ಭಜನ್ ಸಿಂಗ್ ಹೇಳಿದ್ದೇನು?

Share :

Published September 3, 2023 at 2:58pm

    ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟರ್ ಹೀತ್ ಸ್ಟ್ರೀಕ್

    ಸ್ಟ್ರೀಕ್​ ನಿಧನವನ್ನು ಕನ್ಫರ್ಮ್​ ಮಾಡಿದ ಹೆಂಡತಿ ನಾಡಿನಾ

    ಲೆಜೆಂಡರಿ ಕ್ರಿಕೆಟರ್​ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟರ್ಸ್​​

ಬಹು ಕಾಲದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಜಿಂಬಾಬ್ವೆಯ ಲೆಜೆಂಡರಿ ಕ್ರಿಕೆಟರ್​ ಹೀತ್ ಸ್ಟ್ರೀಕ್ ಅವರು ಇಂದು ನಿಧನ ಹೊಂದಿದ್ದಾರೆ. ಸದ್ಯ ಇವರ ಸಾವಿನ ಬಗ್ಗೆ ಸ್ವತಃ ಅವರ ಪತ್ನಿ ನಾಡಿನಾ ಅವರೇ ಫೇಸ್​ಬುಕ್​ ಮೂಲಕ ಅಧಿಕೃತ ಮಾಹಿತಿ ನೀಡಿ ಭಾವುಕರಾಗಿದ್ದಾರೆ.

ಜಿಂಬಾಬ್ವೆ ಕ್ರಿಕೆಟ್​ ತಂಡದಲ್ಲಿ ಹೀತ್​ ಸ್ಟ್ರೀಕ್ ಅವರು ಅಮೋಘ ಪ್ರದರ್ಶನ ನೀಡಿದ ಆಲ್​ ರೌಂಡರ್ ಆಗಿದ್ದರು. ಇದುವರೆಗೂ ಸ್ಟ್ರೀಕ್ ಮಾಡಿದ ಕೆಲ ದಾಖಲೆಗಳು ಜಿಂಬಾಬ್ವೆ ಕ್ರಿಕೆಟ್​ ವಲಯದಲ್ಲಿ ಯಾರೂ ಬ್ರೇಕ್ ಮಾಡಲು ಆಗಿಲ್ಲ. ಸದ್ಯ ಇವರ ಸಾವಿನಿಂದ ಪತ್ನಿ, ಕುಟುಂಬಸ್ಥರು ಮೌನಕ್ಕೆ ಜಾರಿದ್ದಾರೆ. ಹೀತ್​ ಸ್ಟ್ರೀಕ್ ಸಾವಿನ ಹಿನ್ನೆಲೆಯಲ್ಲಿ ವಿಶ್ವದ ಫೇಮಸ್ ಕ್ರಿಕೆಟ್ ಆಟಗಾರರು ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: Heath Streak: ಲೆಜೆಂಡರಿ ಕ್ರಿಕೆಟರ್​ ಹೀತ್ ಸ್ಟ್ರೀಕ್ ನಿಧನ; ಅಧಿಕೃತವಾಗಿ ಮಾಹಿತಿ ನೀಡಿದ ಪತ್ನಿ

ಇನ್ನು ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್ ತಮ್ಮ ಅಧಿಕೃತ ಎಕ್ಸ್​ನಲ್ಲಿ ಸ್ಟ್ರೀಕ್​ಗೆ ಸಂತಾಪ ಸೂಚಿಸಿದ್ದಾರೆ. ಹೀತ್ ಸ್ಟ್ರೀಕ್ ನಿಧನ ಹೊಂದಿರುವುದು ತುಂಬಾ ನೋವಿನ ಸಂಗತಿ. 90 ದಶಕದಲ್ಲಿ ಲೆಜೆಂಡರಿ ಆಟಗಾರನಾಗಿದ್ದರು ಎಂದಿದ್ದಾರೆ.

ಹರ್ಭಜನ್​ ಸಿಂಗ್ ಎಕ್ಸ್​​ನಲ್ಲಿ ಸಂತಾಪ ಸೂಚಿಸಿದ್ದು, ಸ್ಟ್ರೀಕ್ ಶ್ರೇಷ್ಠ ಆಟಗಾರ. ಮೃದು ಮನಸ್ಸಿನ ವ್ಯಕ್ತಿ. ಇನ್ನು ಚಿಕ್ಕ ವಯಸ್ಸಿನಲ್ಲಿ ಅವರು ದೂರವಾಗಿರುವುದು ನೋವುಂಟು ಮಾಡಿದೆ. ಅವರಿಗೆ ಶಾಂತಿ ಕರುಣಿಸಲೆಂದು ಹೇಳಿದ್ದಾರೆ.

ಜಿಂಬಾಬ್ವೆ ಕ್ರಿಕೆಟ್​ ಟೀಮ್ ಅನ್ನು ಅದ್ಭುತವಾಗಿ ಮುನ್ನಡೆಸಿದ ಹೀತ್​ ಸ್ಟ್ರೀಕ್​ ಇಂದು ನಮ್ಮೊಂದಿಗಿಲ್ಲ. ಅವರ ಕುಟುಂಬ ಈ ನೋವಿನಿಂದ ಬೇಗ ಹೊರ ಬರಲಿ. ದೇವರು ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

ಮಾಜಿ ಕ್ರಿಕೆಟರ್​ ಹೀತ್ ಸ್ಟ್ರೀಕ್ ನಿಧನ ಸುದ್ದಿ ತಿಳಿದು ಕೋಲ್ಕತ್ತಾ ನೈಟ್ ರೈಡರ್ಸ್​ ಪ್ರಾಂಚೈಸಿ ಕೂಡ ಸಂತಾಪ ಸೂಚಿಸಿದೆ.

ನ್ಯೂಜಿಲೆಂಡ್​ ವಿರುದ್ಧ ಮ್ಯಾಚ್​ನಲ್ಲಿ ಹೀತ್​ ಸ್ಟ್ರೀಕ್ ಅವರ ಬ್ಯಾಟ್​ನಿಂದ ಸಿಡಿದ ಅಮೋಘವಾದ ಸಿಕ್ಸರ್​ಗಳನ್ನು ಈ ಕೆಳಗಿನ ವಿಡಿಯೋದಲ್ಲಿ ವೀಕ್ಷಿಸಬಹುದು. ಇವರು ಒಳ್ಳೆಯ ಆಲ್ ರೌಂಡರ್​ ಕೂಡ ಆಗಿದ್ದರು.

ಇದು ಇಷ್ಟೇ ಅಲ್ಲದೇ, ಹೀತ್ ಸ್ಟ್ರೀಕ್ ನಿಧನದ ಹಿನ್ನೆಲೆಯಲ್ಲಿ ಜಿಂಬಾಬ್ವೆಯ ಸಹ ಆಟಗಾರರು, ಫ್ರೆಂಡ್ಸ್​ ಹಾಗೂ ಕುಟುಂಬದ ಹಿತೈಷಿಗಳು ಸೇರಿದಂತೆ ವಿಶ್ವದ ಕ್ರಿಕೆಟಿಗರು ಸಂತಾಪ ಸೂಚಿಸುತ್ತಿದ್ದಾರೆ. ಜಿಂಬಾಬ್ವೆ ಟೀಮ್​ ಅನ್ನು  90ರ ದಶಕದಲ್ಲಿ ಮಹತ್ತರ ಘಟ್ಟಕ್ಕೆ ತಂದು ನಿಲ್ಲಿಸುವಲ್ಲಿ ಹೀತ್ ಸ್ಟ್ರೀಕ್ ಪ್ರಮುಖ ಪಾತ್ರ ವಹಿಸಿದ್ದರು. ಕೆಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಹೀಗಾಗಿ ಇವರನ್ನು ಕೆಲ ತಂಡಗಳು ಕೋಚ್​ ಆಗಿ ನೇಮಕ ಮಾಡಿಕೊಂಡಿದ್ದವು ಎಂದು ಹೇಳಲಾಗ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಲೆಜೆಂಡರಿ ಕ್ರಿಕೆಟರ್​ ಹೀತ್ ಸ್ಟ್ರೀಕ್ ನಿಧನಕ್ಕೆ ಕಂಬನಿ; ಸೆಹ್ವಾಗ್, ಲಕ್ಷ್ಮಣ್, ಹರ್ಭಜನ್ ಸಿಂಗ್ ಹೇಳಿದ್ದೇನು?

https://newsfirstlive.com/wp-content/uploads/2023/09/Heath_Streak-2.jpg

Load More