ಮೊನ್ನೆಯಷ್ಟೇ ನಿಧನ ಹೊಂದಿದ್ದ ಎಂದು ಸುಳ್ಳು ಸುದ್ದಿ
ಆಲ್ರೌಂಡರ್ ಆಗಿ ತಂಡಕ್ಕೆ ಭಾರೀ ಕೊಡುಗೆ ನೀಡಿದ್ರು
ಇಂದು ಅಧಿಕೃತವಾಗಿ ಮಾಹಿತಿ ನೀಡಿದ ಕುಟುಂಬಸ್ಥರು
ಜಿಂಬಾಬ್ವೆಯ ಲೆಜೆಂಡರಿ ಕ್ರಿಕೆಟರ್ ಹಾಗೂ ಬಾಂಗ್ಲಾದ ಕೋಚ್ ಆಗಿ ಕೆಲಸ ಮಾಡಿದ್ದ ಹೀತ್ ಸ್ಟ್ರೀಕ್ (49) ಅವರು ಇಂದು ನಿಧನವಾಗಿದ್ದಾರೆ. ಈ ಬಗ್ಗೆ ಅವರ ಪತ್ನಿಯೇ ಅಧಿಕೃತವಾಗಿ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ ಹೀತ್ ಸ್ಟ್ರೀಕ್ ಅವರ ಪತ್ನಿ ನಾಡಿನಾ, ನನ್ನ ಜೀವನದ ಅತ್ಯಂತ ಪ್ರೀತಿ ಮತ್ತು ನನ್ನ ಸುಂದರ ಮಕ್ಕಳ ತಂದೆಯಾದ ಹೀತ್ ಸ್ಟ್ರೀಕ್ರನ್ನ ದೇವರು ಕರೆದುಕೊಂಡು ಹೋಗಿದ್ದಾನೆ. ಅವರು ಕೊನೆ ದಿನಗಳನ್ನು ಪ್ರೀತಿಪಾತ್ರರ ಜೊತೆ ಕಳೆಯಲು ಇಚ್ಚಿಸಿದ್ದರು. ಆದ್ರೆ ಅಷ್ಟರೋಳಗೆ ಕಣ್ಣುಮುಚ್ಚಿದ್ದಾರೆ ಎಂದು ಫೇಸ್ಬುಕ್ನಲ್ಲಿ ನಾಡಿನಾ ಬರೆದುಕೊಂಡಿದ್ದಾರೆ. ಅವರು ನಿಧನದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರು, ಸಹ ಆಟಗಾರರು ಸಂತಾಪ ಸೂಚಿಸುತ್ತಿದ್ದಾರೆ.
ಲೆಜೆಂಡರಿ ಕ್ರಿಕೆಟರ್ ಹೀತ್ ಸ್ಟ್ರೀಕ್ ಅವರು ಕಳೆದ 6 ತಿಂಗಳಿನಿಂದ ಮಾರಾಣಾಂತಿಕ ಕ್ಯಾನ್ಸ್ರ್ನಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೂಡ ದಾಖಲಾಗಿದ್ದರು. ಆದ್ರೆ ಇವು ಯಾವುದೇ ಫಲ ನೀಡದ ಕಾರಣ ಅವರು ಇಂದು ನಿಧನ ಹೊಂದಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಹೀತ್ ಸ್ಟ್ರೀಕ್ ಸಾವನ್ನಪ್ಪಿದ್ದಾರೆ ಎಂದು ಜಿಂಬಾಬ್ವೆಯ ಕ್ರಿಕೆಟರ್ ಹೆನ್ರಿ ಒಲೊಂಗಾ ಟ್ವಿಟರ್ನಲ್ಲಿ ಪೋಸ್ಟ್ ಹಾಕಿದ್ದರು. ಆದ್ರೆ ಅವಾಗ ಅವರು ಇನ್ನು ಜೀವಂತವಾಗಿದ್ದೇನೆ ಎಂದು ಹೇಳಿದ್ದರು. ಆದ್ರೆ ಈ ಬಾರಿ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬಸ್ಥರೇ ಅಧಿಕೃತವಾಗಿ ಹೇಳಿದ್ದಾರೆ.
A heart touching post by Heath Streak's wife.
Condolences to Heath Streak's family and friends. pic.twitter.com/HAk9AezeN8
— Mufaddal Vohra (@mufaddal_vohra) September 3, 2023
ಇನ್ನು ಜಿಂಬಾಬ್ವೆಯ ಲೆಜೆಂಡರಿ ಹೀತ್ ಸ್ಟ್ರೀಕ್ 65 ಟೆಸ್ಟ್, 189 ಏಕದಿನ ಮ್ಯಾಚ್ಗಳನ್ನು ಆಡಿದ್ದು ಒಟ್ಟು 4,933 ರನ್ಗಳನ್ನು ಗಳಿಸಿದ್ದಾರೆ. ಉತ್ತಮ ಆಲ್ರೌಂಡರ್ ಆದ ಇವರು ಎಲ್ಲ ವಿಧದ ಕ್ರಿಕೆಟ್ನಲ್ಲಿ 455 ವಿಕೆಟ್ಗಳನ್ನು ಉರುಳಿಸಿದ್ದಾರೆ. ಇವರು ಜಿಂಬಾಬ್ವೆ ಪರ ಏಕದಿನದಲ್ಲಿ 2,943 ರನ್ ಹಾಗೂ 239 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಲ್ಲದೇ ಟೆಸ್ಟ್ನಲ್ಲಿ 1,990 ರನ್ ಕಲೆ ಹಾಕಿದ್ದು 216 ವಿಕೆಟ್ಗಳನ್ನು ಗಳಿಸಿದ್ದರು. ಇನ್ನು ಟೆಸ್ಟ್ನಲ್ಲಿ 127 ರನ್ ಬಾರಿಸಿರುವುದು ವೈಯಕ್ತಿಕ ಅತಿ ಹೆಚ್ಚು ರನ್ ಆದ್ರೆ, ಏಕದಿನದಲ್ಲಿ 79 ರನ್ ವೈಯಕ್ತಿಕ ಗರಿಷ್ಟ ರನ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ