ಟಿ20 ಕ್ರಿಕೆಟ್ನಲ್ಲೇ ಇತಿಹಾಸ ಬರೆದ ಜಿಂಬಾಬ್ವೆ ಕ್ರಿಕೆಟ್ ಟೀಮ್
ನೇಪಾಳದ ದಾಖಲೆಯನ್ನೇ ಉಡೀಸ್ ಮಾಡಿದ ಜಿಂಬಾಬ್ವೆ ತಂಡ
ಅತ್ಯಧಿಕ ರನ್ ಕಲೆ ದಾಖಲೆಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಭಾರತ..!
ಇಂದು ನಡೆದ ಟಿ20 ವಿಶ್ವಕಪ್ ಪ್ರಾದೇಶಿಕ ಅರ್ಹತಾ ಸುತ್ತಿನ ಪಂದ್ಯವೊಂದರಲ್ಲಿ ಗ್ಯಾಂಬಿಯಾ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿದ್ದವು. ಈ ಮಹತ್ವದ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಕ್ರಿಕೆಟ್ ತಂಡವು ನಿಗದಿತ 20 ಓವರ್ಗಳಲ್ಲಿ ಬರೋಬ್ಬರಿ 344 ರನ್ ಕಲೆ ಹಾಕಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.
ಜಿಂಬಾಬ್ವೆ ಕ್ರಿಕೆಟ್ ತಂಡ ಟಿ20 ಕ್ರಿಕೆಟ್ ಇನ್ನಿಂಗ್ಸ್ವೊಂದರಲ್ಲಿ ಅತ್ಯಧಿಕ ರನ್ ಕಲೆ ಹಾಕೋ ಮೂಲಕ ವಿಶ್ವದಾಖಲೆ ಬರೆದಿದೆ. ಮಂಗೋಲಿಯಾ ವಿರುದ್ಧ ನೇಪಾಳ ಗಳಿಸಿದ್ದ 314 ರನ್‌ಗಳ ದಾಖಲೆಯನ್ನೇ ಜಿಂಬಾಬ್ವೆ ಕ್ರಿಕೆಟ್ ತಂಡ ಉಡೀಸ್ ಮಾಡಿದೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 297 ರನ್ ಕಲೆ ಹಾಕಿ 2ನೇ ಸ್ಥಾನದಲ್ಲಿತ್ತು. ಈಗ ಜಿಂಬಾಬ್ವೆ ಸಾಧನೆ ನಂತರ ಟೀಮ್ ಇಂಡಿಯಾ 3ನೇ ಸ್ಥಾನಕ್ಕೆ ಹೋಗಿದೆ.
ತ್ರಿಶತಕ ದಾಖಲಿಸಿದ ಜಿಂಬಾಬ್ವೆ
ಇನ್ನು, ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ತಂಡದ ಪರ ಓಪನಿಂಗ್ ಮಾಡಿದ ಬ್ರಿಯಾನ್ ಬೆನೆಟ್ ಕೇವಲ 26 ಎಸೆತಗಳಲ್ಲಿ 50 ರನ್ ಚಚ್ಚಿದ್ರು. ಇವರಿಗೆ ಸಾಥ್ ನೀಡಿದ ತಡಿವಾನಾಶೆ ಮರುಮಣಿ ಕೇವಲ 19 ಎಸೆತಗಳಲ್ಲಿ 62 ರನ್ ಸಿಡಿಸಿದ್ರು. ಬಳಿಕ ಕ್ರೀಸ್ಗೆ ಬಂದ ಸಿಕಂದರ್ ಕೇವಲ 33 ಎಸೆತಗಳಲ್ಲಿ ಶತಕವನ್ನು ಪೂರೈಸಿದ್ರು. ಕೊನೆಗೆ ರಾಝಾ ಮತ್ತು ಕ್ಲೈವ್ ಜೋಡಿ 40 ಎಸೆತಗಳಲ್ಲಿ 141 ರನ್‌ಗಳ ಜೊತೆಯಾಟ ಆಡಿತು. ನಿಗದಿತ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 344 ರನ್‌ಗಳ ವಿಶ್ವ ದಾಖಲೆ ಸ್ಕೋರ್ ಕಲೆ ಹಾಕಿತು.
ಅತೀ ಹೆಚ್ಚು ಸಿಕ್ಸರ್ ಸಿಡಿಸಿ ದಾಖಲೆ
ಕ್ಯಾಪ್ಟನ್ ಸಿಕಂದರ್ ರಾಝಾ 15 ಸಿಕ್ಸರ್ ಬಾರಿಸಿದ್ರು. ಮಾದಂಡೆ ಕೂಡ 5 ಸಿಕ್ಸರ್ ಚಚ್ಚಿದ್ರು. ಮರುಮಣಿ 4 ಸಿಕ್ಸರ್ ಬಾರಿಸಿದ್ದು, ಒಂದು ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆ 27 ಸಿಕ್ಸರ್ ಚಚ್ಚಿ ದಾಖಲೆ ಬರೆದಿದೆ.
ಗ್ಯಾಂಬಿಯಾ 54 ರನ್ಗಳಿಗೆ ಆಲೌಟ್
ಜಿಂಬಾಬ್ವೆ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಿದ ಗ್ಯಾಂಬಿಯಾ 14.4 ಓವರ್ಗಳಲ್ಲಿ 54 ರನ್ಗೆ ಆಲೌಟ್ ಆಗಿದೆ. ಈ ಮೂಲಕ ಜಿಂಬಾಬ್ವೆ ವಿರುದ್ಧ 290 ರನ್‌ಗಳ ಬೃಹತ್ ಅಂತರದ ಸೋಲು ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ