ಗಿಲ್​ ಕ್ರೇಜ್​.. ರಾತ್ರೋರಾತ್ರಿ ಚಮತ್ಕಾರ ಸೃಷ್ಟಿಸಿದ ಗಿಲ್

ಶುಭ್‌ಮನ್ ಗಿಲ್‌ ಅವರ ಜೀವನದಲ್ಲಿ ಅಕ್ಟೋಬರ್ 4 ಒಂದು ಅವಿಸ್ಮರಣೀಯ ದಿನವಾಗಿದೆ ಅವರು ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಂಡ ದಿನ ಇದಾಗಿದೆ.

ಕ್ರಿಕೆಟ್ ಪ್ರಪಂಚದಲ್ಲಿ ಕೊಹ್ಲಿ ನಂತರ ಗಿಲ್‌ ಅವರ ಮೇಲೆ ಅಭಿಮಾನಿಗಳು ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಕೊಹ್ಲಿ ಅವರ ಉತ್ತರಾಧಿಕಾರಿ ಎಂದು ಗುರುತಿಸಲ್ಪಟ್ಟಿರುವ ಗಿಲ್‌ ಈಗ ಅಭಿಮಾನಿಗಳಲ್ಲಿ ಹೆಚ್ಚಿದ ಕ್ರೇಜ್‌ ಹೊಂದಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ತಂಡದ ನಾಯಕನಾಗಿ ಗಮನ ಸೆಳೆದ ಗಿಲ್‌, ಈಗ ಏಕದಿನ ಮಾದರಿಯಲ್ಲೂ ನಾಯಕನಾಗಿ ಆಯ್ಕೆಯಾದರು ಈ ಮೂಲಕ ಅಭಿಮಾನಿಗಳ ಹೃದಯಗಳಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

ಇನ್ಸ್‌ಟಾಗ್ರಾಂನಲ್ಲಿ ಗಿಲ್‌ ಅವರ ಫಾಲೋವರ್ಸ್‌ ಸಂಖ್ಯೆ 18 ಮಿಲಿಯನ್‌ ಗಡಿ ದಾಟಿದ್ದು, ಟೀಮ್ ಇಂಡಿಯಾ ಆಟಗಾರರ ಟಾಪ್ 10 ಪಟ್ಟಿಗೆ ಸೇರಿದ್ದಾರೆ

ಗಿಲ್‌ ಅವರ ಇನ್ಸ್ಟಾಗ್ರಾಂ ಫಾಲೋವರ್ಸ್‌ ಸಂಖ್ಯೆ ಕಳೆದ ಐಪಿಎಲ್‌ ನಂತರ ನಿರಂತರವಾಗಿ ಏರಿಕೆಯಾಗುತ್ತಿದ್ದು, 16 ಮಿಲಿಯನ್‌ ನಿಂದ 18 ಮಿಲಿಯನ್‌ ಗಡಿ ದಾಟಿದೆ

ಕ್ರಿಕೆಟ್ ಜಗತ್ತಿನಲ್ಲಿ ಮಾತ್ರವಲ್ಲ, ಜಾಹೀರಾತು ಲೋಕದಲ್ಲೂ ಗಿಲ್‌ ಅವರ ಮೇನಿಯಾ ಆರಂಭವಾಗಿದೆ ಅವರು 10 ರಿಂದ 15 ಹೊಸ ಬ್ರ್ಯಾಂಡ್ಗಳಿಗೆ ಸಹಿ ಹಾಕಿದ್ದಾರೆ.

ಕಾರ್ಪೋರೇಟ್ ಜಗತ್ತಿನಲ್ಲಿ ಕೊಹ್ಲಿಯ ಪರ್ಯಾಯವಾಗಿ ಗಿಲ್‌ ಅವರನ್ನು ಕಾಣಲಾಗುತ್ತಿದೆ ಇದು ಅವರ ಬ್ರ್ಯಾಂಡ್‌ ಮೌಲ್ಯವನ್ನು ಹೆಚ್ಚಿಸಿದೆ.

ಅಕ್ಟೋಬರ್ 4 ರಂದು, ಗಿಲ್‌ ಅವರ ಇನ್ಸ್ಟಾಗ್ರಾಂ ಫಾಲೋವರ್ಸ್‌ ಒಂದು ಲಕ್ಷದಷ್ಟು ಏರಿಕೆಯಾಗಿದ್ದು, ಈ ದಿನ ಅವರನ್ನು ಅಭಿಮಾನಿಗಳು ಹೆಚ್ಚಿಗೆ ಮೆಚ್ಚಿದ್ದಾರೆ