/newsfirstlive-kannada/media/media_files/2025/09/04/shubman-gill-10-2025-09-04-16-42-32.jpg)
ಭಾರತೀಯ ಕ್ರಿಕೆಟ್​ ಲೋಕದ ಟ್ರೆಂಡ್​ ನಿಧಾನವಾಗಿ ಬದಲಾಗ್ತಿದೆ. ಕೊಹ್ಲಿ, ಕೊಹ್ಲಿ ಅಂತಿದ್ದ ಫ್ಯಾನ್ಸ್​ ಇದೀಗ ಯುವರಾಜನ ಕಡೆಗೆ ಮುಖ ಮಾಡ್ತಿದ್ದಾರೆ. ಕ್ರಿಕೆಟ್​ ಲೋಕದ ಸುಲ್ತಾನ ವಿರಾಟ್​ ಕೊಹ್ಲಿ, ಮೈದಾನದಿಂದ ನಿಧಾನವಾಗಿ ದೂರಾಗ್ತಿದ್ದಾರೆ. ಯುವರಾಜ್​ ಶುಭ್​ಮನ್​ ಗಿಲ್​ ಕಿಂಗ್​ ಪಟ್ಟವನ್ನ ಆಕ್ರಮಿಸಿಕೊಳ್ತಿದ್ದಾರೆ. ಕ್ರಿಕೆಟ್​ ಜಗತ್ತಿನ ಮುಂದಿನ ದೊರೆ ಶುಭ್​ಮನ್​ ಗಿಲ್ ಅನ್ನೋದು ಮತ್ತೆ ಮತ್ತೆ ಪ್ರೂವ್​ ಆಗ್ತಿದೆ.
ಇಂಡಿಯನ್​​ ಕ್ರಿಕೆಟ್​ನಲ್ಲಿ ಹೊಸ ಪರ್ವ ಆರಂಭವಾಗಿದೆ. ಯುವರಾಜ ಶುಭ್​ಮನ್​ ಗಿಲ್​ಗೆ ಏಕದಿನ ಮಾದರಿಯಲ್ಲೂ ನಾಯಕನ ಸಿಂಹಾಸನವೇರಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್​​ ತಂಡದ ನಾಯಕನಾಗಿ ಆನ್​ಫೀಲ್ಡ್​ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಪಂಜಾಬ್ ಪುತ್ತರ್​ ರನ್​​​​ ಹೊಳೆಯನ್ನೇ ಹರಿಸಿದ್ರು. ಇದೀಗ ಆಸ್ಟ್ರೇಲಿಯಾದಲ್ಲಿ ಕಾಂಗರೂಗಳನ್ನ ಬೇಟೆಯಾಡಲು ಸಜ್ಜಾಗ್ತಿದ್ದಾರೆ.
ಅಭಿಮಾನಿಗಳ ವಲಯದಲ್ಲಿ ಹೆಚ್ಚಾಯ್ತು ಗಿಲ್​ ಕ್ರೇಜ್​.!
ಶುಭ್​ಮನ್​ ಗಿಲ್​ ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟ ಆರಂಭದಿಂದಲೂ ವಿರಾಟ್​ ಕೊಹ್ಲಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ರು. ಕೊಹ್ಲಿಯನ್ನ ಕಿಂಗ್​ ಅಂತಿದ್ದ ಫ್ಯಾನ್ಸ್​ ಗಿಲ್​ ಪ್ರಿನ್ಸ್​ ಅಂತಿದ್ರು. ಇದೀಗ ಅಂದುಕೊಂಡಂತೆ ಯುವರಾಜ ಗಿಲ್​ ಟೀಮ್​ ಇಂಡಿಯಾದ ಹೊಸ ರಾಜನಾಗುವತ್ತ ದಾಫುಗಾಲಿಡ್ತಿದ್ದಾರೆ. ಆನ್​​​ಫೀಲ್ಡ್​ನಲ್ಲಿ ಟೀಮ್ ಇಂಡಿಯಾದ ಹೊಸ ರನ್ ಮಷಿನ್ ಎನಿಸಿಕೊಂಡಿರೋ ಗಿಲ್​, ಆಫ್​ ದಿ ಫೀಲ್ಡ್​ನಲ್ಲೂ ವಿರಾಟ್ ಕೊಹ್ಲಿ ದಾರಿಯಲ್ಲೇ ಸಾಗ್ತಿದ್ದಾರೆ. ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆಯಲ್ಲೂ ಏರಿಕೆ ಕಾಣ್ತಿದೆ.
ನಾಯಕನ ಪಟ್ಟವೇರಿದ ದಿನವೇ ಇನ್ಸ್​​ಸ್ಟಾದಲ್ಲಿ ಧೂಳ್​.!
ವಿಶ್ವದಾದ್ಯಂತ ಕೊಹ್ಲಿಯನ್ನ ಆರಾಧಿಸೋ ಅಸಂಖ್ಯ ಅಭಿಮಾನಿಗಳಿದ್ದಾರೆ. ಕೊಹ್ಲಿ ಕ್ರಿಕೆಟ್​​ನಿಂದ ದೂರಾದ್ರೆ ನೆಕ್ಸ್ಟ್​ ಯಾರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಅದಕ್ಕೀಗ ಉತ್ತರ ಸಿಕ್ಕಂತಾಗಿದೆ. ಪ್ರಿನ್ಸ್​​ ಶುಭ್​ಮನ್​ ಗಿಲ್​ ಫ್ಯಾನ್ಸ್​ ಫೇವರಿಟ್​ ಆಗ್ತಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಗಿಲ್​ ಕ್ರೇಜ್​ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಫ್ಯಾನ್ಸ್​ ಫೇವರಿಟ್​ ಆಗ್ತಿದ್ದಾರೆ. ಇದಕ್ಕೆ ಅಕ್ಟೋಬರ್​ 4 ಈ ದಿನ ಬೆಸ್ಟ್​ ಎಕ್ಸಾಂಪಲ್​.!
ಅಕ್ಟೋಬರ್​ 4.. ಶುಭ್​ಮನ್​ ಗಿಲ್​ ಜೀವನದ ಅವಿಸ್ಮರಣೀಯ ದಿನ. ಟೀಮ್​ ಇಂಡಿಯಾ ಪರ ಒಂದು ಮ್ಯಾಚ್​ ಆಡಬೇಕು ಎಂದುಕೊಂಡಿದ್ದ ಕನಸು ಕಂಡಿದ್ದ ಗಿಲ್​, ನಾಯಕತ್ವದ ಸಿಂಹಾಸನವೇರಿದ ದಿನ. ಟೆಸ್ಟ್​ ಬಳಿಕ ಏಕದಿನ ತಂಡಕ್ಕೂ ಅಧಿಕೃತವಾಗಿ ನಾಯಕನಾಗಿ ಆಯ್ಕೆಯಾದ ಆ ದಿನವೇ ಅಭಿಮಾನಿಗಳು ತಮ್ಮ ಹೃದಯ ಸಿಂಹಾಸನದಲ್ಲಿ ಗಿಲ್​ಗೆ ವಿಶೇಷ ಸ್ಥಾನ ನೀಡಿದ್ದಾರೆ. ಆ ಒಂದು ರಾತ್ರಿಯಲ್ಲೇ ಇನ್ಸ್​​ಸ್ಟಾಗ್ರಾನಲ್ಲಿ ಗಿಲ್​ ಫಾಲೋವರ್ಸ್​ ಸಂಖ್ಯೆ ಒಂದು ಲಕ್ಷದಷ್ಟು ಏರಿಕೆ ಕಂಡಿದೆ.
ಟಾಪ್​​-10 ಪಟ್ಟಿಗೆ ರಾಯಲ್​ ಎಂಟ್ರಿಕೊಟ್ಟ ಯುವರಾಜ.!
ಸದ್ಯ ಶುಭ್​ಮನ್​ ಗಿಲ್​ ಇನ್ಸ್​​​ಸ್ಟಾ ಫಾಲೋವರ್ಸ್​ಗಳ ಸಂಖ್ಯೆ 18 ಮಿಲಿಯನ್​ ಗಡಿ ದಾಟಿದೆ. ಈ ಮೂಲಕ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರೋ ಟೀಮ್​ ಇಂಡಿಯಾ ಆಟಗಾರರ ಟಾಪ್​ 10 ಲಿಸ್ಟ್​ಗೆ ರಾಯಲ್​​ ಎಂಟ್ರಿ ಕೊಟ್ಟಿದ್ದಾರೆ. ವಿರಾಟ್​​ ಕೊಹ್ಲಿ ಬರೋಬ್ಬರಿ 273 ಮಿಲಿಯನ್​ ಪಾಲೋವರ್ಸ್​ ಹೊಂದಿದ್ರೆ, ಸಚಿನ್​ ತೆಂಡುಲ್ಕರ್​, ಎಮ್​.ಎಸ್​ ಧೋನಿ, ರೋಹಿತ್​ ಶರ್ಮಾ, ಹಾರ್ದಿಕ್​ ಪಾಂಡ್ಯ 40 ಮಿಲಿಯನ್​ಗಿಂತ ಹೆಚ್ಚು ಫಾಲೋವರ್ಸ್​ ಹೊಂದಿದ್ದು ಟಾಪ್​ 5 ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿರೋ ಆಟಗಾರರ ಫಾಲೋವರ್ಸ್​ ಸಂಖ್ಯೆ 20 ಮಿಲಿಯನ್​ ಆಸುಪಾಸಲಿದ್ದು, ಕೆಲ ದಿನಗಳಲ್ಲೇ ಗಿಲ್​ ಬೀಟ್​ ಮಾಡೋದು ಪಕ್ಕಾ.!
ಇನ್ಸ್​​​ಸ್ಟಾಗ್ರಾಂ ಫಾಲೋವರ್ಸ್​ ಸಂಖ್ಯೆ
ಕೆ.ಎಲ್​ ರಾಹುಲ್​ | 22M |
ಜಸ್​​​ಪ್ರಿತ್​ ಬೂಮ್ರಾ | 20M |
ಯುವರಾಜ್​ ಸಿಂಗ್​ | 20M |
ಸೂರ್ಯಕುಮಾರ್​ | 19M |
ಶುಭ್​​ಮನ್​​ ಗಿಲ್​ | 18M |
IPL ಬಳಿಕ ಫಾಲೋವರ್ಸ್​ ಸಂಖ್ಯೆ ಕನ್ಸಿಸ್ಟೆಂಟ್​ ಆಗಿ ಏರಿಕೆ
2025ರಲ್ಲಿ ಆನ್​ಫೀಲ್ಡ್​ನಲ್ಲಿ ಗಿಲ್​​ ಹೆಚ್ಚು ಸಕ್ಸಸ್​ ಕಂಡಿದ್ದಾರೆ. ಆನ್​ಫೀಲ್ಡ್​ನ ಸಕ್ಸಸ್​ ಆಫ್​​ ದ ಫೀಲ್ಡ್​ನಲ್ಲಿ ಹೆಚ್ಚಿನ ಖ್ಯಾತಿ ತಂದಿಕೊಟ್ಟಿದೆ. ಕಳೆದ ಐಪಿಎಲ್​ ಬಳಿಕ ಇನ್ಸಸ್ಟಾಗ್ರಾಂ ಫಾಲೋವರ್ಸ್​ ಸಂಖ್ಯೆಯಲ್ಲಿ ಏರಿಕೆ ಕಂಡಿರೋದೆ ಇದಕ್ಕೆ ಸಾಕ್ಷಿ. ಕಳದೆ ಗಿಲ್​ ಫಾಲೋವರ್ಸ್​ ಸಂಖ್ಯೆ 16 ಮಿಲಿಯನ್​ ಗಡಿ ತಲುಪಿತು. ಆ ಬಳಿಕ ಅಗಸ್ಟ್​ನಲ್ಲಿ ಅಂದ್ರೆ 2 ತಿಂಗಳ ಅಂತರದಲ್ಲಿ ಫಾಲೋವರ್ಸ್​ ಸಂಖ್ಯೆ 17 ಮಿಲಿಯನ್​ಗೆ ಏರಿಕೆಯಾಗಿತ್ತು. ಈಗ ​18 ಮಿಲಿಯನ್​​ ಗಡಿ ದಾಟಿದೆ.
ಕ್ರಿಕೆಟ್​​​ ಜಗತ್ತಿನಲ್ಲಿ ಶುಭ್​ಮನ್​ ಮೇನಿಯಾ.!
ಇನ್ಸ್​​ಸ್ಟಾಗ್ರಾಂ ಮಾತ್ರವಲ್ಲ, ಜಾಹೀರಾತು ಲೋಕದಲ್ಲೂ ಶುಭ್​ಮನ್​ ಮೇನಿಯಾ ಆರಂಭವಾಗಿದೆ. ಕಾರ್ಪೋರೇಟ್​​ ಜಗತ್ತಿಗೆ ಕೊಹ್ಲಿಗೆ ಪರ್ಯಾಯವಾಗಿ ಶುಭ್​ಮನ್​ ಗಿಲ್ ಕಂಡಿದ್ದಾರೆ​. ಕಳೆದ 2 ತಿಂಗಳ ಅವಧಿಯಲ್ಲಿ ಗಿಲ್​ ಹೊಸದಾಗಿ 10ರಿಂದ 15 ಬ್ರ್ಯಾಂಡ್​ಗಳಿಗೆ ಸಹಿ ಹಾಕಿದ್ದಾರೆ. ಇಷ್ಟೇ ಅಲ್ಲ, ಬ್ರ್ಯಾಂಡ್​ವ್ಯಾಲ್ಯೂ ಕೂಡ ಏರಿಕೆ ಕಂಡಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಕೊಹ್ಲಿ ಉತ್ತರಾಧಿಕಾರಿ ಎಂದು ಈ ಹಿಂದೆಯೇ ಬಿಂಬಿತವಾಗಿದ್ದ ಗಿಲ್​, ನಿಧಾನವಾಗಿ ಕಿಂಗ್​ ಪಟ್ಟವನ್ನ ಕಬ್ಜಾ ಮಾಡ್ತಿದ್ದಾರೆ. ಆನ್​ಫೀಲ್ಡ್​ನಲ್ಲಿ ಗಿಲ್​​ ಇನ್ನಷ್ಟು ಮಿಂಚಿದ್ರೆ, ನೆಕ್ಸ್ಟ್​ ಸೂಪರ್​ ಸ್ಟಾರ್​ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ