newsfirstkannada.com

‘ಅಂದು 8000 ಕೋಟಿ ಯಾರ ಖಜಾನೆ ಸೇರಿತು? ತಪ್ಪಿತಸ್ಥರನ್ನು ಜೈಲಿಗಟ್ತೀವಿ’ -ಸಿದ್ದು ಗುರಿಯಾಗಿಸಿ ಬೊಮ್ಮಾಯಿ ವಾಗ್ದಾಳಿ

Share :

Published February 24, 2023 at 6:00am

Update April 13, 2024 at 11:59am

    ಸಿದ್ದರಾಮಯ್ಯ CM ಆಗಿದ್ದಾಗ ಅರ್ಕಾವತಿ ಡಿನೋಟಿಫಿಕೇಷನ್ ಹಗರಣ

    ವಿಧಾನಸಭೆ ಚುನಾವಣೆ ಹೊತ್ತಲ್ಲಿ ಸಿದ್ದು ವಿರುದ್ಧ CM ಗಂಭೀರ ಆರೋಪ

    ಆರೋಪಿಗಳನ್ನು ಜೈಲಿಗೆ ಕಳುಹಿಸುತ್ತೇವೆ ಎಂದಿರುವ ಬಸವರಾಜ್ ಬೊಮ್ಮಾಯಿ

ವಿಧಾನಸಭೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ 8 ಸಾವಿರ ಕೋಟಿ ರೂಪಾಯಿಗಳ ಬೃಹತ್​ ಹಗರಣ ನಡೆದಿದೆ ಎಂದು ವಿಧಾನಸಭಾ ಕಲಾಪದಲ್ಲಿ ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ. ಅರ್ಕಾವತಿ ಡಿನೋಟಿಫಿಕೇಷನ್​ ಪ್ರಕರಣ ಕುರಿತು ನ್ಯಾ.ಕೆಂಪಣ್ಣ ಆಯೋಗ ಸಲ್ಲಿಸಿದ್ದ ವರದಿಯನ್ನ ಆಧಾರಿಸಿ ಸಿಎಂ ಬೊಮ್ಮಾಯಿ ಈ ವಿಷಯವನ್ನು ಪ್ರಸ್ತಾಪಿಸಿದರು.

ಮುನಿಯಪ್ಪ ಜೊತೆ ಸಿದ್ದರಾಮಯ್ಯ

ಜಮೀನು ಮಾಲೀಕರ ಹಿತಾಸಕ್ತಿಗಾಗಿ 800ಕ್ಕೂ ಹೆಚ್ಚು ಎಕರೆ ಜಮೀನು ಅನ್ನು ರೀಡೂ ಹೆಸರಲ್ಲಿ ಡಿನೋಟಿಫಿಕೇಷನ್​ ಆಗಿರುವುದು ನಿಜ. ಇದು ವರದಿಯಲ್ಲಿ ಸ್ಪಷ್ಟವಾಗಿದೆ. ಈ ವರದಿ ಬಗ್ಗೆ ಯಾವ ಕ್ರಮ ಕೈಗೊಳ್ಳದೇ ಸಿದ್ದರಾಮಯ್ಯ ತಮ್ಮ ಅವಧಿಯ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥರನ್ನ ಜೈಲಿಗೆ ಕಳುಹಿಸುತ್ತೇವೆ ಎಂದು ಸಿಎಂ ಹೇಳಿದರು. ​

ಸುಳ್ಳು ಭ್ರಷ್ಟಾಚಾರ ಆರೋಪ ಮಾಡಬೇಡಿ. ಕಾಂಗ್ರೆಸ್​ನವರು ಗುತ್ತಿಗೆದಾರ ಕೆಂಪಣ್ಣರನ್ನ ಕರೆ ತಂದರೆ ನಮಗೆ ನ್ಯಾ.ಕೆಂಪಣ್ಣ ಬರುತ್ತಾರೆ. ಅರ್ಕಾವತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿದ್ದ 868 ಎಕರೆ ಜಮೀನಿನಲ್ಲಿ 852 ಎಕರೆಯನ್ನು ಕೈ ಬಿಟ್ಟಿದ್ದೀರಿ. ಕೋರ್ಟ್​ ಆದೇಶಕ್ಕೆ ವಿರುದ್ಧವಾಗಿ ರೀಡೂ ನೇಮ್​ ಅಲ್ಲಿ ಡಿನೋಟಿಫಿಕೇಷನ್​ ಮಾಡಿದ್ದೀರಿ. ಈ ಬಗ್ಗೆ ಆಯೋಗದ ವರದಿಯಲ್ಲಿ ಹೇಳಲಾಗಿದೆ. ಎಕರೆಗೆ 10 ಕೋಟಿ ರೂಪಾಯಿ ಎಂದರೂ 8000 ಕೋಟಿ ರೂ. ಭ್ರಷ್ಟಾಚಾರ ಆಗಿದೆ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್​ ಸರ್ಕಾದ ವೇಳೆ ನಡೆದ ಹಗರಣದ ಬಗ್ಗೆ ಸದನದಲ್ಲಿ ಎಳೆ ಎಳೆಯಾಗಿ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲಿ ಇಲ್ಲದೇ ಇರುವಾಗ ಈ ರೀತಿ ಆರೋಪ ಮಾಡಬೇಡಿ. 4 ವರ್ಷದಿಂದ ಏನು ಮಾಡುತ್ತಿದ್ದೀರಿ. ಇದು ಸತ್ಯವಾದರೇ ಎಲ್ಲ ಸದಸ್ಯರಿಗೆ ಒಂದೊಂದು ಪ್ರತಿ ನೀಡಿ. ಅದು ಬಿಟ್ಟು ಕೇವಲ ರಾಜಕೀಯ ಭಾಷಣ ಮಾಡಬೇಡಿ. ಅಕ್ರಮ ನಡೆದಿದ್ದರೇ ಸಿಬಿಐಗೆ ವಹಿಸಿ ಎಂದು ಕಾಂಗ್ರೆಸ್​ನ ಕೆ.ಜೆ. ಜಾರ್ಜ್ ಅವರು ಸಿಎಂಗೆ ಸದನದಲ್ಲಿ ಎದುರುತ್ತರ ಕೊಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಂದು 8000 ಕೋಟಿ ಯಾರ ಖಜಾನೆ ಸೇರಿತು? ತಪ್ಪಿತಸ್ಥರನ್ನು ಜೈಲಿಗಟ್ತೀವಿ’ -ಸಿದ್ದು ಗುರಿಯಾಗಿಸಿ ಬೊಮ್ಮಾಯಿ ವಾಗ್ದಾಳಿ

https://newsfirstlive.com/wp-content/uploads/2023/02/CM_BOMMAI_SIDDARAMAIAH-1.jpg

Load More