ಆ್ಯಕ್ಸಲ್ ಕಟ್ಟಾಗಿ ಆಟೋಗೆ ಗುದ್ದಿದ ಲಾರಿ; ತಾಯಿ, ಮಗಳು ದುರ್ಮರಣ

author-image
Harshith AS
Updated On
ಆ್ಯಕ್ಸಲ್ ಕಟ್ಟಾಗಿ ಆಟೋಗೆ ಗುದ್ದಿದ ಲಾರಿ; ತಾಯಿ, ಮಗಳು ದುರ್ಮರಣ
Advertisment
  • ರಾತ್ರೋ ರಾತ್ರಿ ಆಟೋ-ಲಾರಿ ನಡುವೆ ಭೀಕರ ಅಪಘಾತ
  • ಮದುವೆ ಮುಗಿಸಿ ಬರುತ್ತಿದ್ದ ಅಮ್ಮ, ಮಗಳು ಮಸಣ ಸೇರಿದರು
  • ಈಚರ್​ ವಾಹನದ ಆ್ಯಕ್ಸಲ್​ ಕಟ್​​ ಆಗಿ 2 ಜೀವಗಳು ಬಲಿ

ತುಮಕೂರು: ಲಾರಿ ಮತ್ತು ಆಟೋ ನಡುವಿನ ಅಪಘಾತದಲ್ಲಿ ತಾಯಿ, ಮಗಳು ಸಾವಪ್ಪಿದ ಘಟನೆ ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿದೆ. ತಾಯಿ ಶಾಂತಲಕ್ಷ್ಮಿ (30) ಚಿನ್ಮಯಿ (5) ಮೃತ ದುರ್ದೈವಿಗಳು.

ಈಚರ್​ ವಾಹನದ ಆ್ಯಕ್ಸಲ್ ಕಟ್ಟಾಗಿ ಈ ಅಪಘಾತ ಸಂಭವಿದೆ. ಲಾರಿ ಆ್ಯಕ್ಸಲ್ ಕಟ್ಟಾದ ಪರಿಣಾಮ  ಹೌಸಿಂಗ್ ಸಮೇತ ಆಟೋಗೆ ಬಂದು ಗುದ್ದಿದೆ.

ರಾತ್ರಿ 10‌‌.30ರ ಸಮಯದಲ್ಲಿ ನಡೆದಿರೋ ಘಟನೆ ಇದಾಗಿದೆ. ಲಾರಿ ಚಾಲಕ ಸಡನ್ ಬ್ರೇಕ್ ಹಾಕಿದ್ದಕ್ಕೆ ಈಚರ್​ ವಾಹನದ ಆಕ್ಸಲ್ ಕಟ್ಟಾಗಿ ಆಟೋಗೆ ಅಪ್ಪಳಿಸಿದೆ‌‌. ಆಟೋದಲ್ಲಿದ್ದ ತಾಯಿ ಮಗಳು ಇದರಿಂದಾಗಿ ಸಾವನ್ನಪ್ಪಿದ್ದಾರೆ.

publive-image

ಮೃತರು ತುಮಕೂರು ನಗರದ ಕುಂಟಮ್ಮದ ತೋಟದವರು ಎಂದು ತಿಳಿದು ಬಂದಿದೆ. ಭೀಮಸಂದ್ರದಿಂದ ಮದುವೆ ಮುಗಿಸಿ ತುಮಕೂರು ನಗರಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment