ರಾತ್ರೋ ರಾತ್ರಿ ಆಟೋ-ಲಾರಿ ನಡುವೆ ಭೀಕರ ಅಪಘಾತ
ಮದುವೆ ಮುಗಿಸಿ ಬರುತ್ತಿದ್ದ ಅಮ್ಮ, ಮಗಳು ಮಸಣ ಸೇರಿದರು
ಈಚರ್ ವಾಹನದ ಆ್ಯಕ್ಸಲ್ ಕಟ್ ಆಗಿ 2 ಜೀವಗಳು ಬಲಿ
ತುಮಕೂರು: ಲಾರಿ ಮತ್ತು ಆಟೋ ನಡುವಿನ ಅಪಘಾತದಲ್ಲಿ ತಾಯಿ, ಮಗಳು ಸಾವಪ್ಪಿದ ಘಟನೆ ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿದೆ. ತಾಯಿ ಶಾಂತಲಕ್ಷ್ಮಿ (30) ಚಿನ್ಮಯಿ (5) ಮೃತ ದುರ್ದೈವಿಗಳು.
ಈಚರ್ ವಾಹನದ ಆ್ಯಕ್ಸಲ್ ಕಟ್ಟಾಗಿ ಈ ಅಪಘಾತ ಸಂಭವಿದೆ. ಲಾರಿ ಆ್ಯಕ್ಸಲ್ ಕಟ್ಟಾದ ಪರಿಣಾಮ ಹೌಸಿಂಗ್ ಸಮೇತ ಆಟೋಗೆ ಬಂದು ಗುದ್ದಿದೆ.
ರಾತ್ರಿ 10.30ರ ಸಮಯದಲ್ಲಿ ನಡೆದಿರೋ ಘಟನೆ ಇದಾಗಿದೆ. ಲಾರಿ ಚಾಲಕ ಸಡನ್ ಬ್ರೇಕ್ ಹಾಕಿದ್ದಕ್ಕೆ ಈಚರ್ ವಾಹನದ ಆಕ್ಸಲ್ ಕಟ್ಟಾಗಿ ಆಟೋಗೆ ಅಪ್ಪಳಿಸಿದೆ. ಆಟೋದಲ್ಲಿದ್ದ ತಾಯಿ ಮಗಳು ಇದರಿಂದಾಗಿ ಸಾವನ್ನಪ್ಪಿದ್ದಾರೆ.
ಮೃತರು ತುಮಕೂರು ನಗರದ ಕುಂಟಮ್ಮದ ತೋಟದವರು ಎಂದು ತಿಳಿದು ಬಂದಿದೆ. ಭೀಮಸಂದ್ರದಿಂದ ಮದುವೆ ಮುಗಿಸಿ ತುಮಕೂರು ನಗರಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ