newsfirstkannada.com

×

‘ಆ ನಿರ್ದೇಶಕ ನನ್ನ ಒಳ ಉಡುಪು ನೋಡಲು ಬಯಸಿದ್ದ’ -ಬಾಲಿವುಡ್​ನ ಕರಾಳಮುಖ ಬಿಚ್ಚಿಟ್ಟ ಪ್ರಿಯಾಂಕ ಚೋಪ್ರಾ..!

Share :

Published May 25, 2023 at 4:44pm

Update September 25, 2023 at 10:39pm

    ‘ಆ ನಿರ್ದೇಶಕ ನನ್ನ ಒಳ ಉಡುಪು ನೋಡಲು ಬಯಸಿದ್ದ’

    ಬಾಲಿವುಡ್​ನ ಕರಾಳಮುಖ ಬಿಚ್ಚಿಟ್ಟ ಪ್ರಿಯಾಂಕ ಚೋಪ್ರಾ..!

    ಪ್ರಿಯಾಂಕಾ ಚೋಪ್ರಾಗೆ ಎರಡು ವಿಷ್ಯದಲ್ಲಿ ಕೋಪವಿದೆ!

ಪ್ರಿಯಾಂಕ ಚೋಪ್ರಾ, ನಿಕ್ ಜೋನಸ್​ ಅವರೊಂದಿಗೆ ಮದುವೆ ಆದ್ಮೇಲೆ ಬಾಲಿವುಡ್​ಗೆ ಗುಡ್​ ಬಾಯ್ ಹೇಳಿದ್ದಾರೆ. ಇದೀಗ ಬಾಲಿವುಡ್​​ನಲ್ಲಿ ಆದ ಕರಾಳ ಘಟನೆಯೊಂದನ್ನು ಪ್ರಿಯಾಂಕ ಬಹಿರಂಗಪಡಿಸಿದ್ದಾರೆ. ತಾನು ಯಾಕೆ ಬಾಲಿವುಡ್ ಬಿಟ್ಟು ಹೋದೆ ಅನ್ನೋದನ್ನು ಹೇಳ್ಕೊಂಡಿರೋ ಪಿಗ್ಗಿ, ನಿರ್ದೇಶಕನೊಬ್ಬನ ಕೆಟ್ಟ ಮುಖ ಕಳಚಿ ಹಾಕಿದ್ದಾರೆ.

ಹಾಲಿವುಡ್​ ಚಿತ್ರಗಳಲ್ಲಿ ನಟಿಸೋಕೆ ಶುರು ಆದ ಮೇಲೆ ಹಿಂದಿ ಸಿನಿಮಾ ಮಾಡೋ ಆಸಕ್ತಿನೇ ಕೊಟ್ಟಿಲ್ಲ. ಆದ್ರೆ ಪ್ರಿಯಾಂಕಾ ಚೋಪ್ರಾ ಅದ್ಯಾಕೆ ಹಿಂದಿ ಸಿನಿಮಾಗಳಲ್ಲಿ ನಟಿಸ್ತಿಲ್ಲ ಅನ್ನೋದ್ರ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಳ್ತಾದರೂ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಇದೀಗ, ಸ್ವತಃ ಪ್ರಿಯಾಂಕಾ ತಾನು ಯಾಕೆ ಬಾಲಿವುಡ್​ನಿಂದ ಅಂತರ ಕಾಯ್ದುಕೊಂಡೆ ಎನ್ನುವ ಸತ್ಯ ಸಂಗತಿ ಬಿಚ್ಚಿಟ್ಟಿದ್ದಾರೆ.

ದಿ ಜೋ ರಿಪೋರ್ಟ್​ಗೆ ನೀಡಿದ ಸಂದರ್ಶನದಲ್ಲಿ ತಮಗೆ ಉಂಟಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ. ಅಂದ್ಹಾಗೆ ಪ್ರಿಯಾಂಕಾ ಚೋಪ್ರಾಗೆ ಎರಡು ವಿಷ್ಯದಲ್ಲಿ ಕೋಪವಿದೆ. ಮೊದಲನೇಯದು 2003ರ ಆಸುಪಾಸಿನಲ್ಲಿ ಆದ ಅನುಭವ. ಆಗಷ್ಟೇ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದ ಪ್ರಿಯಾಂಕಾ ಬಳಿ ಆ  ನಡೆದುಕೊಂಡ ರೀತಿ.

ಪ್ರಿಯಾಂಕ ಆರೋಪವೇನು..? 

ಅದು 2002-03ರ ಸಂದರ್ಭ. ನಾನು ಹಿಂದಿ ಚಿತ್ರ ಒಂದರಲ್ಲಿ ಅಂಡರ್​ಕವರ್ ಏಜೆಂಟ್ ಪಾತ್ರವನ್ನು ಮಾಡುತ್ತಿದ್ದೆ. ಪಾತ್ರದಲ್ಲಿ ಓರ್ವ ವ್ಯಕ್ತಿಯನ್ನು ನಾನು ಮೋಹಿಸಬೇಕಾಗಿತ್ತು. ಅದಕ್ಕಾಗಿ ನನ್ನ ಬಟ್ಟೆಗಳನ್ನು ಒಂದೊಂದೆ ತೆಗೆಯಬೇಕಾಗಿತ್ತು. ಅದಕ್ಕೆ ನಾನು ಮೈಮೇಲೆ ತುಂಬಾ ಬಟ್ಟೆಗಳನ್ನು ಇಟ್ಟುಕೊಳ್ಳಲು ಬಯಸಿದ್ದೆ. ಆದರೆ ಚಿತ್ರದ ನಿರ್ದೇಶಕ ನನ್ನನ್ನು ಕೇವಲ ಒಳ ಉಡುಪಿನಲ್ಲಿ ನೋಡಲು ಬಯಸಿದ್ದ. ಅದನ್ನು ಪ್ರಶ್ನೆ ಮಾಡಿದಾಗ ನೀವು ಮಾಡಲ್ಲ ಅಂದರೆ ನಮಗೆ ತುಂಬಾ ಜನ ನಟಿಸಲು ಇದ್ದಾರೆ. ಚಿತ್ರವನ್ನು ನೋಡಲು ಜನ ಬರಬೇಕು ಅಂದರೆ ನೀವು ಹಾಗೆ ಮಾಡಲೇ ಬೇಕು ಎಂದಿದ್ದ. ಇದರಿಂದ ನನಗೆ ಬೇಸರಗೊಂಡು ಬಂದೆ.

ಪ್ರಿಯಾಂಕ ಚೋಪ್ರಾ, ನಟಿ 

ಇದರಿಂದ ಕೋಪಗೊಂಡ ನಟಿ ಏನೂ ಮಾತಾಡದೇ ವಾಪಸ್ ಹೋಗಿದ್ದರಂತೆ. ಈ ಘಟನೆ ಪ್ರಿಯಾಂಕಾ ಅವರನ್ನ ವೈಯಕ್ತಿಕವಾಗಿ ತುಂಬಾ ಕಾಡಿತ್ತು ಎಂದು ಹೇಳಿಕೊಂಡಿದ್ದಾರೆ. ಬಾಲಿವುಡ್​ನಲ್ಲಿರುವ ರಾಜಕೀಯ, ಪ್ರಭಾವಿಗಳ ವರ್ತನೆ ಬಗ್ಗೆಯೂ ಪ್ರಿಯಾಂಕಾಗೆ ತುಂಬಾ ಬೇಸರ ಇತ್ತಂತೆ. ಈ ಕಾರಣದಿಂದಲೇ ಬಾಲಿವುಡ್​ನಿಂದ ದೂರ ಉಳಿಯಬೇಕಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸದ್ಯ ಸಿಟಾಡೆಲ್ ವೆಬ್​ಸಿರೀಸ್​ ಮೂಲಕ ವಿಶ್ವಾದ್ಯಂತ ಟ್ರೆಂಡ್ ಸೃಷ್ಟಿಸಿರುವ ಪ್ರಿಯಾಂಕಾ ಚೋಪ್ರಾ, ತುಂಬಾ ದಿನದ ನಂತರ ಈಗ ಬಾಲಿವುಡ್​ನಲ್ಲೂ ಸಿನಿಮಾ ಮಾಡೋ ಆಸಕ್ತಿ ತೋರಿಸಿದ್ದಾರಂತೆ. ಶೀಘ್ರದಲ್ಲೇ ಹಿಂದಿ ಸಿನಿಮಾ ಮಾಡುವುದರ ಜೊತೆಗೆ ಪಿಗ್ಗಿ ಮತ್ತೆ ಬಿಟೌನ್​ನಲ್ಲಿ ಮಿಂಚಲಿದ್ದಾರಂತೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

‘ಆ ನಿರ್ದೇಶಕ ನನ್ನ ಒಳ ಉಡುಪು ನೋಡಲು ಬಯಸಿದ್ದ’ -ಬಾಲಿವುಡ್​ನ ಕರಾಳಮುಖ ಬಿಚ್ಚಿಟ್ಟ ಪ್ರಿಯಾಂಕ ಚೋಪ್ರಾ..!

https://newsfirstlive.com/wp-content/uploads/2023/05/PRIYANKA-3.jpg

Load More