newsfirstkannada.com

ದೀಪಿಕಾ ದಾಸ್ ಮುದ್ದಿನ ಬೆಕ್ಕು ಕಾಣೆಯಾಗಿದೆ; ಹುಡುಕಿ ಕೊಟ್ಟವರಿಗೆ ಬಂಪರ್ ಬಹುಮಾನ

Share :

24-02-2023

    ಬಿಗ್​ ಬಾಸ್ ಖ್ಯಾತೀಯ ದೀಪಿಕಾ ದಾಸ್

    ಶ್ಯಾಡೋ ಹೆಸರಿನ ಪರ್ಷಿಯನ್​ ಬ್ರೀಡ್​ ಗಂಡು ಬೆಕ್ಕು

    ಬೆಕ್ಕು ಹುಡುಕಿಕೊಟ್ಟವರಿಗೆ 10 ಸಾವಿರದಿಂದ 15 ಸಾವಿರದವರೆಗೆ ಬಹುಮಾನ

ಕನ್ನಡದ ಬಿಗ್​ಬಾಸ್​ ಹಾಗೂ ಧಾರಾವಾಹಿ ಮೂಲಕ ನಟಿ ದೀಪಿಕಾ ದಾಸ್ ಪ್ರಖ್ಯಾತಿ ಗಳಿಸಿದವರು. ಮೊನ್ನೆ ಮೊನ್ನೆಯಷ್ಟೇ ಉತ್ತರಾಖಂಡ್​ಗೆ ಪ್ರವಾಸ ಹೋಗಿದ್ದರು. ಟೂರ್​ನಲ್ಲಿನ ಮಸ್ತ್​ ಮಸ್ತ್​ ಫೋಟೋಗಳನ್ನ ತಮ್ಮ ಸೋಷಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಶೇರ್​ ಮಾಡಿದ್ದರು. ಸದ್ಯ ಇನ್ನೊಂದು ಸುದ್ದಿಯನ್ನ ಬಿಗ್​ಬಾಸ್​ ಬೆಡಗಿ ಹಂಚಿಕೊಂಡಿದ್ದು ಆದ್ರೆ ಈ ಬಾರಿ ಇದನ್ನು ಹುಡುಕಿಕೊಟ್ಟವರಿಗೆ 15 ಸಾವಿರ ಗಿಫ್ಟ್ ಕೊಡ್ತಾರಂತೆ. ಅಂದರೆ ಇದೇನು ಅಂತೀರಾ..

ಹೌದು.. ದೀಪಿಕಾ ದಾಸ್​ ಅವರ ಮನೆಯಲ್ಲಿದ್ದ ಮುದ್ದಾದ ಶ್ಯಾಡೋ ಹೆಸರಿನ ಪರ್ಷಿಯನ್​ ಬ್ರೀಡ್​ ಗಂಡು ಬೆಕ್ಕು ಕಳೆದು ಹೋಗಿದೆ. ಈ ಬೆಕ್ಕಿನ ಬಣ್ಣ ಕಪ್ಪಾಗಿದ್ದು ಕತ್ತಿನ ಸುತ್ತ ಕಂದು ಬಣ್ಣವಿರುತ್ತದೆ ಹಾಗೂ 9 ತಿಂಗಳ ಮುದ್ದಾದ ಬೆಕ್ಕು ಎಂದು ತಿಳಿಸಿದ್ದಾರೆ. ಅಲ್ಲದೇ ಈ ಬೆಕ್ಕನ್ನು ಹುಡುಕಿಕೊಟ್ಟವರಿಗೆ 10 ಸಾವಿರದಿಂದ 15 ಸಾವಿರದವರೆಗೆ ಬಹುಮಾನ ನೀಡಲಾಗುವುದು ಎಂದು ದೀಪಿಕಾ ದಾಸ್​ ತಮ್ಮ ಇನ್​ಸ್ಟಾದಲ್ಲಿ ಶೇರ್​ ಮಾಡಿರುವ ಫೋಟೋದಲ್ಲಿ ತಿಳಿಸಿದ್ದಾರೆ.

ಇನ್ನು ದೀಪಿಕಾ ದಾಸ್​ ಅವರು ಮಾಡಿರುವ ಈ ಪೋಸ್ಟ್​ಗೆ ಫ್ಯಾನ್ಸ್​ ವಿಧ ವಿಧವಾದ ಕಾಮೆಂಟ್​ ಮಾಡುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ದೀಪಿಕಾ ದಾಸ್​ ಅವರು RCBಯ ಹಾಗೂ ವೆಸ್ಟ್​ಇಂಡೀಸ್​ನ ಮಾಜಿ ಕ್ರಿಕೆಟ್​ ಆಟಗಾರ ಕ್ರೀಸ್​ ಗೇಲ್​ರನ್ನ ಭೇಟಿ ಮಾಡಿದ್ದರು.

ದೀಪಿಕಾ ದಾಸ್ ಮುದ್ದಿನ ಬೆಕ್ಕು ಕಾಣೆಯಾಗಿದೆ; ಹುಡುಕಿ ಕೊಟ್ಟವರಿಗೆ ಬಂಪರ್ ಬಹುಮಾನ

https://newsfirstlive.com/wp-content/uploads/2023/02/DEEPIKA_DAS.jpg

Load More