newsfirstkannada.com

ಪಾದ್ರಿ ವಿರುದ್ಧ ಮಹಿಳೆಯಿಂದ ಲೈಂಗಿಕ ಕಿರುಕುಳದ ಆರೋಪ; ಬುದ್ಧಿ ಹೇಳಬೇಕಾದವರೇ ಹಿಂಗೆ ಮಾಡಿದ್ರಾ?

Share :

15-06-2023

    ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ಮಹಿಳೆಗೆ ಅನ್ಯಾಯ

    ಧರ್ಮಗುರುವಿನ ವಿರುದ್ಧ ದೂರು ನೀಡಿದ ಮಹಿಳೆಗೆ ಬಹಿಷ್ಕಾರದ ಶಿಕ್ಷೆ

    ನಾಪತ್ತೆಯಾದ್ರಾ ಧರ್ಮಗುರು? ಮಹಿಳೆಗೆ ನ್ಯಾಯ ಸಿಗುತ್ತಾ?

ಜನರಿಗೆ ಸರಿ, ತಪ್ಪುಗಳ ಬಗ್ಗೆ ಬುದ್ದಿ ಹೇಳಿ ಬೆಳಕು ಚೆಲ್ಲಬೇಕಿದ್ದ ಪಾದ್ರಿಯೊಬ್ಬರು ದಾರಿ ತಪ್ಪಿದ್ದಾರೆ. ಮಂಗಳೂರಿನ ಚರ್ಚ್​ನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ವಿರುದ್ಧ ಧನಿಯೆತ್ತಿದ ಮಹಿಳೆಗೆ ಬಹಿಷ್ಕಾರದ ಶಿಕ್ಷೆ ಜೊತೆ ಜೀವ ಬೆದರಿಕೆಯ ಹಾಕಲಾಗಿದೆ. ಇಂಟ್ರೆಸ್ಟಿಂಗ್​ ವಿಚಾರ ಅಂದ್ರೆ ಈ ಬಗ್ಗೆ ದೂರು ದಾಖಲಾಗಿ ಎರಡೂವರೆ ತಿಂಗಳಾದ್ರೂ ಯಾವ ಕ್ರಮವೂ ಜರುಗದೇ ಇರೋದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಪಾದ್ರಿ ವಿರುದ್ಧ ಕೇಳಿ ಬಂತು ಲೈಂಗಿಕ ಕಿರುಕುಳ ಆರೋಪ

ಸಮಾಜದ ಏಳಿಗೆಗಾಗಿ, ಸಮುದಾಯದ ದನಿಯಾಗಿ ಸೇವೆ ಮಾಡಬೇಕಿದ್ದ ಪಾದ್ರಿಯೊಬ್ಬರ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಮಂಗಳೂರಿನ ಪಾದ್ರಿಯೊಬ್ಬರು ಚರ್ಚ್​ನಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ, ದೌರ್ಜನ್ಯ ಎಸಗಿದ್ದಾರೆ ಅಂತ ಗಂಭೀರ ಆರೋಪ ಕೇಳಿಬಂದಿದೆ.

ಮಂಗಳೂರಿನಲ್ಲಿರುವ ಸಿಎಸ್ಐ ಧರ್ಮಪ್ರಾಂತದ ಧರ್ಮಗುರುಗಳಾದ ನೋಯೆಲ್ ಕರ್ಕಡ ವಿರುದ್ಧ ಈ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಪಾದ್ರಿಗೆ ಅಧಿಕಾರಿಗಳಾದ ವಿಲಿಯಂ ಕೇರಿ ಮತ್ತು ವಿಲ್ಸನ್ ಪಾಲ್ ಕೂಡ ಸಹಕಾರ ನೀಡಿದ್ದಾರೆ ಅಂತಲೂ ಮಹಿಳೆ ಆರೋಪಿಸಿದ್ದಾಳೆ.

ಅನ್ಯಾಯದ ವಿರುದ್ಧ ಧನಿಯೆತ್ತಿದ ಮಹಿಳೆಗೆ ಬಹಿಷ್ಕಾರದ ಶಿಕ್ಷೆ

ಮಂಗಳೂರಿನ ಸಿಎಸ್ಐ ಧರ್ಮಪ್ರಾಂತ ಚರ್ಚ್​ನಲ್ಲಿ ಕೆಲಸ ಮಾಡ್ತಿದ್ದ ಮಹಿಳೆ, ಅಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಿದ್ರು. ಇದರಿಂದ ತಮ್ಮೆಲ್ಲಾ ಅವ್ಯಾವಹಾರಗಳಿಗೆ ಮಹಿಳೆ ಅಡ್ಡಿಯಾಗ್ತಿರೋದಕ್ಕೆ ಚರ್ಚ್​ನ ಪಾದ್ರಿ ಮಹಿಳೆಯನ್ನ ಕೆಲಸದಿಂದ ತೆಗೆದುಹಾಕಿದ್ರು. ಕಾನೂನನ್ನ ಗಾಳಿಗೆ ತೂರಿ ಇಷ್ಟ ಬಂದಂತೆ ಸಂಸ್ಥೆ ಆಡಳಿತ ನಡೆಸುತ್ತಿದ್ದು, ಇದನ್ನ ಪ್ರಶ್ನಿಸಿದ್ದಕ್ಕೆ ಮಹಿಳೆಗೆ ಸಾಮಾಜಿಕ ಬಹಿಷ್ಕಾರ ಸಹ ಹಾಕಲಾಗಿತ್ತು. ಅಲ್ಲದೇ ಆಕೆ ಬಳಿ ಮಾತನಾಡದಂತೆ ತಾಕೀತು ಸಹ ಮಾಡಲಾಗಿತ್ತು.

ಧರ್ಮಗುರು ನಾಪತ್ತೆ

ಚರ್ಚ್​ ಆಡಳಿತ ಮಂಡಳಿ ತನ್ನ ಮೇಲೆ ನಡೆಸಿದ ದೌರ್ಜ್ಯನ್ಯಕ್ಕೆ ನ್ಯಾಯ ಒದಗಿಸಿಕೊಡುವಂತೆ ಕೋರಿ ಮಹಿಳೆ ಮೈಸೂರಿನ ಒಡನಾಡಿ ಸಂಸ್ಥೆಯ ಮೊರೆಹೋಗಿದ್ದಾಳೆ. ಸಂಸ್ಥೆಯಲ್ಲಿ ಆಶ್ರಯ ಪಡೆದ ನೊಂದ ಮಹಿಳೆ ಪರ ಹೋರಾಟಕ್ಕೆ ನಿಂತ ಒಡನಾಡಿ ಸೇವಾ ಸಂಸ್ಥೆ ಮಂಗಳೂರಿನ ಚರ್ಚ್​ ಮುಂಭಾಗ ಪ್ರತಿಭಟನೆ ಸಹ ನಡೆಸಿದೆ. ಪ್ರತಿಭಟನೆ ಬಳಿಕ ಧರ್ಮಗುರು ನೋಯೆಲ್ ಕರ್ಕಡ ನಾಪತ್ತೆ ಯಾಗಿದ್ದಾರೆ.

ಇನ್ನೂ ಪಾದ್ರಿ ಹಾಗೂ ಅಧಿಕಾರಿಗಳು ಲೈಂಗಿಕ ಸಹಕಾರ ನೀಡದೇ ಇದ್ರೆ ಬದುಕಲು ಬಿಡೋದಿಲ್ಲ ಅಂತಾ ಬೆದರಿಕೆ ಹಾಕಿದ್ದಾರೆ ಅಂತ ಮಹಿಳೆ ಗಂಭೀರ ಆರೋಪ ಮಾಡಿದ್ದಾಳೆ. ಸದ್ಯ ಧರ್ಮಗುರು ನೋಯೆಲ್ ಕರ್ಕಡ ಹಾಗೂ ವಿಲಿಯಂ ಕೇರಿ ಮತ್ತು ವಿಲ್ಸನ್ ಪಾಲ್ ವಿರುದ್ಧ ಸಂತ್ರಸ್ತ ಮಹಿಳೆ ಪಾಂಡೇಶ್ವರ ಹಾಗೂ ಕದ್ರಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇಂಟ್ರೆಸ್ಟಿಂಗ್​ ವಿಚಾರ ಅಂದ್ರೆ ಪ್ರಕರಣ ದಾಖಲಾಗಿ ಎರಡೂವರೆ ತಿಂಗಳಾದ್ರೂ ಇದುವರೆಗೂ ಈ ಬಗ್ಗೆ ಪೊಲೀಸರು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.

ಒಟ್ನಲ್ಲಿ ಜನರಿಗೆ ಮಾರ್ಗದರ್ಶನ ಮಾಡಿ ಸರಿ ದಾರಿಯಲ್ಲಿ ಕರೆದೊಯ್ಯಬೇಕಿದ್ದ ಧರ್ಮಗುರುಗಳೇ ಈ ರೀತಿ ದೌರ್ಜನ್ಯ ಎಸಗಿ ದಾರಿತಪ್ಪಿದ್ದಾರೆ. ಇನ್ನಾದ್ರೂ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ಶಿಕ್ಷೆ ನೀಡುವ ಕೆಲಸ ಮಾಡ್ತಾರಾ ಅಂತ ಕಾದು ನೋಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾದ್ರಿ ವಿರುದ್ಧ ಮಹಿಳೆಯಿಂದ ಲೈಂಗಿಕ ಕಿರುಕುಳದ ಆರೋಪ; ಬುದ್ಧಿ ಹೇಳಬೇಕಾದವರೇ ಹಿಂಗೆ ಮಾಡಿದ್ರಾ?

https://newsfirstlive.com/wp-content/uploads/2023/06/Padri.jpg

Load More