/newsfirstlive-kannada/media/post_attachments/wp-content/uploads/2024/07/KRS_DAM-3.jpg)
ಮೈಸೂರು: ಕೆಆರ್‌ಎಸ್ (ಕೃಷ್ಣರಾಜ ಸಾಗರ) ಜಲಾಶಯದಿಂದ 1 ಲಕ್ಷದ 30 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿಗೆ ಹರಿಬಿಟ್ಟ ಪರಿಣಾಮ ತಿ.ನರಸೀಪುರ ತಾಲೂಕಿನ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ನರಸೀಪುರ ತಲಕಾಡು ನಡುವಿನ ಸಂಚಾರ ಬಂದ್ ಆಗಿದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಮನೆಯಲ್ಲೇ ದರ್ಶನ್ ಪರ ಮಾತು.. ಕೆಂಗಣ್ಣಿಗೆ ಗುರಿಯಾದ ಸ್ಯಾಂಡಲ್ವುಡ್ ನಟ..!
ಕಾವೇರಿ ನದಿಗೆ ಭಾರೀ ಪ್ರಾಮಾಣದಲ್ಲಿ ನೀರನ್ನು ಕೆಆರ್‌ಎಸ್ ಡ್ಯಾಂನಿಂದ ಬಿಡುಗಡೆ ಮಾಡಲಾಗಿದೆ. ಇದರಿಂದ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿದೆ. ಮುಂಜಾಗ್ರತ ಕ್ರಮವಾಗಿ ಸೇತುವೆ ಎರಡು ಭಾಗದಲ್ಲೂ ಬ್ಯಾರಿಕೇಡ್ ಅವಳಡಿಸಿ ವಾಹನ ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದಾರೆ. ಸ್ಥಳದಲ್ಲೇ ಅಗ್ನಿಶಾಮಕ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ಹೀಗಾಗಿ ವಾಹನಗಳು ಸೋಸಲೆ, ಪೂರಿಗಾಲಿ, ಮುಡುಕುತೊರೆ ಮಾರ್ಗವಾಗಿ ತಲಕಾಡಿಗೆ ಹೋಗುತ್ತವೆ
ಇದನ್ನೂ ಓದಿ: Breaking: ಮೇಘಾಲಯದ ರಾಜ್ಯಪಾಲರಾಗಿ ಸಿ.ಹೆಚ್ ವಿಜಯಶಂಕರ್ ನೇಮಕ.. ರಾಜಕೀಯ ಹಿನ್ನೆಲೆ ಏನು..?
ಇಂದಿನ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ
- ಗರಿಷ್ಠ ಮಟ್ಟ- 124.80 ಅಡಿ
- ಇಂದಿನ ಮಟ್ಟ- 123.34 ಅಡಿ
- ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ
- ಇಂದಿನ ಸಾಮರ್ಥ್ಯ- 47.434 ಟಿಎಂಸಿ
- ಒಳಹರಿವು- 1,17,066 ಕ್ಯೂಸೆಕ್
- ಹೊರಹರಿವು- 1,30,867 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ