ನಿರ್ಮಲಾ ಸೀತಾರಾಮನ್ರವರಿಂದ ಬಜೆಟ್ ಮಂಡನೆ
ಗ್ರಾಮೀಣ ಭಾಗದಲ್ಲಿ ಆರ್ಥಿಕತೆಗೆ ಹೆಚ್ಚು ಒತ್ತು
ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರವರು 2024-25ರ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ನಲ್ಲಿ ರೈತರಿಗೂ ಸಿಹಿ ಸುದ್ದಿ ನೀಡಿದ್ದಾರೆ. ಕೃಷಿಯನ್ನೇ ನಂಬಿದ್ದ ರೈತನಿಗೆ ಈ ಬಾರಿಯ ಬಜೆಟ್ನಲ್ಲಿ ಏನೆಲ್ಲಾ ಸಿಕ್ಕಿದೆ ಎಂದು ನೋಡೋಣ..
ಕೃಷಿ ಸಂಬಂಧಿತ ವಲಯಕ್ಕೆ 1.52 ಲಕ್ಷ ಕೋಟಿ ಮೀಸಲಿಟ್ಟಿದೆ. ಕೃಷಿ ಸಂಶೋಧನೆಯಲ್ಲಿ ಬದಲಾವಣೆಗೆ ಆರ್ಥಿಕ ನೆರವು ನೀಡಿದೆ. ಉತ್ಪಾದನೆಯನ್ನು ಹೆಚ್ಚಿಸಲು ಕೃಷಿ ಸಂಶೋಧನೆಗೆ ಮಹತ್ವ ಕೊಡಲಾಗಿದೆ.
ಇದನ್ನೂ ಓದಿ: ಕೈಯಿಂದ ನೇಯ್ದ ವಿಶೇಷ ಸಾರಿ.. ನಿರ್ಮಲಾ ಸೀತಾರಾಮನ್ ಧರಿಸಿರೋ ಸೀರೆ ವಿಶೇಷತೆ ಏನ್ ಗೊತ್ತಾ?
2 ವರ್ಷದಲ್ಲಿ 1 ಕೋಟಿ ರೈತರಿಗೆ ನ್ಯಾಚುರಲ್ ಫಾರ್ಮಿಂಗ್ಗೆ ನೆರವು ನೀಡಲು ಮುಂದಾಗಿದೆ. ತೈಲ ಬೀಜಗಳ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸುವ ಗುರಿಯನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲಿ ಆರ್ಥಿಕತೆಗೆ ಹೆಚ್ಚು ಒತ್ತು, ಇದಲ್ಲದೆ ರೈತರಿಗಾಗಿ 10 ಸಾವಿರ ಬಯೋ ರಿಸರ್ಚ್ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ಈ ಬಾರಿಯ ಬಜೆಟ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Budget2024: ಬಿಹಾರ, ಆಂಧ್ರಕ್ಕೆ ಬಂಪರ್ ಗಿಫ್ಟ್; ಮೋದಿ ಬಜೆಟ್ನಲ್ಲಿ ಎರಡು ರಾಜ್ಯಗಳಿಗೆ ಸಿಕ್ಕಿದ್ದೆಷ್ಟು?
ಖಾರಿಫ್ ಬೆಳೆಗೆ ಡಿಜಿಟಲ್ ಕ್ರಾಪ್ ಸರ್ವೇ ನಡೆಸುವುದು, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಬೆಳೆ ಬೆಳೆಯಲು ಹೊಸ ಮಾದರಿಯ ಬೀಜಗಳು ವಿತರಿಸುವ ಬಗ್ಗೆ ಈ ಬಾರಿಯ ಬಜೆಟ್ನಲ್ಲಿ ಒತ್ತು ನೀಡಲಾಗಿದೆ.
ಇದನ್ನೂ ಓದಿ: ಮದ್ವೆಯಾದ 3 ನಿಮಿಷಕ್ಕೆ ಡಿವೋರ್ಸ್ ಪಡೆದ ದಂಪತಿ.. ಕಾರಣ ಮಾತ್ರ ವಿಚಿತ್ರ
ಇದಲ್ಲದೆ, ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ. ತರಕಾರಿ ಬೆಳೆಗಳ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ, ಬೆಳೆಗಳ ಉತ್ತೇಜನಕ್ಕಾಗಿ ರೈತರಿಗೆ ಸಹಾಯ ಮತ್ತು ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ