/newsfirstlive-kannada/media/post_attachments/wp-content/uploads/2024/10/RATAN-TATA-5-1.jpg)
ದಿವಂಗತ ರತನ್ ಟಾಟಾ ಕೇವಲ ಈ ದೇಶದಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿಲ್ಲ. ಪರೋಪಕಾರಕ್ಕೆ ಮತ್ತೊಂದು ನಿದರ್ಶನ ಎನ್ನುವ ರೀತಿ ಈ ಭೂಮಿಯಲ್ಲಿ ಬದುಕಿ ಒಂದು ಆದರ್ಶದ ಮೇಲ್ಪಂಕ್ತಿಯನ್ನು ಎಲ್ಲರಿಗೂ ಹಾಕಿ ಕೊಟ್ಟು ಅಗಲಿದ್ದಾರೆ. ಅವರು ಮಾಡಿರುವ ಆಸ್ತಿಯಲ್ಲಿ ತಮ್ಮ ಬದುಕಿನಲ್ಲಿ ಬಂದ ಪ್ರತ್ಯಕ್ಷ, ಪರೋಕ್ಷ ವ್ಯಕ್ತಿಗಳಿಗೆಲ್ಲಾ ಮುಡಿಪಾಗಿಟ್ಟಿದ್ದಾರೆ. ತಾವು ಮಾತ್ರ ನನ್ನದೂ ಏನೂ ಇಲ್ಲ ಎನ್ನುವ ರೀತಿಯಲ್ಲಿ ಬರಿಗೈಯಲ್ಲಿಯೇ ಇಹಲೋಕ ತೊರೆದಿದ್ದಾರೆ.
ರತನ್ ಟಾಟಾ ಅಗಲಿದ ನಂತರವೂ ಅವರು ಬರೆದಿಟ್ಟಿರುವ ವಿಲ್ ಈಗಲೂ ಕೂಡ ಸುದ್ದಿ ಮಾಡುತ್ತಿದೆ ಕಾರಣ ಅವರು ಯಾರನ್ನು ಬರೀಗೈಯಲ್ಲಿಟ್ಟು ಹೋಗಿಲ್ಲ. ಅವರಿಗೆ, ಅವರ ಸಂಸ್ಥೆಗೆ ದುಡಿದ ಎಲ್ಲರ ಕೈಗೂ ಹಿಡಿಯಷ್ಟಾದರೂ ಉಪಕಾರ ಮಾಡಿ ಹೋಗಿದ್ದಾರೆ. ಅದರಲ್ಲಿ ಮೂರು ಕೋಟಿ ರೂಪಾಯಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಿಗಾಗಿಯೇ ತೆಗೆದಿಟ್ಟಿದ್ದಾರೆ.
ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ ಅವರೊಂದಿಗೆ ನಿರಂತರ 7 ವರ್ಷಗಳ ಕಾಲ ಮನೆಯ ಸೇವಕನಾಗಿ ಕಾರ್ಯ ನಿರ್ವಹಿಸಿದ ವ್ಯಕ್ತಿಗೆ 15 ಲಕ್ಷ ರೂಪಾಯಿ ನೀಡುವಂತೆ ಟಾಟಾ ಉಯಿಲ್ನಲ್ಲಿ ಬರೆದಿಟ್ಟಿದ್ದಾರಂತೆ.
ಇದನ್ನೂ ಓದಿ:3,800 ಕೋಟಿ ರೂಪಾಯಿ ಚಾರಿಟಿಗೆ.. ರತನ್ ಟಾಟಾ ವಿಲ್ನಲ್ಲಿ ಯಾರಿಗೆಷ್ಟು ಕೋಟಿ ಬರೆದಿದ್ದಾರೆ ಗೊತ್ತಾ?
ಕಾರ್ ಕ್ಲೀನ್ ಮಾಡುವವರಿಗೆ ಮತ್ತು ಸಹಾಯಕರಿಗೆಲ್ಲರಿಗೂ ತಲಾ ಒಂದು ಲಕ್ಷ ರೂಪಾಯಿಯನ್ನು ರತನ್ ಟಾಟಾ ಅವರು ನೀಡಿದ್ದಾರೆ. ಇನ್ನು ಅವರ ಮನೆಯಲ್ಲಿ ಸುದೀರ್ಘ ಕಾಲದವರೆಗೂ ಅಡುಗೆ ಮಾಡಿಕೊಂಡಿದ್ದ ಬಾಣಸಿಗ ರಜನ್ ಶಾಗೆ 1 ಕೋಟಿ ರೂಪಾಯಿಯನ್ನು ನೀಡಿದ್ದಾರೆ. ಅವರ ಇನ್ನೊಬ್ಬ ಸೇವಕ ಸುಬ್ಬಯ್ಯ ಕೊನಾರ್ಗೆ 66 ಲಕ್ಷ ರೂಪಾಯಿ ನೀಡಿದ್ದಾರೆ. ಅವರ ಕಾರ್ಯದರ್ಶಿ ಡೆಲ್ನಜ್ ಗ್ಲಿಡರ್ಗೆ 10 ಲಕ್ಷ ರೂಪಾಯಿ ನೀಡುವಂತೆ ಉಯಿಲ್ನಲ್ಲಿ ಬರೆದಿಟ್ಟು ಹೋಗಿದ್ದಾರೆ.
ಇದನ್ನೂ ಓದಿ:ಅನಂತ್ ಅಂಬಾನಿ ಪಾದಯಾತ್ರೆ; ದುಪ್ಪಟ್ಟು ಬೆಲೆಗೆ ಟ್ರಕ್ನಲ್ಲಿದ್ದ ಎಲ್ಲ ಕೋಳಿಗಳ ಖರೀದಿ..!
ಇನ್ನು ಹಲವು ಎನ್ಜಿಓ ಹಾಗೂ ವಿದ್ಯಾಸಂಸ್ಥೆಗಳಿಗೂ ರತನ್ ಟಾಟಾ ಅವರು ತಮ್ಮ ಆಸ್ತಿಯಲ್ಲಿ ದಾನ ನೀಡಬೇಕು ಎಂದು ಉಯಿಲ್ನಲ್ಲಿ ಉಲ್ಲೇಖಿಸಿದ್ದಾರೆ. ಅವರ ಸಹಾಯಕ ಶಂತನು ನಾಯ್ಡು ಅವರು ಕಾರ್ನೆಲ್ ಕಾಲೇಜಿನಲ್ಲಿ ಎಂಬಿಎ ಮುಂದುವರಿಸಲು 1 ಕೋಟಿ ರೂಪಾಯಿ ಲೋನ್ ನೀಡಬೇಕೆಂದು ಹೇಳಿದ್ದಾರೆ. ಇನ್ನು ರತನ್ ಟಾಟಾ ಅವರ ಹತ್ತಿರ ಸಾಲ ಮಾಡಿದ್ದ ನೆರೆಮನೆಯವರ ಹಾಗೂ ಡ್ರೈವರ್ ರಾಜು ಲಿಯೋನ್ ಅವರ 18 ಲಕ್ಷ ಸಾಲವನ್ನು ಮನ್ನಾ ಮಾಡಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ