ಸಿಎಂ ಬೆಂಗಾವಲು ವಾಹನದ ಹಿಂದೆ ಹೋಗ್ತಿದ್ದ ಕಾರಿನಲ್ಲಿ 1 ಕೋಟಿ ರೂಪಾಯಿ; ಕಂತೆ, ಕಂತೆ ಹಣ ಜಪ್ತಿ!

author-image
admin
Updated On
ಹಳೇ ದ್ವೇಷ; ಮಗಳನ್ನು ಭುಜದ ಮೇಲೆ ಕೂರಿಸಿಕೊಂಡು ಹೋಗುವಾಗ ತಂದೆ ಮೇಲೆ ಗುಂಡಿನ ದಾಳಿ
Advertisment
  • ಲೋಕಸಭಾ ಚುನಾವಣೆಯ ಸಮಾವೇಶಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಕಾರು
  • ಸಿಎಂ ಬೆಂಗಾವಲು ವಾಹನದ ಹಿಂದೆ 1 ಕೋಟಿ ರೂಪಾಯಿ ಹಣ ಸಾಗಾಟ
  • ಕಾರು ನಿಲ್ಲಿಸಿ ತಪಾಸಣೆ ನಡೆಸಿದಾಗ ಚುನಾವಣಾ ಅಧಿಕಾರಿಗಳೇ ಶಾಕ್‌!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಪೊಲೀಸರ ಕಾವಲು, ತೀವ್ರ ತಪಾಸಣೆಯ ಮಧ್ಯೆಯೂ ಕದ್ದು ಮುಚ್ಚಿ ಹಣ ಸಾಗಿಸಲಾಗುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಖತರ್ನಾಕ್‌ ಪ್ಲಾನ್ ಮಾಡಿ 1 ಕೋಟಿ ರೂಪಾಯಿ ಸಾಗಿಸುತ್ತಿದ್ದ ಪ್ರಯತ್ನ ವಿಫಲವಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ.

ಅರುಣಾಚಲ ಪ್ರದೇಶದ ಲಾಂಗ್‌ಡಿಂಗ್ ಜಿಲ್ಲೆಯಲ್ಲಿ ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ತೆರಳುತ್ತಾ ಇದ್ದರು. ಈ ವೇಳೆ ಸಿಎಂ ಬೆಂಗಾವಲು ವಾಹನದ ಹಿಂದೆ ಬರುತ್ತಿದ್ದ ಕಾರನ್ನು ಚುನಾವಣಾ ಆಯೋಗದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಬೆಂಗಾವಲು ವಾಹನದ ಹಿಂದೆ ಇದ್ದ ಕಾರಿನಲ್ಲಿ 1 ಕೋಟಿ ರೂಪಾಯಿ ಹಣ ಇರುವುದು ಪತ್ತೆಯಾಗಿದೆ.

publive-image

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ಗೆ ಹೊಸ ಟ್ವಿಸ್ಟ್‌.. ಶಿವಮೊಗ್ಗ ನಗರದ ಬಿಜೆಪಿ ನಾಯಕನ ವಿಚಾರಣೆ

ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಅವರು ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಲು ತೆರಳುತ್ತಾ ಇದ್ದರು. ಈ ವೇಳೆ ಸಿಎಂ ಬೆಂಗಾವಲು ವಾಹನದ ಹಿಂದೆ ಕೋಟ್ಯಾಂತರ ರೂಪಾಯಿ ಹಣ ಇದ್ದ ಕಾರು ಚಲಿಸುತ್ತಾ ಇತ್ತು. ಕಂತೆ, ಕಂತೆ ನೋಟು ವಶಪಡಿಸಿಕೊಂಡ ಚುನಾವಣಾ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಸಿಎಂ ಬೆಂಗಾವಲು ವಾಹನಗಳ ಹಿಂದೆ ಖಾಸಗಿ ಕನ್ಸ್‌ಸ್ಟ್ರಕ್ಷನ್ ಕಂಪನಿಯ ಕಾರು ಹಿಂಬಾಲಿಸಿಕೊಂಡು ಹೋಗಿದೆ. ಹರ್ಷವರ್ಧನ್ ಎಂಬುವವರಿಗೆ ಈ ಕಾರು ಸೇರಿದ್ದಾಗಿದೆ. ಈ ಕಾರು ಸಿಎಂ ಬೆಂಗಾವಲು ವಾಹನಕ್ಕೆ ಸೇರಿದ್ದು ಅಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ದಾಖಲೆ ಇಲ್ಲದ 1 ಕೋಟಿ ರೂಪಾಯಿ ಹಣವನ್ನು ಸಿಎಂ ಬೆಂಗಾವಲು ವಾಹನದ ಹಿಂದೆ ಸಾಗಾಟ ಮಾಡಲು ಪ್ರಯತ್ನ ಮಾಡಲಾಗಿದೆ ಎನ್ನಲಾಗಿದೆ. ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಧಿಕಾರದಲ್ಲಿದ್ದು, ವಿರೋಧ ಪಕ್ಷ ಇದು ಸಿಎಂ ಕಾನ್ರಾಡ್ ಸಂಗ್ಮಾ ಅವರಿಗೆ ಸೇರಿದ್ದು, ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment