₹23 ಕೋಟಿ, 1 ಕೆಜಿ ಚಿನ್ನ​, ಬೆಳ್ಳಿ ಪಿಸ್ತೂಲ್ ಮತ್ತು ಬೇಡಿ! ಯಾವ ದೇವರಿಗೆ ಇಷ್ಟು ದಾನ ಬಂದಿದೆ ಗೊತ್ತಾ?

author-image
Gopal Kulkarni
Updated On
₹23 ಕೋಟಿ, 1 ಕೆಜಿ ಚಿನ್ನ​, ಬೆಳ್ಳಿ ಪಿಸ್ತೂಲ್ ಮತ್ತು ಬೇಡಿ! ಯಾವ ದೇವರಿಗೆ ಇಷ್ಟು ದಾನ ಬಂದಿದೆ ಗೊತ್ತಾ?
Advertisment
  • 23 ಕೋಟಿ ರೂ. 1 ಕೆಜಿ ಚಿನ್ನ ದಾನವಾಗಿ ಪಡೆದುಕೊಂಡ ದೇಗುಲ ಇದು
  • ಇದು ತಿರುಪತಿ ತಿಮ್ಮಪ್ಪನೂ ಅಲ್ಲ, ಅನಂತ ಪದ್ಮನಾಭ ಸ್ವಾಮಿಯೂ ಅಲ್ಲ
  • ಈ ದೇಗುಲದಲ್ಲಿ ಮೊದಲ ಬಾರಿ ಭಕ್ತಾದಿಗಳಿಂದ ಇಷ್ಟು ದೊಡ್ಡ ಮೊತ್ತದ ದಾನ

ಗೋಲ್ಡ್ ಬಿಸ್ಕೆಟ್ 1 ಕೆಜಿ, 23 ಕೋಟಿ ರೂಪಾಯಿ ನಗದು, ಬೆಳ್ಳಿ ಪಿಸ್ತೂಲ್ ಜೊತೆಗೆ ಒಂದು ಜೊತೆ ಬೆಳ್ಳಿಯ ಬೇಡಿ. ರಾಜಸ್ಥಾನದ ಚಿತ್ತೋಡಗಢದ ಸನ್ವಾಲಿಯಾ ಸೇಠ ಮಂದಿರ ಇಂತಹದೊಂದು ಬೃಹತ್ ಮಟ್ಟದ ದಾನ ಪಡೆದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

ಈ ಒಂದು ಮಂದಿರ ಶ್ರೀಕೃಷ್ಣನಿಗೆ ಸೇರಿದ್ದು. ದೇಗುಲಕ್ಕೆ ಬಂದ ದಾನವನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಲೆಕ್ಕ ಮಾಡುತ್ತಾರೆ. ಈ ಬಾರಿ ಅದನ್ನು ಒಟ್ಟು ಟ್ಯಾಲಿ ಮಾಡಿ ನೋಡಿದಾಗ ಈ ಬಾರಿ ಸುಮಾರು 23 ಕೋಟಿ ರೂಪಾಯಿ ನಗದು. 1 ಕೆಜಿ ಚಿನ್ನ. ಕೆಲವು ಭಕ್ತಾದಿಗಳು ಚಿನ್ನದ ಬಿಸ್ಕಟ್​ನ್ನು ಕೂಡ ದಾನ ಮಾಡಿದ್ದಾರೆ. ಇನ್ನೂ ಬೆಳ್ಳಿಯ ಕಲಾಕೃತಿಗಳನ್ನು ಕೂಡ ನೀಡಿದ್ದಾರೆ. ಕೆಲವರು ಪಿಸ್ತೂಲ್, ಕೆಲವರು ಬೇಡಿ, ಕೆಲವರು ಬೆಳ್ಳಿಯ ಕೊಳಲನ್ನು ದಾನ ಮಾಡಿದ್ದಾರೆ.

ಇದನ್ನೂ ಓದಿ:ಸಿನಿಮಾಗೂ ಮುನ್ನ ಆ ಉದ್ಯಮದಲ್ಲಿ ಗುರುತಿಸಿಕೊಂಡ ಶಾರುಖ್​ ಪುತ್ರ; ವರ್ಲ್ಡ್‌ ಬೆಸ್ಟ್‌ ಬ್ರ್ಯಾಂಡ್ ಅವಾರ್ಡ್‌!

ಇತ್ತೀಚಿನ ವರ್ಷಗಳಲ್ಲಿ ಇದೇ ಬಾರಿ ಅತ್ಯಂತ ಹೆಚ್ಚು ದಾನ ಈ ದೇಗುಲಕ್ಕೆ ಹರಿದು ಬಂದಿದೆ ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ. ಪ್ರತಿ ಎರಡು ತಿಂಗಳಿಗೊಮ್ಮೆ ದಾನ ಪೆಟ್ಟಿಗೆಯನ್ನು ಹಲವು ಹಂತಗಳಲ್ಲಿ ತೆರೆದು ಅದರ ಒಟ್ಟು ಲೆಕ್ಕವನ್ನು ಮಾಡುತ್ತಾರೆ. ಮೊದಲ ಹಂತದ ಲೆಕ್ಕದಲ್ಲಿ ಸುಮಾರು 11.34 ಕೋಟಿ ರೂಪಾಯಿ, ಎರಡನೇ ಹಂತದಲ್ಲಿ 3.6 ಕೋಟಿ ರೂಪಾಯಿ, ಮೂರನೇ ಹಂತದಲ್ಲಿ 4.27 ಕೋಟಿ ರೂಪಾಯಿಯಷ್ಟು ದಾನ ಬಂದಿತ್ತು. ಇದೇ ಮೊದಲ ಬಾರಿ 23 ಕೋಟಿ ರೂಪಾಯಿಯಷ್ಟು ದಾನ ಹರಿದು ಬಂದಿದೆ.

ಇದನ್ನೂ ಓದಿ:ಪುಷ್ಪಾ-2 ನೋಡಲು ಹೋಗಿ ದುರಂತ ಅಂತ್ಯ ಕಂಡ ರೇವತಿ.. ಪತ್ನಿ ತ್ಯಾಗದ ಕಥೆಯನ್ನು ಹೇಳಿ ಕಣ್ಣೀರಿಟ್ಟ ಪತಿ

ಈ ಒಂದು ದೇವಾಲಯ ಚಿತ್ತೋಡಗಢ-ಉದಯಪುರ್ ಹೆದ್ದಾರಿಯಲ್ಲಿದೆ. ಚಿತ್ತೋಡಗಢನಿಂದ ಸುಮಾರು 40 ಕಿಲೋ ಮೀಟರ್ ದೂರದಲ್ಲಿದ್ದು. ಈ ಒಂದು ದೇವಾಲಯ ವೈಷ್ಣವರ ಆರಾಧ್ಯ ದೈವವಾಗಿದೆ. ಸುಮಾರು 1840ರಲ್ಲಿ ಈ ಮಂದಿರ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ಹಾಲು ಮಾರುವ ವ್ಯಕ್ತಿಯೊಬ್ಬ ತನ್ನ ಕನಸಿನಲ್ಲಿ ತನ್ನ ಗ್ರಾಮದಲ್ಲಿ ಮೂರು ಕೃಷ್ಣನ ಮೂರ್ತಿ ಮಣ್ಣಿನಲ್ಲಿ ಹೂತು ಹೋಗಿರುವುದನ್ನು ಕಂಡನಂತೆ ಅದನ್ನು ಹುಡುಕಿಕೊಂಡು ಹೋದಾಗ ಆತನಿಗೆ ಮೂರು ಮೂರ್ತಿಗಳು ಸಿಕ್ಕಿದವಂತೆ. ಅವುಗಳನ್ನು ಮಂಡಾಪಿಯಾ, ಬೊಡಸೊಡಾ ಹಾಗೂ ಚಾಪರ್​ನಲ್ಲಿ ಪ್ರತಿಷ್ಠಾಪಿಸಲಾಯ್ತಂತೆ. ಅಂದು ಮಂಡಪಿಯಾದಲ್ಲಿ ಪ್ರತಿಷ್ಠಾಪನೆಗೊಂಡ ಕೃಷ್ಣನೇ ಈಗ ಸನ್ವಾಲಿಯಾ ಧಾಮ್ ಎಂದು ಖ್ಯಾತಿ ಪಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment