ಕಬಿನಿ ಜಲಾಶಯದ ಬಫರ್ ಜೋನ್​ನಲ್ಲಿ 1 KM ಅನಧಿಕೃತ ರಸ್ತೆ ನಿರ್ಮಾಣ.. ನೋಟಿಸ್ ಜಾರಿ​

author-image
Bheemappa
Updated On
ಕಬಿನಿ ಜಲಾಶಯದ ಬಫರ್ ಜೋನ್​ನಲ್ಲಿ 1 KM ಅನಧಿಕೃತ ರಸ್ತೆ ನಿರ್ಮಾಣ.. ನೋಟಿಸ್ ಜಾರಿ​
Advertisment
  • ನಿಯಮದಂತೆ ಬಫರ್ ಜೋನ್​ನಲ್ಲಿ ಕಾಮಗಾರಿ ನಡೆಸಲೇಬಾರದು
  • 7 ದಿನ ಗಡುವು ಕೊಟ್ಟಿರುವ ಕಾವೇರಿ ನೀರಾವರಿ ನಿಗಮ ನಿಯಮಿತ
  • ಕಬಿನಿ ಭೂ ಸ್ವಾಧೀನ ಸ್ಥಳದಲ್ಲಿಯೇ ರಸ್ತೆ ನಿರ್ಮಾಣ ಮಾಡಲಾಗಿದೆ

ಮೈಸೂರು: ಕಬಿನಿ ಜಲಾಶಯದ ಬಫರ್ ಜೋನ್​ನಲ್ಲಿ 1 ಕಿಲೋ ಮೀಟರ್​ ರಸ್ತೆ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ರೆಸಾರ್ಟ್​ ಮಾಲೀಕರೊಬ್ಬರಿಗೆ ಕಾವೇರಿ ನೀರಾವರಿ ನಿಗಮ ನಿಯಮಿತ (ಕೆಎನ್​ಎನ್​ಎಲ್​) ದಿಂದ ನೋಟಿಸ್ ಜಾರಿ ಮಾಡಲಾಗಿದೆ.

ಸರಗೂರು ತಾಲೂಕಿನ ಸಿಂಗಪಟ್ಟಣ-ಕಿತ್ತೂರು ಗ್ರಾಮದ ಕಬಿನಿ ಹಿನ್ನೀರಿನಲ್ಲಿ‌ ರೆಸಾರ್ಟ್​ ಮಾಲೀಕರಾದ ದಿನೇಶ್ ರೆಡ್ಡಿ ಎಂಬವರು 1 ಕಿಲೋ ಮೀಟರ್​ ಅನಧಿಕೃತ ರಸ್ತೆ ನಿರ್ಮಾಣ ಮಾಡಿದ್ದಾರೆ. ಇವರು ಪಸೀತಿ ಹಾಸ್ಪಿಟಾಲಿಟಿ ಹೆಸರಿನ ರೆಸಾರ್ಟ್ ಮಾಲೀಕರಾಗಿದ್ದಾರೆ. ಕಬಿನಿ ಭೂ ಸ್ವಾಧೀನ ಸ್ಥಳದಲ್ಲೇ ರಸ್ತೆ ನಿರ್ಮಿಸಿದ್ದರಿಂದ ಕೆಎನ್​ಎನ್​ಎಲ್ ನೋಟಿಸ್ ಜಾರಿ ಮಾಡಿದ್ದು ಮೊದಲಿನಿಂತೆ ಯಥಾಸ್ಥಿತಿ ಕಾಪಾಡಿಕೊಳ್ಳಿ ಎಂದು ಹೇಳಿದೆ.

ಇದನ್ನೂ ಓದಿ:ಚಿನ್ನಾಭರಣ ಪ್ರಿಯರಿಗೆ ಒಳ್ಳೆಸುದ್ದಿ; ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ.. ಎಷ್ಟು ರೂಪಾಯಿ?

publive-image

ಗರಿಷ್ಠಮಟ್ಟ ರೇಖೆಯಿಂದ (ಹೆಚ್​​ಎಫ್​​ಎಲ್​)ನಿಂದ 100 ಮೀಟರ್ ಅಂತರದ ಒಳಗೆ ನಿರ್ಮಾಣ ಮಾಡಲಾಗಿದೆ. ಆದರೆ ಬಫರ್ ಜೋನ್​​ನಲ್ಲಿ 100 ಮೀಟರ್ ಅಂತರದಲ್ಲಿ ಯಾವುದೇ ಕಾಮಗಾರಿ ನಡೆಸುವಂತಿಲ್ಲ. ಕಾನೂನು ಉಲ್ಲಂಘಿಸಿ ರಸ್ತೆ ನಿರ್ಮಿಸಿರುವುದು ಅಕ್ಷಮ್ಯವಾಗಿದೆ. ಇದರಿಂದ ನಿರ್ಮಾಣ ಮಾಡಿರುವ ರಸ್ತೆಯನ್ನ 7 ದಿನ ಒಳಗೆ ತೆರವು ಮಾಡಬೇಕು. ಜೊತೆಗೆ ಮೊದಲಿನಿಂತೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೇ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎನ್​ಎನ್​ಎಲ್ ಖಡಕ್ ಎಚ್ಚರಿಕೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment