newsfirstkannada.com

ಕುಡಿಯೋ ನೀರು ವ್ಯರ್ಥ.. ಬೆಂಗಳೂರಿಗರಿಗೆ ಬರೋಬ್ಬರಿ 1 ಲಕ್ಷ 10 ಸಾವಿರ ರೂ. ದಂಡ!

Share :

Published March 25, 2024 at 4:25pm

Update March 25, 2024 at 5:07pm

    ಕುಡಿಯೋದಕ್ಕೆ ನೀರಿಲ್ಲ ಅಂತಿದ್ದ ಬೆಂಗಳೂರು ಜನ ಒಳ್ಳೆ ಮಾತಿಗೆ ಬಗ್ಗಲ್ಲ

    ಕುಡಿಯೋ ನೀರು ವ್ಯರ್ಥ ಮಾಡಿದವರಿಗೆ 5 ಸಾವಿರ ರೂಪಾಯಿ ದಂಡ

    ರಸ್ತೆಗೆ ನೀರು ಸುರಿದ್ರೆ, ಗಿಡಗಳಿಗೆ ಕುಡಿಯುವ ನೀರು ಬಳಸಿದವರಿಗೂ ಫೈನ್!

ಬೆಂಗಳೂರು: ಈ ವರ್ಷದ ಬೇಸಿಗೆ ಸಿಲಿಕಾನ್ ಸಿಟಿ ಮಂದಿಗೆ ಅಯ್ಯೋ ನೀರಿಲ್ಲ,. ನೀರಿಲ್ಲ ಅನ್ನೋ ಹಾಗೆ ಮಾಡಿದೆ. ಕುಡಿಯೋದಕ್ಕೆ, ತೊಳೆಯೋದಕ್ಕೆ ನೀರಿಲ್ಲ ಅಂತಿದ್ದ ಬೆಂಗಳೂರಿನ ಜನ ಒಳ್ಳೆಯ ಮಾತಿಗೆ ಬಗ್ಗಿಲ್ಲ. ಇರೋ ನೀರನ್ನ ವೇಸ್ಟ್ ಮಾಡಬೇಡಿ ಅಂತ ಎಷ್ಟೇ ಹೇಳಿದ್ರೂ ಮಾತು ಕೇಳಿಲ್ಲ. ಹೀಗಾಗಿ ಜಲಮಂಡಳಿಯ ಅಧಿಕಾರಿಗಳು ಇದೀಗ 22 ಬೆಂಗಳೂರಿನ ಕುಟುಂಬಗಳಿಗೆ ದಂಡ ಹಾಕಿದ್ದು, 1 ಲಕ್ಷ 10 ಸಾವಿರ ರೂಪಾಯಿಯನ್ನು ವಸೂಲಿ ಮಾಡಿದೆ.

ಸಿಲಿಕಾನ್ ಸಿಟಿಯಲ್ಲಿ ಜಲಕ್ಷಾಮದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಕುಡಿಯೋ ನೀರನ್ನು ವ್ಯರ್ಥ ಮಾಡಲು ಬಳಕೆ ಮಾಡಿದವರಿಗೆ ದಂಡಾಸ್ತ್ರ ಪ್ರಯೋಗ ಮಾಡಿದೆ. ಕುಡಿಯೋ ನೀರನ್ನು ಪೋಲು ಮಾಡುವವರಿಗೆ ಜಲಮಂಡಳಿ ಈಗಾಗಲೇ ಎಚ್ಚರಿಕೆ ನೀಡಿದ್ದು, ಅನ್ಯ ಬಳಕೆಗೆ ನೀರು ಬಳಸಿದವರಿಗೆ ದಂಡ ಹಾಕಿದೆ.

ಜಲಮಂಡಳಿಯು ವಿವಿಧ ಕಾರಣಗಳಿಗೆ ಕುಡಿಯೋ ನೀರು ವ್ಯರ್ಥ ಮಾಡಿದವರಿಗೆ 5 ಸಾವಿರ ರೂಪಾಯಿ ದಂಡ ನಿಗದಿಮಾಡಿತ್ತು. ಇದೀಗ ವಿವಿಧ ವಿಭಾಗಗಳಿಂದ ನೀರನ್ನ ಅನ್ಯ ಬಳಕೆಗೆ ಬಳಸಿದವರಿಂದ ಬರೋಬ್ಬರಿ 1 ಲಕ್ಷದ 10 ಸಾವಿರ ದಂಡ ವಸೂಲಿಯಾಗಿದೆ.

ಇದನ್ನೂ ಓದಿ: #HalfBucketBathChallenge; ಹನಿ ಹನಿ ನೀರು ಅತ್ಯಮೂಲ್ಯ.. ನ್ಯೂಸ್​ಫಸ್ಟ್ ವಾಹಿನಿ ಹಮ್ಮಿಕೊಂಡಿದೆ ಹೊಸ ಅಭಿಯಾನ

ಬೋರ್ ವೆಲ್ ಅಥವಾ ನಲ್ಲಿ ನೀರನ್ನು ವಾಹನ ತೊಳೆಯಲು ಬಳಸಬಾರದು. ರಸ್ತೆಗೆ ನೀರು ಸುರಿದವರು, ಗಿಡಗಳಿಗೆ ಕುಡಿಯುವ ನೀರು ಬಳಸಿದವರಿಗೂ ದಂಡ ಪ್ರಯೋಗದ ಮೂಲಕ ನೀರಿನ ಮಿತ ಬಳಕೆಯ ಪಾಠ ಮಾಡಲಾಗುತ್ತಿದೆ. ವಿವಿಧ ವಲಯಗಳಲ್ಲಿ ಜಲಮಂಡಳಿ ಅಧಿಕಾರಿಗಳು ಬೆಂಗಳೂರಿನಾದ್ಯಂತ ದಂಡ ಹಾಕಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿಯೋ ನೀರು ವ್ಯರ್ಥ.. ಬೆಂಗಳೂರಿಗರಿಗೆ ಬರೋಬ್ಬರಿ 1 ಲಕ್ಷ 10 ಸಾವಿರ ರೂ. ದಂಡ!

https://newsfirstlive.com/wp-content/uploads/2023/10/water-1.jpg

Load More