/newsfirstlive-kannada/media/post_attachments/wp-content/uploads/2024/12/CAR-1.jpg)
ಮಾರುತಿ ಸುಜುಕಿ (Maruti Suzuki) ಕಾರುಗಳು ಸಾಮಾನ್ಯ ಜನರ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ. ಅವು ಉತ್ತಮ ಮೈಲೇಜ್ ಕೂಡ ನೀಡುತ್ತವೆ. ಅದರಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ (Wagonr) ಕೂಡ ಒಂದು. ಕಂಪನಿಯು ಈ ಕಾರಿನ ಸಿಎನ್‌ಜಿ ಆವೃತ್ತಿಯನ್ನು ಮಾರಾಟ ಮಾಡ್ತಿದೆ.
ಒಂದು ವೇಳೆ ನೀವು Wagonr ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ಪೂರ್ಣ ಮೊತ್ತವನ್ನು ಪಾವತಿಸುವ ಬದಲು ಇಎಂಐಗೆ ಅವಕಾಶ ಇದೆ. EMI ಪವಾತಿಸುವ ಮತ್ತು ಡೌನ್ಪೇಮೆಂಟ್ ಎಷ್ಟು ಮಾಡಬೇಕು ಅನ್ನೋ ವಿವರ ಇಲ್ಲಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಸಿಎನ್‌ಜಿ ಬೇಸ್ ಮಾಡೆಲ್ Lxi ಆನ್ ರೋಡ್ನ ಬೆಲೆ 6,45,000 ರೂಪಾಯಿ. ಇಎಂಐ ಮೂಲಕ ಖರೀದಿಸೋದಾದ್ರೆ ನೀವು ಒಂದು ಲಕ್ಷ ರೂಪಾಯಿ ಡೌನ್ಪೇಮೆಂಟ್ ಮಾಡಿದರೆ ಸಾಕು.
ಪ್ರತಿ ತಿಂಗಳು ಎಷ್ಟು EMI ಪಾವತಿಸಬೇಕು?
ಈ ಕಾರನ್ನು ಖರೀದಿಸಲು ನೀವು ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಯಿಂದ 5 ವರ್ಷಗಳವರೆಗೆ ಶೇಕಡಾ 9.8 ರ ಬಡ್ಡಿದರದಲ್ಲಿ ಸಾಲ ತೆಗೆದುಕೊಂಡರೆ.. ನಿಮಗೆ 5.45 ಲಕ್ಷ ರೂಪಾಯಿ ಸಾಲ ಲಭ್ಯ ಇರಲಿದೆ. ಬ್ಯಾಂಕ್ ಅಥವಾ ಕಂಪನಿಯಿಂದ ಪಡೆದ ಸಾಲವನ್ನು EMI ರೂಪದಲ್ಲಿ ಮರುಪಾವತಿ ಮಾಡಬೇಕು. 5 ವರ್ಷಗಳ ಬಡ್ಡಿ ದರ ಸೇರಿದಂತೆ ಒಟ್ಟು 6.91 ಲಕ್ಷ ರೂಪಾಯಿ ಬ್ಯಾಂಕ್‌ಗೆ ಪಾವತಿಸಬೇಕು. ಈ ಸಾಲವನ್ನು ಮರುಪಾವತಿಸಲು ತಿಂಗಳಿಗೆ 11,000 EMI ಪಾವತಿಸಬೇಕು. ಇನ್ನು ಸಾಲ ಮತ್ತು ಬಡ್ಡಿ ದರವು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಅವಲಂಬಿಸಿರುತ್ತದೆ. ವ್ಯಾಗನ್ಆರ್ನ ಮೈಲೇಜ್ 32.52 ಕಿಮೀ ನಿಂದ 34.05 ಕಿಮೀ ಇರುತ್ತದೆ
ಇದನ್ನೂ ಓದಿ:ಜಳಕ ಮಾಡಿಸೋಕೂ ಬಂದೈತ್ರಿ ಮಷಿನ್.. AI ಚಾಲಿತ ಈ ಡಬ್ಬದಲ್ಲಿ ಜಸ್ಟ್ ಕೂತ್ರೆ ಸಾಕು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ