newsfirstkannada.com

ವರ್ಷಕ್ಕೆ 1 ಲಕ್ಷ, ಉದ್ಯೋಗದಲ್ಲಿ ಶೇ.50 ಮೀಸಲಾತಿ.. ನಾರಿಯರಿಗೆ ಕಾಂಗ್ರೆಸ್ 5 ಗ್ಯಾರಂಟಿ ಭರವಸೆ

Share :

Published March 13, 2024 at 2:09pm

    ಬಡ ಕುಟುಂಬದ ಓರ್ವ ಮಹಿಳೆಗೆ ವಾರ್ಷಿಕ 1 ಲಕ್ಷ ರೂಪಾಯಿ

    ಅಂಗನವಾಡಿ, ಆಶಾ, ಕಾರ್ಯಕರ್ತೆಯರ ವೇತನ 2 ಪಟ್ಟು ಹೆಚ್ಚಳ

    ಉದ್ಯೋಗದಲ್ಲಿರುವ ಮಹಿಳೆಯರಿಗೆ ಹಾಸ್ಟೆಲ್ ಸಂಖ್ಯೆ ದ್ವಿಗುಣ

ಮುಂಬೈ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ದೇಶದ ನಾರಿಯರಿಗೆ ಬಂಪರ್ ಯೋಜನೆಗಳ ಭರವಸೆ ನೀಡಿದೆ. ನಾರಿ ನ್ಯಾಯ್ ಗ್ಯಾರಂಟಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಹಿಳೆಯರಿಗೆ 5 ಗ್ಯಾರಂಟಿಯನ್ನು ಈಡೇರಿಸುವ ಘೋಷಣೆ ಮಾಡಲಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯ ಯಾತ್ರೆ ಮಹಾರಾಷ್ಟ್ರದ ಧುಲೆಯಲ್ಲಿ ಮುಂದುವರಿದಿದೆ. ಈ ಯಾತ್ರೆಯ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 5 ಗ್ಯಾರಂಟಿಗಳ ಮಹಾಲಕ್ಷ್ಮಿ ಸ್ಕೀಮ್ ದೇಶಾದ್ಯಂತ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್‌ ನಾರಿ ನ್ಯಾಯ್ ಗ್ಯಾರಂಟಿ

1. ಬಡ ಕುಟುಂಬದ ಓರ್ವ ಮಹಿಳೆಗೆ ವಾರ್ಷಿಕ 1 ಲಕ್ಷ ರೂಪಾಯಿ
2. ಅದಿ ಅಬಾದಿ ಪೂರಾ ಹಕ್ಕು ಸ್ಕೀಮ್‌ನಡಿ ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 50ರಷ್ಟು ಮೀಸಲಾತಿ
3. ಶಕ್ತಿ ಕಾ ಸಮ್ಮಾನ್ ಸ್ಕೀಮ್ ನಡಿ ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರ ವೇತನ 2 ಪಟ್ಟು ಹೆಚ್ಚಳ
4. ಅಧಿಕಾರ ಮೈತ್ರಿ ಸ್ಕೀಮ್‌ನಡಿ ಮಹಿಳೆಯರಿಗೆ ಕಾನೂನಿನ ನೆರವು
5. ಸಾವಿತ್ರಿಭಾಯಿ ಫುಲೆ ಹಾಸ್ಟೆಲ್ ಸ್ಕೀಮ್ ನಡಿ ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಹಾಸ್ಟೆಲ್ ಸಂಖ್ಯೆ ದ್ವಿಗುಣದ ಭರವಸೆ

ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಪಕ್ಷದತ್ತ ಸೆಳೆಯಲು ಕಾಂಗ್ರೆಸ್‌ ಈ 5 ಗ್ಯಾರಂಟಿ ಸ್ಕೀಮ್‌ಗಳನ್ನ ಘೋಷಣೆ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗಾಗಿ ನಾರಿ ನ್ಯಾಯ್ ಗ್ಯಾರಂಟಿ ಸ್ಕೀಮ್ ಜಾರಿಗೆ ತರುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ಷಕ್ಕೆ 1 ಲಕ್ಷ, ಉದ್ಯೋಗದಲ್ಲಿ ಶೇ.50 ಮೀಸಲಾತಿ.. ನಾರಿಯರಿಗೆ ಕಾಂಗ್ರೆಸ್ 5 ಗ್ಯಾರಂಟಿ ಭರವಸೆ

https://newsfirstlive.com/wp-content/uploads/2023/11/Mallikarjun-Kharge.jpg

Load More