ಒಂದೇ ಮಂಟಪದಲ್ಲಿ ಅಣ್ಣ-ತಮ್ಮನ ಜೊತೆ ಸಪ್ತಪದಿ ತುಳಿದ ಯುವತಿ.. ಕಲಿಯುಗದ ದ್ರೌಪದಿ ಕಲ್ಯಾಣ..!

author-image
Ganesh
Updated On
ಒಂದೇ ಮಂಟಪದಲ್ಲಿ ಅಣ್ಣ-ತಮ್ಮನ ಜೊತೆ ಸಪ್ತಪದಿ ತುಳಿದ ಯುವತಿ.. ಕಲಿಯುಗದ ದ್ರೌಪದಿ ಕಲ್ಯಾಣ..!
Advertisment
  • ಹಿಮಾಚಲದ ಹಾಥಿ ಸಮುದಾಯದಲ್ಲಿ ಬಹುಪತಿತ್ವ ಆಚರಣೆ
  • ಒಂದೇ ವೇದಿಕೆಯಲ್ಲಿ ಸಹೋದರರ ಜೊತೆ ಯುವತಿ ಮದುವೆ
  • ಬಹು ಸಹೋದರರು ಒಂದೇ ಹೆಂಡತಿಯನ್ನು ಹಂಚಿಕೊಳ್ಳುತ್ತಾರೆ

ಹಿಮಾಚಲ ಪ್ರದೇಶದಲ್ಲಿ ವಿಚಿತ್ರ ಪದ್ಧತಿ ಬೆಳಕಿಗೆ ಬಂದಿದೆ. ಹಟ್ಟಿ ಬುಡಕಟ್ಟಿನ ಇಬ್ಬರು ಸಹೋದರರು ಒಂದೇ ಹುಡುಗಿಯನ್ನು ವಿವಾಹವಾಗಿದ್ದು, ಕಲಿಯುಗದಲ್ಲಿ ದ್ವಾಪರ ಯುಗದ ದ್ರೌಪದಿಯನ್ನ ನೆನಪಿಸಿದೆ. ಇಬ್ಬರು ಸಹೋದರರು ಒಂದೇ ಸಮಯದಲ್ಲಿ ಒಂದೇ ಹುಡುಗಿಯನ್ನು ಮದುವೆ ಆಗೋದು ಹೇಗೆ ಎಂದು ನೀವು ಆಶ್ಚರ್ಯ ಪಡೆಬಹುದು.. ಆದ್ರೆ ಹಾಥಿ ಸಮುದಾಯದ, ಇಂದಿಗೂ ಶತಮಾನದ ಆಚರಣೆಯನ್ನು ಉಳಿಸಿಕೊಂಡು ಬಂದಿದೆ.

ಇದನ್ನೂ ಓದಿ: ಇಡೀ ದೇಶದಲ್ಲೇ ಒಂದೇ ಒಂದು ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು..?

ದ್ವಾಪರ ಯುಗದಲ್ಲಿ ದ್ರೌಪದಿ ಐವರು ಸಹೋದರರಾದ ಪಾಂಡವರನ್ನು ವಿವಾಹವಾಗಿದ್ದು, ಬಹುಪತಿತ್ವ ಆಚರಣೆಯಲ್ಲಿತ್ತು ಅಂತಾ ಕತೆಗಳು ಹೇಳುತ್ತವೆ. ಆದ್ರೆ ಕಲಿಯುಗದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ, ಬಹುಪತ್ನಿತ್ವವಾಗಲಿ ಬಹುಪತಿತ್ವವಾಗಲಿ ಕಾನೂನು ಬಾಹಿರ. ಆದ್ರೂ ಕೆಲವೊಂದು ಭಾಗಗಳಲ್ಲಿ ಬಹುಪತಿತ್ವ ಇನ್ನೂ ಆಚರಣೆಯಲ್ಲಿದೆ.

ಹಿಮಾಚಲದ ಹಾಥಿ ಸಮುದಾಯದಲ್ಲಿ ಬಹುಪತಿತ್ವ ಆಚರಣೆ

ಇದು ವಿಚಿತ್ರ ಎನಿಸಿದ್ರು ಸತ್ಯ.. ಹಿಮಾಚಲ ಪ್ರದೇಶದಲ್ಲಿ ನಡೆದ ಬಹುಪತಿತ್ವ ಸಂಪ್ರದಾಯವು ಎಲ್ಲರ ಗಮನ ಸೆಳೆಯುತ್ತಿದೆ. ಸಿರ್ಮೌರ್ ಜಿಲ್ಲೆಯ ಶಿಲೈ ಗ್ರಾಮದ ಪ್ರದೀಪ್ ನೇಗಿ ಮತ್ತು ಕಪಿಲ್ ನೇಗಿ ಎಂಬುವವರು.. ಕುನ್ಹಾಟ್ ಗ್ರಾಮದ ಸುನೀತಾ ಚೌಹಾಣ್ ಅವರನ್ನು ಹಟ್ಟಿ ಸಮುದಾಯದ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಮೂವರು ಕೂಡ ಸಂಪೂರ್ಣ ಪರಸ್ಪರ ಒಪ್ಪಿಗೆ ಮತ್ತು ಸಮುದಾಯದ ಜನರ ಭಾಗವಹಿಸುವಿಕೆಯೊಂದಿಗೆ ನಡೆದ ಈ ಕಾರ್ಯಕ್ರಮವು ಬಹುಪತಿತ್ವದ ಅಪರೂಪದ ಮುಕ್ತ ಆಚರಣೆಯಾಗಿದೆ.

ಇದನ್ನೂ ಓದಿ: ‘ಇಲ್ಲ, ಇಲ್ಲ ಇನ್ನೂ ಉಸಿರು ಇದೆ..’ ಪ್ರಿಯಕರ ಬಾವನಿಗೆ ಚಾಟ್ ಮಾಡುತ್ತಲೇ ಪತಿಯನ್ನ ಮುಗಿಸಿದ ಪತ್ನಿ..!

ಹಿರಿಯ ಸಹೋದರ ಪ್ರದೀಪ್, ಜಲಶಕ್ತಿ ಇಲಾಖೆಯಲ್ಲಿ ಕೆಲಸ ಮಾಡುತ್ತಾನೆ. ಆದರೆ ಕಪಿಲ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾನೆ. ಅದಾಗ್ಯೂ ಸಹೋದರರು ಸುನೀತಾ ಜತೆ ಜೀವನ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಇದು ಸಹೋದರರು ಹೆಂಡತಿಯನ್ನು ಹಂಚಿಕೊಳ್ಳುವ ಒಂದು ಪ್ರಾಚೀನ ಆಚರಣೆಯಾಗಿದೆ.

ಬಹುಪತಿತ್ವ ಸಂಪ್ರದಾಯಕ್ಕೆ ಕಾರಣವೇನು?

  • ಜೋಡಿದಾರನ್ ಅಥವಾ ದ್ರೌಪದಿ ಪ್ರಥ ಎಂಬ ಬಹುಪತಿತ್ವ ಆಚರಣೆ
  • ಹಿಮಾಚಲದ ಹಟ್ಟಿ ಸಮುದಾಯದ ಒಂದು ಸಾಂಪ್ರದಾಯಿಕ ಪದ್ಧತಿ
  • ಬಹು ಸಹೋದರರು ಒಂದೇ ಹೆಂಡತಿಯನ್ನು ಹಂಚಿಕೊಳ್ಳುತ್ತಾರೆ
  • ಈ ಪದ್ಧತಿಯು ಕುಟುಂಬದ ಐಕ್ಯತೆಯನ್ನು ಕಾಪಾಡುವ ಉದ್ದೇಶ
  • ಪೂರ್ವಜರ ಭೂಮಿಯ ವಿಭಜನೆಯನ್ನು ತಡೆಯುವುದು
  • ಮಹಿಳೆ ವಿಧವೆಯಾಗಿ ಉಳಿಯದಂತೆ ನೋಡಿಕೊಳ್ಳುವ ಉದ್ದೇಶ
  • ಹಿಮಾಚಲ ಪ್ರದೇಶ, ಉತ್ತರಾಖಂಡ್​ ಭಾಗದಲ್ಲಿ ಪದ್ಧತಿ ಆಚರಣೆ
  • ಆಧುನಿಕ ಸಂಪ್ರದಾಯಗಳ ಪ್ರಭಾವದಿಂದಾಗಿ ಇಂದು ಬಹಳ ಕಡಿಮೆ

ಈ ಬಹುಪತಿತ್ವದ ಪದ್ಧತಿ ಬಗ್ಗೆ ವಧು ಮತ್ತು ವರರು ಸಂತಸದಿಂದಲೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಮ್ಮ ಇತಿಹಾಸದ ಬಗ್ಗೆ ನಮಗೆ ಹೆಮ್ಮೆ ಇದೆ. ಇದು ಎಲ್ಲರ ಒಮ್ಮತದ ನಿರ್ಧಾರ ಎಂದು ಹೇಳಿದ್ದಾರೆ. ಒಟ್ಟಾರೆ.. ದ್ವಾಪರ ಯುಗದಲ್ಲಿ ದ್ರೌಪದಿ ಪಂಚ ಪಾಂಡವರನ್ನು ಮದುವೆ ಆಗಿ, ಬಹುಪತಿತ್ವ ಸ್ವೀಕರಿಸಿದ್ಲು.. ಈ ಕಲಿಯುಗದಲ್ಲಿ, ಹಿಮಾಚಲ ಪ್ರದೇಶದ ಹಾಥಿ ಸಮುದಾಯವು, ಶತಮಾನಗಳ ಹಿಂದಿನ ಪದ್ಧತಿಯನ್ನೂ ಇನ್ನು ಉಳಿಸಿಕೊಂಡು.. ಆಚರಿಸಿಕೊಂಡು ಬರ್ತಿರೋದು ನಿಜಕ್ಕೂ ಅಚ್ಚರಿ.

ಇದನ್ನೂ ಓದಿ: ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯುವ ಪ್ಲಾನ್​.. ಕನ್ನಡಿಗನ ಮೇಲೆ ಕಣ್ಣಿಟ್ಟ ಕೆಕೆಆರ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment