ಅಚ್ಚರಿ ಅನಿಸಿದರೂ ಇದು ಸತ್ಯ.. 1 ವರ್ಷದ ಮಗು ಕಚ್ಚಿದ್ದಕ್ಕೆ ಸ್ಥಳದಲ್ಲೇ ಜೀವ ಬಿಟ್ಟ ನಾಗರ ಹಾವು!

author-image
Bheemappa
Updated On
ಅಚ್ಚರಿ ಅನಿಸಿದರೂ ಇದು ಸತ್ಯ.. 1 ವರ್ಷದ ಮಗು ಕಚ್ಚಿದ್ದಕ್ಕೆ ಸ್ಥಳದಲ್ಲೇ ಜೀವ ಬಿಟ್ಟ ನಾಗರ ಹಾವು!
Advertisment
  • ಇಲ್ಲಿ ಮಗು ಕಚ್ಚಿದ್ದಕ್ಕೇ ಹಾವೇ ಉಸಿರು ಚೆಲ್ಲಿದೆ ಎನ್ನುವುದು ವಿಚಿತ್ರ
  • ತಾಯಿ ಸೌದೆ ತೆಗೆದುಕೊಳ್ಳುವಾಗ ಮಗು ಬಳಿ ಬಂದ ನಾಗರ ಹಾವು
  • ನಾಗರ ಹಾವಿಗಿಂತ 1 ವರ್ಷದ ಮಗುವಿನಲ್ಲಿ ಹೆಚ್ಚು ವಿಷ ಇದೆಯಾ?

ಪಾಟ್ನಾ: ಬಿಹಾರದ ಬೆಟ್ಟಿಯಾ ಎಂಬ ಹಳ್ಳಿಯಲ್ಲಿ ಅಶ್ಚರ್ಯಕಾರಿ ಘಟನೆಯೊಂದು ನಡೆದಿದೆ. ಹಾವು ಕಚ್ಚಿ ಮನುಷ್ಯರು ಉಸಿರು ಚೆಲ್ಲುವುದು ಸಾಮಾನ್ಯ. ಆದರೇ, ಇಲ್ಲಿ ಹಾವು ಅನ್ನು 1 ವರ್ಷದ ಮಗು ಕಚ್ಚಿ ಸಾಯಿಸಿದೆ. ಮಗು ಕಚ್ಚಿದ್ದರಿಂದಲೇ ಹಾವು ಸತ್ತು ಹೋಗಿದೆ ಎಂದು ಹೇಳಲಾಗುತ್ತಿದೆ.

ಮನೆಯ ಬಳಿ ಮಗು ಆಟವಾಡುತ್ತಿದ್ದಾಗ, ಹಾವು ಬಂದಿದೆ. ಹಾವು ಅನ್ನು ಮಗು ಗೋವಿಂದ, ತನ್ನ ಕೈ ಸುತ್ತ ಸುರಳಿಯಾಕಾರದಲ್ಲಿ ಸುತ್ತಿಕೊಂಡಿದೆ. ಬಳಿಕ ಹಾವಿಗೆ ತನ್ನ ಸಣ್ಣ ಹಲ್ಲುಗಳಿಂದ ಮಗು ಕಚ್ಚಿದೆ. ಇದರಿಂದಾಗಿ ಹಾವು ಸ್ಥಳದಲ್ಲೇ ಜೀವ ಬಿಟ್ಟಿದೆ. ಇದಾದ ಮೇಲೆ ಮಗು ಕೂಡ ಅಸ್ವಸ್ಥವಾಗಿದೆ. ತಕ್ಷಣವೇ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಇದನ್ನೂ ಓದಿ: ವಿಶ್ವದಲ್ಲಿ ಪ್ರಧಾನಿ ಮೋದಿಯೇ ನಂ- 1.. ಅಮೆರಿಕ ಅಧ್ಯಕ್ಷ ಟ್ರಂಪ್​ ಅಲ್ಲವೇ ಅಲ್ಲ, 2ನೇ ಸ್ಥಾನದಲ್ಲಿ ಯಾರಿದ್ದಾರೆ?

publive-image

ಹಾವು ಮಗುವಿಗೆ ತುಂಬಾ ಹತ್ತಿರದಲ್ಲಿತ್ತು. ಬಹುಶಃ ಮಗುವನ್ನು ನೋಡಿ ಹಾವು ಹೆದರಿಕೊಂಡಿರಬಹುದು. ಬಳಿಕ ಮಗು ತನ್ನ ಕೈಯಿಂದ ಹಾವು ಅನ್ನು ಹಿಡಿದುಕೊಂಡಿದೆ. ತನ್ನ ಸಣ್ಣ ಹಲ್ಲುಗಳಿಂದ ಹಾವಿಗೆ ಕಚ್ಚಿದೆ. ಹಾವು ಸ್ಥಳದಲ್ಲೇ ಜೀವ ಬಿಟ್ಟಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈಗ ಮಗು ಗೋವಿಂದನ ಸ್ಥಿತಿ ಹದಗೆಡಲು ಆರಂಭವಾಯಿತು. ತಕ್ಷಣವೇ ಪೋಷಕರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆದೊಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಅಲ್ಲಿಂದ ಬೆಟ್ಟಿಯಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈಗ ಮಗುವಿನ ಆರೋಗ್ಯ ಸ್ಥಿರವಾಗಿದೆ, ವೈದ್ಯರು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಹೇಳಿದ್ದಾರೆ. ಹಾವು ಮಗುವಿನ ಬಳಿ ಕಾಣಿಸಿಕೊಂಡಾಗ, ಮಗುವಿನ ತಾಯಿ ಹತ್ತಿರದಲ್ಲೇ ಸೌದೆ ಸಂಗ್ರಹಿಸುತ್ತಿದ್ದರು ಎಂದು ಮಗುವಿನ ಅಜ್ಜಿ ಮಾತೇಶ್ವರಿ ದೇವಿ ಹೇಳಿದ್ದಾರೆ. ಹಾವು ಹೊರಬಂದಿತ್ತು. ಮಗು ಅದಕ್ಕೆ ಹೊಡೆದಿದೆ. ಬಳಿಕ ಹಲ್ಲಿನಿಂದ ಕಚ್ಚಿದೆ ಎಂದು ಅಜ್ಜಿ ಮಾತೇಶ್ವರಿ ದೇವಿ ಹೇಳಿದ್ದಾರೆ.


">July 26, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment