ಎದುರಿಗೆ ಬಂದ ಹಾವನ್ನು ಆಟಿಕೆ ಎಂದು ತಿಳಿದ ಒಂದು ವರ್ಷದ ಪೋರ
ಆಟಿಕೆಯನ್ನು ಕಚ್ಚುವಂತೆ ಹಾವನ್ನು ಕಚ್ಚಿ ಕೊಂದೇ ಬಿಟ್ಟ ವರ್ಷದ ಬಾಲಕ
ಮಗನನ್ನು ಆಸ್ಪತ್ರೆಗೆ ಕರೆದುಕೊಂಡ ಹೋದ ತಾಯಿಗೆ ಕಾದಿತ್ತು ಆಶ್ಚರ್ಯ!
ಗಯಾ: ಸಾಮಾನ್ಯವಾಗಿ ಮನುಷ್ಯರಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆಯನ್ನು ನೀವು ನೋಡಿಯೂ ಇರ್ತಿರಾ, ಕೇಳಿಯೂ ಇರ್ತಿರಾ. ಆದ್ರೆ ಮನುಷ್ಯನೇ ಹಾವನ್ನು ಕಚ್ಚಿ ಕೊಂದ ಘಟನೆ ಕೇಳಿರೋದು ಅಪರೂಪ. ಬಿಹಾರದಲ್ಲಿ ಇಂತಹದೊಂದು ಅಚ್ಚರಿಯ ಘಟನೆ ನಡೆದು ಹೋಗಿದೆ, ಮೂರು ಅಡಿ ಉದ್ದದ ಹಾವನ್ನು ಒಂದು ವರ್ಷದ ಪುಟ್ಟ ಪೋರನೊಬ್ಬ ಕಚ್ಚಿ ಸಾಯಸಿ ಬಿಟ್ಟಿದ್ದಾನೆ. ಆ ಪುಟ್ಟ ಹುಡುಗನ ತಾಯಿ ನೋಡುವವರೆಗೂ ಆತ ಹಾವನ್ನು ಕಚ್ಚುತ್ತಲೇ ಇದ್ದ. ದೃಶ್ಯ ಕಂಡು ಹೈರಾಣಾದ ತಾಯಿಯೇ ಮಗುವಿನ ಬಾಯಿಂದ ಹಾವನ್ನು ಕಿತ್ತೆಸೆದಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ! ಐಪಿಎಲ್ನಿಂದ ಬಿಸಿಸಿಐಗೆ ಬಂದ ಆದಾಯ ಎಷ್ಟು ಸಾವಿರ ಕೋಟಿ? ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!
ಇದು ಬಿಹಾರದ ಗಯಾ ಜಿಲ್ಲೆಯಲ್ಲಿ ಕತ್ಹೇಪುರ ಅನ್ನೋ ಗ್ರಾಮದಲ್ಲಿ ನಡೆದಿರುವ ಘಟನೆ. ಬಾಲಕ ಅಂಗಳದಲ್ಲಿ ಆಟ ಆಡುತ್ತಿರುವಾಗ ಹಾವೊಂದು ಬಂದಿದೆ. ಅದನ್ನು ಆಟಿಗೆಯೆಂದು ತಿಳಿದ ಒಂದು ವರ್ಷದ ಬಾಲಕ ಅದರೊಂದಿಗೆ ಆಟವಾಡಲು ಶುರು ಮಾಡಿದ್ದಾನೆ. ಕೊನೆಗೆ ಬಾಯಿಯಲ್ಲಿಟ್ಟುಕೊಂಡು ಆಟಿಗೆಯನ್ನು ಕಚ್ಚುವಂತೆ ಕಚ್ಚಿದ್ದಾನೆ. ಹಾವಿನ ಮಧ್ಯಭಾಗವನ್ನು ಬಾಲಕ ಕಚ್ಚಿದ್ದು ಹಾವು ಅಲ್ಲಿಯೇ ಸತ್ತು ಹೋಗಿದೆ.
ಇದನ್ನೂ ಓದಿ: ಸಿಎಂ ಸಿದ್ದು ಬೆನ್ನಲ್ಲೇ HDKಗೂ ಸಂಕಷ್ಟ.. ಪ್ರಾಸಿಕ್ಯೂಷನ್‌ಗೆ ಗವರ್ನರ್ ಅನುಮತಿ ಕೊಡ್ತಾರಾ?
ಬಾಲಕನ ಬಾಯಲ್ಲಿ ಹಾವನ್ನು ಕಂಡ ತಾಯಿಗೆ ಗಾಬರಿ
ಮಗುವನ್ನು ಆಡಲು ಬಿಟ್ಟು ತನ್ನ ಕೆಲಸದಲ್ಲಿ ನಿರತರಾಗಿದ್ದ ತಾಯಿ, ಆಕಸ್ಮಾತಾಗಿ ಮಗು ಇರುವ ಕಡೆಗೆ ಬಂದಾಗ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾಳೆ. ಮಗುವಿನ ಬಾಯಲ್ಲಿದ್ದ ಹಾವನ್ನು ಕಂಡು ಬೆಕ್ಕಸ ಬೆರಗಾದ ತಾಯಿ, ಓಡಿ ಬಂದು ಮಗುವಿನ ಬಾಯಲ್ಲಿದ್ದ ಹಾವನ್ನು ಕಿತ್ತು ದೂರ ಎಸೆದಿದ್ದಾಳೆ. ಕೊನೆಗೆ ಹಾವು ಸತ್ತಿದೆಯಾ ಬದುಕಿದೆಯಾ ಎಂದು ನೋಡಿದಾಗ ಹಾವು ಸತ್ತು ಹೋಗಿತ್ತು.
ಆಸ್ಪತ್ರೆಗೆ ದೌಡಾಯಿಸಿದ ತಾಯಿ, ವೈದ್ಯರು ಹೇಳಿದ್ದೇನು.
ವಿಷಕಾರಿ ಹಾವನ್ನು ಮಗುವು ಕಚ್ಚಿ ಸಾಯಿಸಿದ್ದನ್ನು ಕಂಡ ತಾಯಿ ಕೂಡಲೇ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಓಡಿದ್ದಾಳೆ. ಮಗುವಿನ ದೇಹದಲ್ಲಿ ವಿಷವೇನಾದ್ರೂ ಹೋಗಿದೆಯಾ. ಅಥವಾ ಬೇರೆ ರೀತಿಯ ಅಪಾಯವೆನಾದ್ರೂ ಆಗಿದೆಯಾ ಎಂದು ಪರೀಕ್ಷೆ ಮಾಡಿಸಿದ್ದಾಳೆ. ಪರೀಕ್ಷೆ ಮಾಡಿದ ವೈದ್ಯರು ಕೂಡ ಬೆರಗಾಗಿ ಹೋಗಿದ್ದಾರೆ. ನೋಡಿದ್ರೆ ಬಾಲಕನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿರಲಿಲ್ಲ. ಪುಟ್ಟ ಪೋರ ಆರಾಮಾಗಿಯೇ ಇದ್ದ. ಸದ್ಯ ಬಾಲಕನ ಈ ಕಾರ್ಯ ಬಹುಚರ್ಚಿತ ವಿಷಯವಾಗಿದೆ. ಅವನು ಹಾವನ್ನು ಕಚ್ಚಿ ಕೊಂದ ವಿಷಯ ಸುದ್ದಿ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಹಾವಿನಿಂದ ಕಚ್ಚಿಸಿಕೊಂಡು ಮನುಷ್ಯರು ಸಾಯುತ್ತಾರೆ. ಆದ್ರೆ ಈ ಪೋರ ಹಾವನ್ನೇ ಕಚ್ಚಿ ಕೊಂದಿದ್ದಾನೆ ಎಂದು ಎಲ್ಲರೂ ಅಚ್ಚರಿಯ ಜೊತೆಗೆ ಭೇಷ್ ಕೂಡ ಅಂತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ