ಬದುಕಿದ ಕಂದಮ್ಮ.. ಮಂಗಳೂರಲ್ಲಿ ಮನೆಯ ಅವಶೇಷಗಳಡಿ ಸಿಲುಕಿದ್ದ 1 ವರ್ಷದ ಮಗು ರಕ್ಷಣೆ

author-image
admin
Updated On
ಬದುಕಿದ ಕಂದಮ್ಮ.. ಮಂಗಳೂರಲ್ಲಿ ಮನೆಯ ಅವಶೇಷಗಳಡಿ ಸಿಲುಕಿದ್ದ 1 ವರ್ಷದ ಮಗು ರಕ್ಷಣೆ
Advertisment
  • ಮನೆಯ ಅವಶೇಷಗಳಡಿ ಮಹಿಳೆ ಮತ್ತು ಇಬ್ಬರು ಮಕ್ಕಳು
  • ಉಳ್ಳಾಲದ ದೇರಳಕಟ್ಟೆ ಮೊಂಟೆದ ಪಂಬದ ಹಿತ್ಲುವಿನಲ್ಲಿ
  • ಅವಶೇಷಗಳಡಿ ಸಿಲುಕಿದ್ದ ಒಂದು ವರ್ಷದ ಮಗು ಆರುಷ್‌

ನಿರಂತರ ಸುರಿಯುತ್ತಿರುವ ಮಳೆ, ಗುಡ್ಡ ಕುಸಿತದಿಂದ ಮಂಗಳೂರಲ್ಲಿ ಒಂದೇ ಕುಟುಂಬದ 5 ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ. ಕಾಂತಪ್ಪ ಪೂಜಾರಿ ಎಂಬುವರ ಮನೆ ಮೇಲೆ ಗುಡ್ಡ ಕುಸಿದಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

ಉಳ್ಳಾಲದ ದೇರಳಕಟ್ಟೆ ಮೊಂಟೆದ ಪಂಬದ ಹಿತ್ಲುವಿನಲ್ಲಿ ಈ ಘಟನೆ ನಡೆದಿದೆ. ಕಾಂತಪ್ಪ ಪೂಜಾರಿ ಅವರ ಮನೆ ಮೇಲೆ ಗುಡ್ಡ ಬಿದ್ದಿದ್ದರಿಂದ ಮನೆಯ ಅವಶೇಷಗಳಡಿ ಮಹಿಳೆ ಮತ್ತು ಇಬ್ಬರು ಮಕ್ಕಳು ಸಿಲುಕಿದ್ದು, ಮೂವರ ರಕ್ಷಣೆಗಾಗಿ NDRF, SDRF ನಿಂದ ಬಹಳ ಪ್ರಯತ್ನ ಮಾಡಿದೆ.

publive-image

ಇದನ್ನೂ ಓದಿ: ಕರ್ನಾಟಕಕ್ಕೆ ಕರಾಳ ಶುಕ್ರವಾರ.. ಪ್ರತ್ಯೇಕ ಘೋರ ದುರಂತಗಳಲ್ಲಿ 8 ಮಂದಿ ಸಾವು 

ರಕ್ಷಣಾ ಕಾರ್ಯಾಚರಣೆಯಲ್ಲಿ ಒಂದು ಮಗು ಸಾವನ್ನಪ್ಪಿದ್ರೆ, ಅವಶೇಷಗಳಡಿ ಸಿಲುಕಿದ್ದ ಒಂದು ವರ್ಷದ ಮಗು ಆರುಷ್‌ ಎಂಬ ಪುಟ್ಟ ಕಂದಮ್ಮನನ್ನು ರಕ್ಷಣೆ ಮಾಡಲಾಗಿದೆ. ಉಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment