Advertisment

ಪರಪ್ಪನ ಅಗ್ರಹಾರ ಜೈಲು ಸೇರಿದ ಪವಿತ್ರಾ ಗೌಡ.. ಆಕೆಗೆ ನೀಡಿರೋ ಫೆಸಿಲಿಟಿ ಮಾತ್ರ..

author-image
AS Harshith
Updated On
ಬಳ್ಳಾರಿಯಲ್ಲಿದ್ರೂ ಬಿಡದ ಪವಿತ್ರಾ ಗೌಡ.. ಕೊಲೆ ಕೇಸ್‌ಗೆ ಅತಿ ದೊಡ್ಡ ಟ್ವಿಸ್ಟ್; ದರ್ಶನ್‌ಗೆ ಹೊಸ ಟೆನ್ಷನ್‌; ಏನಾಯ್ತು?
Advertisment
  • ಪರಪ್ಪನ ಜೈಲಿನಲ್ಲಿ ಪವಿತ್ರಾಗೌಡ ಮೊದಲ ದಿನ ಹೇಗಿತ್ತು?
  • ಜೈಲಿನಲ್ಲಿ ಆರೋಪಿಗಳ ಸೆರೆವಾಸಕ್ಕೆ ಪೊಲೀಸರ ವ್ಯವಸ್ಥೆ
  • ಜುಲೈ 4ರವರೆಗೆ ಸೆರೆವಾಸ ಅನುಭವಿಸಲಿರೋ ಆರೋಪಿಗಳು

ಒಂದು ಅಶ್ಲೀಲ ಮೆಸೇಜ್ ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆಯಲ್ಲಿ ಅಂತ್ಯವಾಗಿದೆ. ಮೇಸೇಜ್ ತೋರಿಸಿ ಬುದ್ಧಿ ಕಲಿಸುವಂತೆ ನಟ ದರ್ಶನ್​ಗೆ ಪವಿತ್ರಾ ಪ್ರಚೋದನೆ ನೀಡಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ದೃಷ್ಕೃತ್ಯಕ್ಕೆ ಪವಿತ್ರಾ ಕಾರಣ ಕರ್ತೃ ಆಗಿದ್ದಾಳೆ. ಸದ್ಯ ಹೀನಕೃತ್ಯಕ್ಕೆ ಶಾಸ್ತಿಯಾಗಿದೆ. ಪವಿತ್ರಾಗೌಡ ಜೈಲು ಸೇರಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲ ದಿನ ಕಳೆದಿದ್ದಾಳೆ.

Advertisment

ಹೊನ್ನು ಮಾಯೆಯಲ್ಲ. ಹೆಣ್ಣು ಮಾಯೆ ಎಂಬರು. ದಾರ್ಶನಿಕರ ಈ ಮಾತು ಸದ್ಯ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿಯಾಗಿರುವ ಪವಿತ್ರಾಗೌಡಗೆ ಅನ್ವಯಿಸುತ್ತೆ. ಅಶ್ಲೀಲ ಮೆಸೇಜ್ ಕಳುಹಿಸಿದ್ದ ರೇಣುಕಾಸ್ವಾಮಿ ಹತ್ಯೆಗೆ ಪವಿತ್ರಾಗೌಡ ಪ್ರಚೋದನೆಯೇ ಕಾರಣ ಅನ್ನೋದು ತನಿಖೆಯಿಂದ ಹೊರಬಂದ ಸತ್ಯ. ಇದರಿಂದ ಸ್ವತಃ ನಟ ದರ್ಶನ್​ಗೆ ಸಂಕಷ್ಟಕ್ಕೆ ಸಿಲುಕಿದ್ದಲ್ಲದೇ ಪವಿತ್ರಾಗೌಡ ಸೇರಿ 13 ಆರೋಪಿಗಳು ಜೈಲುಕಂಬಿ ಎಣಿಸುವಂತಾಗಿದೆ.

publive-image

ಇದನ್ನೂ ಓದಿ: ಮಲಗುವ ಮುನ್ನ ಗಂಡಾಗಿದ್ದ.. ಏಳುವಷ್ಟರಲ್ಲಿ ಹೆಣ್ಣಾದ; ಅಸಲಿಗೆ ಆಗಿದ್ದೇನು?

ಪರಪ್ಪನ ಅಗ್ರಹಾರ ಜೈಲಿಗೆ ಪವಿತ್ರಾಗೌಡ & ಟೀಂ ಶಿಫ್ಟ್​

ರೇಣುಕಾ ಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿ ಇತರೆ ಆರೋಪಿಗಳನ್ನು ನಿನ್ನೆ ಕೋರ್ಟ್​ ಎದುರು ಹಾಜರುಪಡಿಸಲಾಗಿತ್ತು. ಇವರಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಗೆ ವಹಿಸಿದ್ರೆ ಪವಿತ್ರಾಗೌಡ ಸೇರಿದಂತೆ 10 ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು. ಎ1 ಪವಿತ್ರಾಗೌಡ ಜೊತೆ ಇತರೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದು ಮೊದಲ ದಿನ ಕಳೆದಿದ್ದಾರೆ.

Advertisment

ಇದನ್ನೂ ಓದಿ: ವಿಶ್ವದ ಅತಿ‌ ಎತ್ತರದ ಬ್ರಿಡ್ಜ್‌ನಲ್ಲಿ ಭಾರತೀಯ ರೈಲ್ವೆ ಮೊಟ್ಟ ಮೊದಲ ಸಂಚಾರ.. ಏನಿದರ ವಿಶೇಷ?- ವಿಡಿಯೋ

publive-image

ಪರಪ್ಪನ ಜೈಲಲ್ಲಿ ಪವಿತ್ರಾ!

ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ವಿಭಾಗದ ಡಿ ಬ್ಯಾರಕ್​​​ಗೆ ಪವಿತ್ರಾಗೌಡ ಶಿಫ್ಟ್ ಮಾಡಲಾಗಿದೆ. ಜೈಲಿನಲ್ಲಿ ಡಿ ಬ್ಯಾರಕ್ ಪ್ರತ್ಯೇಕ ಕೊಠಡಿಗಳನ್ನು ಹೊಂದಿದೆ. ಇನ್ನು ಇತರೆ ಆರೋಪಿಗಳು ಜೈಲಾಸ್ಪತ್ರೆ ಬಳಿಯ ಬಿ ಬ್ಯಾರಕ್​​ಗೆ ಶಿಫ್ಟ್ ಆಗಿದ್ದಾರೆ. ಅಲ್ಲಿರುವ ಪ್ರತಿ ಕೊಠಡಿಯಲ್ಲಿಯೂ ಇಬ್ಬರು ಆರೋಪಿಗಳನ್ನು ಇರಿಸಲಾಗಿದೆ. ಈಗಾಗಲೇ ಆರೋಪಿಗಳ ಸೆರೆವಾಸಕ್ಕೆ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಜುಲೈ 4ರವರೆಗೆ ಎಲ್ಲಾ 13 ಆರೋಪಿಗಳು ಸೆರೆವಾಸ ಅನುಭವಿಸಲಿದ್ದಾರೆ.

ಇದನ್ನೂ ಓದಿ: ರಾಮ್​ ಚರಣ್​ ದಂಪತಿಗೆ ವಿಶೇಷ ದಿನ; ಮಗಳ ಬಗ್ಗೆ ಉಪಾಸನ ಭಾವುಕ ಪೋಸ್ಟ್.. ಏನದು?

Advertisment

ಐಷಾರಾಮಿ ಬಂಗ್ಲೆಯಲ್ಲಿದ್ದುಕೊಂಡು ಲಕ್ಸುರಿ ಲೈಫ್ ನಡೆಸ್ತಿದ್ದ ನಟಿ ಪವಿತ್ರಾಗೌಡ ಕೊಲೆ ಕೇಸ್​​ಉರುಳಾಗಿ ಜೈಲುಪಾಲಾಗಿದ್ದಾರೆ. ಒಂದು ಕ್ಷಣದ ಕೋಪ ಹೀನ ಕೃತ್ಯ ನಡೆಸುವಂತೆ ಪ್ರೇರೇಪಿಸಿದೆ. ಅಭಿಮಾನಿಗಳ ಅಭಿಮಾನವನ್ನು ದುರುಪಯೋಗ ಪಡಿಸಿಕೊಂಡಿದ್ದ ನಟ ದರ್ಶನ್​​​ಗೆ ಮಾಡಿದ್ದುಣ್ಣೋ ಮಾರಾಯ ಎನ್ನುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment