ಕಾಶ್ಮೀರದಲ್ಲಿ ಭೀಕರ ಅಪಘಾತ.. ಸೇನಾ ವಾಹನ ಕಂದಕಕ್ಕೆ ಉರುಳಿ 10 ಯೋಧರ ದುರಂತ ಅಂತ್ಯ

ಭೀಕರ ಅಪಘಾತದಲ್ಲಿ ಭಾರತೀಯ ಸೇನಾ ವಾಹನವು 200 ಅಡಿ ಆಳದ ಕಂದಕಕ್ಕೆ ಉರುಳಿದೆ. ಪರಿಣಾಮ 10 ಯೋಧರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ. ಹಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

author-image
Ganesh Kerekuli
Army vehicle
Advertisment

ಭೀಕರ ಅಪಘಾತದಲ್ಲಿ ಭಾರತೀಯ ಸೇನಾ ವಾಹನವು 200 ಅಡಿ ಆಳದ ಕಂದಕಕ್ಕೆ ಉರುಳಿದೆ. ಪರಿಣಾಮ 10 ಯೋಧರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ. ಹಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ದೊಡಾದ ಭದೇರ್ವಾ-ಚಂಬಾ ರಸ್ತೆ ದುರ್ಘಟನೆ ಸಂಭವಿಸಿದೆ. ಸೇನಾ ವಾಹನವು ಸ್ಕಡ್ ಆಗಿ, ಚಾಲಕ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದೆ. ವಾಹನದಲ್ಲಿ ಒಟ್ಟು 17 ಸೇನಾ ಸಿಬ್ಬಂದಿ ಇದ್ದರು. 

ತಕ್ಷಣವೇ ಸೇನೆ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಗಾಯಗೊಂಡ ಯೋಧರನ್ನು ಉಧಮ್‍ಪುರ ಮಿಲಿಟರಿ ಆಸ್ಪತ್ರೆಗೆ ಸೇನಾ ಹೆಲಿಕಾಪ್ಟರ್ ಸಹಾಯದಿಂದ ಸಾಗಿಸಲಾಗಿದೆ. ಕೆಲರ ಸ್ಥಿತಿ ಗಂಭೀರವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಭೀಕರ ಘಟನೆ ದೇಶದಾದ್ಯಂತ ಶೋಕ ವಾತಾವರಣ ಮೂಡಿಸಿದೆ. 

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಂದ ಬಿಗ್ ಬಾಸ್ ವಿಜೇತ ಗಿಲ್ಲಿ ನಟಗೆ ಸನ್ಮಾನ : ಗಿಲ್ಲಿ ನಟರಾಜ್‌ಗೆ ಸಿಎಂ ಶ್ಲಾಘನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

army vehicle
Advertisment