/newsfirstlive-kannada/media/post_attachments/wp-content/uploads/2024/11/Newsfirst-Aarogya-Habba-2.jpg)
ಯಾವುದೇ ಒಂದು ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನ ಜನರು ತುಂಬಾ ಯೋಚನೆ ಮಾಡೋ ಕಾಲವಿದು. ಕಾಲಹರಣ ಮಾಡೋಕೆ ಯಾರೂ ಇಷ್ಟಪಡೋದಿಲ್ಲ. ಟೈಮ್‌ಗೆ ತುಂಬಾನೇ ಪ್ರಾಮುಖ್ಯತೆ ನೀಡುವುದರಿಂದ, ಯಾವುದಾದ್ರೂ ಕಾರ್ಯಕ್ರಮಕ್ಕೆ ಹೋದ್ರೆ, ಏನೂ ಪ್ರಯೋಜನ ಅನ್ನೋ ದೊಡ್ಡ ಪ್ರಶ್ನೆಗೆ ಉತ್ತರ ಹುಡುಕುವ ಕಾಲಘಟ್ಟದಲ್ಲಿ ನಾವೆಲ್ಲ ಇದ್ದೀವಿ.
ರಾಜ್ಯದ ಜನಪ್ರಿಯ ಸುದ್ದಿವಾಹಿನಿ ನ್ಯೂಸ್‌ಫಸ್ಟ್, ಈ ಎಲ್ಲಾ ಅಂಶಗಳನ್ನ ಪರಿಗಣನೆಗೆ ತೆಗೆದುಕೊಂಡು, ಎಲ್ಲಾ ಆಯಾಮಗಳಿಂದ ಯೋಚಿಸಿ, ಜನರಿಗೆ ಅತಿ ಹೆಚ್ಚು ಅನುಕೂಲವಾಗುವಂತಹ ಕಾರ್ಯಕ್ರಮವನ್ನ ಆಯೋಜಿಸುತ್ತಿದೆ. ಅದುವೇ ಆರೋಗ್ಯ ಹಬ್ಬ.
ಇದನ್ನೂ ಓದಿ: ನ್ಯೂಸ್ ಫಸ್ಟ್ ಆಯೋಜಿಸುತ್ತಿದೆ ವಿನೂತನ ಆರೋಗ್ಯ ಹಬ್ಬ; ಏನಿದರ ವಿಶೇಷ?
ಇವತ್ತಿಗೆ ಅಧಿಕೃತ ಆರೋಗ್ಯ ಟಿಪ್ಸ್ ಸಿಗುವುದು ಅಪರೂಪವಾಗಿದೆ. ವಿಷಯ ಪರಿಣಿತರಲ್ಲದವರು ಕೂಡ, ಬೇಕಾ ಬಿಟ್ಟಿ ಟಿಪ್ಸ್ ಕೊಟ್ಟು ಜನರನ್ನ ತಪ್ಪು ದಾರಿಗೆ ಎಳೆದು ಬಿಡುತ್ತಾರೆ. ಹೀಗಾಗಿ, ನ್ಯೂಸ್‌ಫಸ್ಟ್ ಆಯೋಜಿಸುತ್ತಿರುವ ಆರೋಗ್ಯ ಹಬ್ಬದಲ್ಲಿ ರಾಜ್ಯದ ಪ್ರಖ್ಯಾತ ಯೋಗ ಪರಿಣಿತರು, ಆಯುರ್ವೇದ, ನ್ಯಾಚುರೋಪತಿ ತಜ್ಞರು ಭಾಗವಹಿಸಲಿದ್ದಾರೆ. ಇದು ಹಿಂದೆಂದೂ ನಡೆಯದ ರಾಜ್ಯದ ಅತಿದೊಡ್ಡ ಎಕ್ಸ್ ಪೋ ಎನ್ನುವುದು ಗಮನಾರ್ಹ.
/newsfirstlive-kannada/media/post_attachments/wp-content/uploads/2024/11/Newsfirst-Aarogya-Habba-1.jpg)
ಆರೋಗ್ಯ ಹಬ್ಬಕ್ಕೆ ಬಂದರೆ 10 ಪ್ರಯೋಜನ!
- ಆಯುರ್ವೇದ ಕ್ಷೇತ್ರದಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ತಜ್ಞ ವೈದ್ಯರು, ಯೋಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪರಿಣಿತರನ್ನ ಮೀಟ್ ಮಾಡುವ ಅವಕಾಶ ನಿಮಗೆ ಸಿಗಲಿದೆ.
- ಕೇವಲ ಮೀಟ್ ಮಾಡೋದಷ್ಟೇ ಅಲ್ಲ, ಪರಿಣಿತರು ನಿಮ್ಮ ಆರೋಗ್ಯ ವೃದ್ಧಿಗೆ ಸರಳ ಸೂತ್ರಗಳನ್ನ ನಿಮಗೆ ತಿಳಿಸಿ ಕೊಡಲಿದ್ದಾರೆ. ಇದರ ಜೊತೆಗೆ ನೀವು ಕೂಡ ತಜ್ಞ ವೈದ್ಯರು ಮತ್ತು ಯೋಗ ಪರಿಣಿತರ ಜೊತೆ ಸಂವಾದ ನಡೆಸಬಹುದು.
- ಉಚಿತ ಪ್ರವೇಶದಿಂದ ನಿಮ್ಮ ಆರೋಗ್ಯಯುತ ಜೀವನಕ್ಕೆ ಅವಶ್ಯಕವಾಗಿರುವ ಆರೋಗ್ಯ ಟಿಪ್ಸ್ ನಿಮಗೆ ಸಿಗಲಿದೆ.
- ಪ್ರಸ್ತುತ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಆಯುರ್ವೇದ ತಜ್ಞ ವೈದ್ಯರು, ಸವಿವರವಾಗಿ ಮಾಹಿತಿ ಕೊಡಲಿದ್ದಾರೆ.
- ನಿಮ್ಮ ವೈಯಕ್ತಿಕ ಜೀವನವನ್ನ ಪಾಸಿಟಿವ್ ಆಗಿ ಹೇಗೆ ಬದಲು ಮಾಡಿಕೊಳ್ಳಬೇಕು? ಬದಲಾವಣೆಗಿರುವ ಸರಳ ವಿಧಾನಗಳೇನು? ಎಂಬುದನ್ನ ಸರಳವಾಗಿ ನಿಮ್ಮ ಮುಂದೆ ಪ್ರಸ್ತುತಪಡಿಸಲಿದ್ದಾರೆ.
- ಆರೋಗ್ಯವಾಗಿರುವವರು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಈ ಎಕ್ಸ್‌ಫೋದಲ್ಲಿ ಪರಿಣಾಮಕಾರಿ ಪರಿಹಾರಗಳು ಸಿಗಲಿವೆ.
- ರಾಜ್ಯದ ಬಿಗ್ಗೆಸ್ಟ್ ಎಕ್ಸ್‌ಪೋದಲ್ಲಿ ನೀವು ಕಳೆಯುವ ಸಮಯ, ವ್ಯರ್ಥವಾಗುವುದಿಲ್ಲ ಬದಲಿಗೆ ನಿಮ್ಮ ಜೀವನ ಶೈಲಿಯನ್ನೇ ಉತ್ತಮ ದಾರಿಗೆ ಕರೆದೊಯ್ಯುವ ಸಲಹೆಗಳು ನಿಮಗೆ ಸಿಗಲಿವೆ.
- ಒಂದು ಕುಟುಂಬವನ್ನ ಅಂದ್ರೆ, ಮಕ್ಕಳಿಂದ ದೊಡ್ಡವರವರೆಗೂ, ಯಾಱರು ಯಾವ ರೀತಿಯ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂಬುದನ್ನ 2 ದಿನದ ಎಕ್ಸ್‌ಫೋದಲ್ಲಿ ತಿಳಿಯಬಹುದು.
- ಕರ್ನಾಟಕದ ಎಲ್ಲಾ ಪ್ರಾಂತ್ಯಗಳ ರುಚಿ ರುಚಿಯಾದ ಆಹಾರವನ್ನ ಇಡೀ ಕುಟುಂಬ ಸವಿಯಬಹುದು. ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಮತ್ತು ಹಳೇ ಮೈಸೂರು ಭಾಗದ ಆಹಾರ ಸಿಗಲಿದೆ. ಇದು ರಾಜ್ಯದ ಅತಿ ದೊಡ್ಡ ಆಹಾರ ಮೇಳ.
- ಆಯುರ್ವೇದ, ಆರ್ಗ್ಯಾನಿಕ್ ಪ್ರಾಡಕ್ಟ್ಸ್, ಸಿರಿಧಾನ್ಯ, ಫಿಟ್‌ನೆಸ್ ಸೇರಿದಂತೆ ವಿವಿಧ ಸ್ಟಾಲ್‌ಗಳು ಇರಲಿವೆ.
ಒಂದು ದೊಡ್ಡ ವೇದಿಕೆಯಿಂದ ಇಷ್ಟೊಂದು ಪ್ರಯೋಜನ ಸಿಗುವ ಸುವರ್ಣಾವಕಾಶ ಮಿಸ್ ಮಾಡಬೇಡಿ. ರಾಜ್ಯದ ಅತಿ ದೊಡ್ಡ ಎಕ್ಸ್‌ಫೋಗೆ ನಿಮಗೆ ಉಚಿತ ಪ್ರವೇಶ.
ಸ್ಥಳ: ಇದೇ ನವೆಂಬರ್ 30 ಶನಿವಾರ ಮತ್ತು ಡಿಸೆಂಬ್ 1 ಭಾನುವಾರ, ಗೇಟ್ ನಂಬರ್ 6, ಗ್ರ್ಯಾಂಡ್ ಕ್ಯಾಸಲ್, ಅರಮನೆ ಮೈದಾನ ಬೆಂಗಳೂರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us