/newsfirstlive-kannada/media/post_attachments/wp-content/uploads/2025/02/RIVERLESS-COUNTRIES.jpg)
ನದಿಗಳು ಪ್ರತಿಯೊಂದು ದೇಶದ ನಾಡಿಮಿಡಿತ. ಜೀವಜಲಗಳು ಇಲ್ಲದ, ನದಿಯ ಹರಿವು ಇಲ್ಲದೇ ಯಾವ ನಾಗರೀಕತೆಗಳು ಹುಟ್ಟುಕೊಂಡಿಲ್ಲ. ಜಗತ್ತಿನ ಎಲ್ಲ ನಾಗರೀಕತೆಗಳು ಹುಟ್ಟಿಕೊಂಡಿದ್ದೇ ನದಿಗಳ ತಟದಲ್ಲಿ. ಜಗತ್ತಿನ ಪುರಾತನ ನಾಗರೀಕತೆಗಳೆಲ್ಲಾ ಒಂದೊಂದು ನದಿಯ ತಟದಲ್ಲಿಯೇ ಹುಟ್ಟಿಕೊಂಡಿವೆ.
ಅನೇಕ ದೇಶಗಳು ನೂರಾರು ನದಿಗಳಿಂದಲೇ ಕುಡಿಯಲು ನೀರು ಹಾಗೂ ಬೇಸಾಯಕ್ಕೆ ನೀರನ್ನು ಪಡೆಯುತ್ತವೆ. ಕೇವಲ ರಷ್ಯಾ ಒಂದರಲ್ಲಿಯೇ ಸುಮಾರು 1 ಲಕ್ಷ ನದಿಗಳು ಹರಿಯುತ್ತವೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಸುಮಾರು 400 ನದಿಗಳು ಹರಿಯುತ್ತವೆ. ಅದರಲ್ಲಿ 14 ನದಿಗಳನ್ನು ಮಹಾನದಿ ಎಂದು ಕರೆಯಲಾಗುತ್ತದೆ. ಆದರೆ ಜಗತ್ತಿನ ಸುಮಾರು ಹತ್ತು ದೇಶಗಳಲ್ಲಿ ಒಂದೇ ಒಂದು ನದಿಯೂ ಕೂಡ ಹರಿಯುವುದಿಲ್ಲ ಆ ದೇಶಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನಿಮಗೆ ಹೇಳುತ್ತೇವೆ ನೋಡಿ.
/newsfirstlive-kannada/media/post_attachments/wp-content/uploads/2025/02/SOUDI-AREBIA.jpg)
1. ಸೌದಿ ಅರೇಬಿಯಾ: ಸೌದಿ ಅರೇಬಿಯಾ ಜಗತ್ತಿನ ಅತಿದೊಡ್ಡ ರಾಷ್ಟ್ರಗಳಲ್ಲಿ ಒಂದು. ಆದ್ರೆ ಈ ದೇಶದಲ್ಲಿ ಒಂದೇ ಒಂದು ನದಿ ಕೂಡ ಹರಿಯುವುದಿಲ್ಲ. ಅರೆಬಿಯನ್ ಪೆನಿನ್ಸುಲಾದಲ್ಲಿ ನೆಲೆನಿಂತಿರುವ ಈ ದೇಶದಲ್ಲಿ ನದಿ ಒಂದೇ ಒಂದು ಕುರುಹು ಇಲ್ಲ. ಸಮುದ್ರದ ನೀರನ್ನೇ ಇವರು ಶುದ್ಧೀಕರಿಸಿ, ಅದನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸಿ ಬಳಸುತ್ತಾರೆ. ಶೇಕಡಾ 70 ರಷ್ಟು ಕುಡಿಯುವ ನೀರನ್ನು ಇದೇ ರೀತಿ ತಯಾರಿಸುತ್ತಾರೆ.
ಇದನ್ನೂ ಓದಿ:ವಿಶ್ವದಲ್ಲಿಯೇ ಅತ್ಯಂತ ಸುಂದರ ಕೈ ಬರಹ ಹೊಂದಿರುವ ಯುವತಿ.. ಇವರು ಯಾವ ದೇಶದವರು ಅಂತ ಗೊತ್ತಾ?
/newsfirstlive-kannada/media/post_attachments/wp-content/uploads/2025/02/Qatar.jpg)
2. ಕತಾರ: ಇನ್ನು ಒಂದೂ ನದಿಯನ್ನು ಕಾಣದ ಮತ್ತೊಂದು ದೇಶವೆಂದರೆ ಅದು ಕತಾರ. ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ ಎಂದು ಕರೆಸಿಕೊಳ್ಳುವ ಕತಾರ, ತೈಲ ಹಾಗೂ ಗ್ಯಾಸ್​ ಉತ್ಪಾದನೆಯ ಮೂಲಕವೇ ಹಣ ಗಳಿಕೆ ಮಾಡಿ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಇಲ್ಲಿಯೂ ಕೂಡ ಸುಮಾರು ಶೇಕಡಾ 99 ರಷ್ಟು ಕುಡಿಯುವ ನೀರನ್ನು ಸಮುದ್ರ ನೀರನ್ನು ಶುದ್ಧೀಕರಣಗೊಳಿಸುವ ಮೂಲಕವೇ ಜನರಿಗೆ ಪೂರೈಕೆ ಮಾಡಲಾಗುತ್ತದೆ. ಕತಾರ ಅತಿಹೆಚ್ಚು ನೀರನ್ನು ಬಳಸುವ ರಾಷ್ಟ್ರಗಳಲ್ಲಿ ಒಂದು. ಇದು ಕುಡಿಯುವ ನೀರಿಗಾಗಿಯೇ ಸಾಕಷ್ಟು ಹೂಡಿಕೆಯನ್ನು ಮಾಡುತ್ತದೆ. ಹೊಸ ಹೊಸ ತಂತ್ರಜ್ಞಾನದ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲು ಹಣ ಹಾಕುತ್ತದೆ.
/newsfirstlive-kannada/media/post_attachments/wp-content/uploads/2025/02/UAE.jpg)
3. ಯುನೈಟೆಡ್​ ಅರಬ್ ಎಮಿರೇಟ್ಸ್: ತನ್ನ ನೆರೆಯ ರಾಷ್ಟ್ರಗಳಂತೆಯೇ ಯುಎಇ ಕೂಡ ನದಿಯಿಲ್ಲದ ಒಂದುದೇಶ. ದುಬೈ, ಅಬುದಾಬಿಯಂತಹ ಖ್ಯಾತ ನಗರಗಳನ್ನು ಹೊಂದಿರುವ ಯುಎಇನಲ್ಲಿ ಒಂದೇ ಒಂದು ನದಿ ಕೂಡ ಇಲ್ಲ. ಇದು ಕೂಡ ಸಮುದ್ರದ ನೀರನ್ನು ಉಪ್ಪುರಹಿತಗೊಳಿಸಿ ಶುದ್ಧಿಕರಗೊಳಿಸಿ ಕುಡಿಯುವ ನೀರನ್ನು ಪೂರೈಸುತ್ತದೆ. ಉಳಿದ ತ್ಯಾಜ್ಯ ನೀರನ್ನು ಉದ್ಯಮಕ್ಕೆ ಹಾಗೂ ನೀರಾವರಿ ಉದ್ದೇಶಕ್ಕೆ ಬಳಸುತ್ತದೆ.
ಇದನ್ನೂ ಓದಿ:9 ದೇಶಗಳಲ್ಲಿ ಹರಿದು ಹೋಗುತ್ತದೆ ಈ ನದಿ.. ಆದರೂ ಕೂಡ ಒಂದೇ ಒಂದು ಸೇತುವೆ ಕಟ್ಟಿಲ್ಲ ಏಕೆ?
4. ಬಹರೇನ್ : ಇದು ಒಂದು ದ್ವೀಪ ರಾಷ್ಟ್ರ, ಪರ್ಷಿಯನ್ ಗಲ್ಫ್​ನಲ್ಲಿ ಗುರುತಿಸಿಕೊಂಡಿರುವಂತಹ ರಾಷ್ಟ್ರ. ಇಲ್ಲಿಯೂ ಕೂಡ ನೈಸರ್ಗಿಕ ಕುಡಿಯುವ ನೀರು ನೀಡುವ ಒಂದೇ ಒಂದು ನದಿಯೂ ಕೂಡ ಇಲ್ಲ. ಹಲವು ನೀರಿನ ಒರೆತೆ ಹಾಗೂ ಗ್ರೌಂಡ್ ವಾಟರ್ ಮೂಲಕ ಇದು ತನ್ನ ಕುಡಿಯುವ ನೀರಿನ ಪೂರೈಕೆಯನ್ನು ಮಾಡುತ್ತದೆ. ಅದರ ಜೊತೆಗೆ ಶೇಕಡಾ 60 ರಷ್ಟು ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸಿ ಬಳಸುತ್ತದೆ. ಈ ದೇಶದಲ್ಲಿ ನೀರಿನ ಉಳಿತಾಯದ ಬಗ್ಗೆ ಹಲವು ರೀತಿಯ ಪ್ರಚಾರಗಳನ್ನು ಕೈಗೊಳ್ಳಲಾಗುತ್ತದೆ. ಮತ್ತು ಕುಡಿಯುವ ನೀರನ್ನು ಹೇಗೆ ಸಮರ್ಥವಾಗಿ ಬಳಸಬೇಕು ಎಂಬುದರ ಬಗ್ಗೆಯೂ ಹೇಳುತ್ತದೆ.
5. ಕುವೈತ್​: ಅರೇಬಿಯನ್ ಗಲ್ಫ್​ನಲ್ಲಿ ನೆಲೆಗೊಂಡಿರುವ ಮತ್ತೊಂದು ದೇಶ ಅಂದ್ರೆ ಅದು ಕುವೈತ್​, ಕುವೈತ್ ಕೂಡ ಮತ್ತೊಂದು ಮರುಳುಗಾಡು ದೇಶ. ಈ ದೇಶವು ಕೂಡ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವ ದೇಶಗಳಲ್ಲಿ ಒಂದು. ಉಳಿದ ಅರಬ್ ದೇಶಗಳಂತೆ ಇಲ್ಲಿಯೂ ಕೂಡ ಸಾಗರದ ಉಪ್ಪು ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸಿ ಜನರಿಗೆ ಪೂರೈಸಲಾಗುತ್ತದೆ.
6. ವ್ಯಾಟಿಕನ್ ಸಿಟಿ: ಜಗತ್ತಿನ ಅತ್ಯಂತ ಪುಟ್ಟ ದೇಶ ಎಂದು ಕರೆಸಿಕೊಳ್ಳುವ ಈ ದೇಶದಲ್ಲಿಯೂ ಒಂದೇ ಒಂದು ನದಿಯಿಲ್ಲ. ರೋಮ್​ನ ಬಳಿ ಸುಮಾರು 0.44 ಸ್ಕ್ವೇರ್ ಮೀಟರ್​ನಲ್ಲಿ ನೆಲೆಗೊಂಡಿರುವ ಈ ಸ್ವತಂತ್ರ ದೇಶ ತನ್ನ ಗಡಿಯೊಳಗೆ ಒಂದೇ ಒಂದು ನದಿಯನ್ನು ಕೂಡ ಹೊಂದಿಲ್ಲ. ಈ ದೇಶಕ್ಕೆ ಇಟಲಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತದೆ. ಅದು ಕೂಡ ಅಲ್ಪಮಟ್ಟದಲ್ಲಿ. ಹೀಗಾಗಿ ಇದು ತನ್ನ ದೇಶದ ಜನರಿಗೆ ನೀರನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಸಲಹೆ ನೀಡುತ್ತದೆ.
7. ಮಾಲ್ಡೀವ್ಸ್: ಹಿಂದೂ ಮಹಾಸಾಗರದಲ್ಲಿ ನೆಲೆಗೊಂಡಿರುವ ಪುಟ್ಟ ದ್ವೀಪರಾಷ್ಟ್ರ ಮಾಲ್ಡೀವ್ಸ್. ಈ ದೇಶವೂ ಕೂಡ ಒಂದೇ ಒಂದು ನದಿಯನ್ನು ಕಾಣದ ನತದೃಷ್ಟ ನೆಲ. ಮಳೆ ನೀರಿನ ಕೊಯ್ಲು, ನೀರಿನ ಬಾಟಲ್​ಗಳ ಆಮದು ಹಾಗೂ ಸಮುದ್ರ ನೀರಿನ ಶುದ್ಧೀಕರಣದ ಮೂಲಕ ತನ್ನ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸಿಕೊಳ್ಳುತ್ತದೆ.
8. ಮೊನಾಕೊ: ವ್ಯಾಟಿಕನ್ ಸಿಟಿಗೆ ಹೋಲಿಸಿದರೆ ಈ ಒಂದು ದೇಶ ಜಗತ್ತಿನ ಪುಟ್ಟ ದೇಶಗಳಲ್ಲಿ ಎರಡನೇ ಸ್ಥಾನ ಪಡೆಯುತ್ತದೆ. 1.95 ಸ್ಕ್ವೇರ್ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ದೇಶದಲ್ಲಿ ನದಿಗಳ ಕೊರತೆಯಿದೆ. ಈ ದೇಶಕ್ಕೂ ಕೂಡ ಇಟಲಿಯಿಂದ ಕುಡಿಯುವ ನೀರಿನ ಪೂರೈಕೆಯಾಗುತ್ತದೆ.
9. ನೌರು: ಕೇಂದ್ರ ಪೆಸಿಫಿಕ್ ಓಸಿಯನ್​ನಲ್ಲಿ ಹರಡಿಕೊಂಡಿರುವ ಪುಟ್ಟ ದ್ವೀಪ ನೌರು. ಈ ದೇಶ ಅನೇಕ ರೀತಿಯ ಪ್ರಕೃತಿಯ ವಿಕೋಪದ ಸವಾಲುಗಳನ್ನು ಎದುರಿಸುತ್ತದೆ. ಅತ್ಯಂತ ಕಡಿಮೆ ಕುಡಿಯುವ ನೀರಿನ ಸಂಪನ್ಮೂಲಗಳನ್ನು ಈ ದ್ವೀಪ ರಾಷ್ಟ್ರ ಹೊಂದಿದ್ದು ಅದರಲ್ಲಿಯೇ ನಿರ್ವಹಣೆ ಮಾಡಿಕೊಳ್ಳುತ್ತದೆ.
10. ಓಮನ್: ಈ ದೇಶದಲ್ಲಿ ಶಾಶ್ವತವಾದ ನದಿಯೆಂಬುದೇ ಇಲ್ಲ. ಮಳೆಯಾದಾಗ ಸಂಗ್ರಹವಾದ ನೀರನ್ನೇ ಇವರು ಕುಡಿಯುವ ನೀರಿಗಾಗಿ ಶೇಖರಣೆ ಮಾಡಿಟ್ಟುಕೊಳ್ಳುತ್ತಾರೆ. ನದಿಪಾತ್ರಗಳಂತಹ ಜಾಗದಲ್ಲಿ ನೀರು ಶೇಖರಣೆಯನ್ನೇ ಅವರು ಕುಡಿಯುವ ನೀರಿಗಾಗಿ ಬಳಸಿಕೊಳ್ಳುತ್ತಾರೆ. ಇನ್ನು ಗ್ರೌಂಡ್ ವಾಟರ್ ಮತ್ತು ಸಮುದ್ರದ ನೀರಿನ ಶುದ್ಧೀಕರಣದಿಂದ ಕುಡಿಯುವ ನೀರು ಸೃಷ್ಟಿಸಲಾಗುತ್ತದೆ.
ಈ ಹತ್ತು ದೇಶಗಳ ಜೊತೆ ನದಿಗಳೇ ಇಲ್ಲದ ಇನ್ನೂ ಹಲವು ದೇಶಗಳಿವೆ. ಯೆಮೆನ್,ಮಲ್ಟಾ, ಕಿರಿಬಾತಿ ಮರ್ಶಾಲ್ಲಾ ದ್ವೀಪ, ಟೊಂಗಾ ಮತ್ತು ತುವಲು ಈ ದೇಶಗಳಲ್ಲಿಯೂ ಕೂಡ ಒಂದೇ ಒಂದು ನದಿಯಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us