/newsfirstlive-kannada/media/post_attachments/wp-content/uploads/2024/06/Sapthami-Gowda1.jpg)
ಬೆಂಗಳೂರು: ಡಾ ರಾಜ್‌ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಮಗ ಯುವ ರಾಜ್‌ಕುಮಾರ್ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಜೊತೆಗೆ ರಾಜ್ ಕುಮಾರ್ ಕುಟುಂಬದ ವಿರುದ್ಧ ಶ್ರೀದೇವಿ ತಂದೆ ಭೈರಪ್ಪ ಗಂಭೀರ ಆರೋಪ ಮಾಡಿದ್ದರು.
ಇದನ್ನೂ ಓದಿ:ಇನ್ಸ್ಟಾಗ್ರಾಂನಲ್ಲಿ ನೋವು ಹಂಚಿಕೊಂಡ ಯುವ ರಾಜ್‌ಕುಮಾರ್ ಪತ್ನಿ.. ಮನದ ಮಾತು ಬಿಚ್ಚಿಟ್ಟ ಶ್ರೀದೇವಿ
ಇನ್ನು, ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಅವರು ವಿಚ್ಚೇದನ ವಿಚಾರದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಅವರ ಹೆಸರು ಕೇಳಿ ಬಂದಿತ್ತು. ಯುವರಾಜ್‌ಕುಮಾರ್ ಅವರ ಲೀಗಲ್ ನೋಟಿಸ್‌ಗೆ ಪತ್ನಿ ಶ್ರೀದೇವಿ ಭೈರಪ್ಪ ಅವರು ನೇರವಾಗಿ ನಟಿ ಸಪ್ತಮಿ ಗೌಡ ಅವರ ಹೆಸರನ್ನೇ ಉಲ್ಲೇಖ ಮಾಡಿದ್ದರು.
ಇದೀಗ ನಟ ಯುವರಾಜ್ ಕುಮಾರ್ ಅವರ ಡಿವೋರ್ಸ್ ಕೇಸ್ ಹೊರ ಟ್ವಿಸ್ಟ್ ಪಡೆದುಕೊಂಡಿದೆ. ಶ್ರೀದೇವಿ ಅವರ ಗಂಭೀರ ಆರೋಪದ ಬೆನ್ನಲ್ಲೇ ಕಾಂತಾರ ಬೆಡಗಿ ನಟಿ ಸಪ್ತಮಿಗೌಡ ಅವರು ಕೋರ್ಟ್ ಮೆಟ್ಟಲೇರಿದ್ದಾರೆ. ಈ ಮೂಲಕ ಶ್ರೀದೇವಿ ಭೈರಪ್ಪ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಸಪ್ತಮಿಗೌಡ ಅವರು ಮಾನಹಾನಿ ಹೇಳಿಕೆ ನೀಡದಂತೆ ಸಿಟಿ ಸಿವಿಲ್ ಕೋರ್ಟ್ನಿಂದ ನಿರ್ಬಂಧ ಹೇರಿ ಆದೇಶಿದ್ದಾರೆ. ಈ ಅರ್ಜಿ ಸಂಬಂಧ ಕೋರ್ಟ್ ಶ್ರೀದೇವಿಗೆ ನೋಟಿಸ್ ಜಾರಿ ಮಾಡಿದೆ. ನಟ ಯುವ ರಾಜ್‌ಕುಮಾರ್ ಕೇಸ್ನಲ್ಲಿ ನನ್ನ ಹೆಸರು ತಳುಕು ಹಾಕಲಾಗಿದೆ. ಇಲ್ಲಸಲ್ಲದ ಆರೋಪಗಳನ್ನ ಹೊರಿಸಿ ಚಾರಿತ್ರ್ಯವಧೆ ಮಾಡಲಾಗಿದೆ ಎಂದು ಸಪ್ತಮಿಗೌಡ ಪರ ಹಿರಿಯ ವಕೀಲ ಶಂಕರಪ್ಪ ವೆಂಕಟರಾಯಪ್ಪ ಅವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
[caption id="attachment_69594" align="aligncenter" width="800"] ಸಪ್ತಮಿ ಗೌಡ ಪರ ವಾದಿಸಿದ ಹಿರಿಯ ವಕೀಲ ಶಂಕರಪ್ಪ ವೆಂಕಟರಾಯಪ್ಪ[/caption]
ಇದರ ಜೊತೆಗೆ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು ಅಂತ ನಟಿ ಸಪ್ತಮಿ ಗೌಡ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸಪ್ತಮಿ ಹೆಸರನ್ನ ಎಲ್ಲೂ ಬಳಕೆ ಮಾಡುವಂತಿಲ್ಲ್ಲ. ನನ್ನ ಹೆಸರನ್ನ ಬಳಸಿ ತೇಜೋವಧೆ ಮಾಡಲಾಗಿದೆ. ಆಧಾರ ರಹಿತವಾಗಿ ಆರೋಪ ಮಾಡಲಾಗಿದೆ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲದಿದ್ದರೂ ಅಪಪ್ರಚಾರ ಮಾಡಿದ್ದಾರೆ. ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆಯುತ್ತಿರುವ ನನ್ನ ಮೇಲೆ ಅಪಪ್ರಚಾರ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕವಾಗಿ ನನ್ನ ಕ್ಷಮೆ ಕೇಳಬೇಕು. ಇಲ್ಲದಿದ್ದರೆ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು ಅಂತ ನಟಿ ಸಪ್ತಮಿ ಗೌಡ ಅರ್ಜಿ ಸಲ್ಲಿಸಿದೆ. ಇನ್ನು ವಾದ ಆಲಿಸಿದ ಕೋರ್ಟ್ ಈ ಅರ್ಜಿಯನ್ನು ಶ್ರೀದೇವಿಗೆ ನೊಟೀಸ್ ಜಾರಿ ಮಾಡಿದೆ.
ಇಂದು ಕೋರ್ಟ್‌ನಲ್ಲಿ ಹಿರಿಯ ವಕೀಲ ಶಂಕರಪ್ಪ ವೆಂಕಟರಾಯಪ್ಪ ಅವರು ಸಪ್ತಮಿ ಗೌಡ ಪರ ವಾದಿಸಿದರು. ಬಹಿರಂಗವಾಗಿ ಆಗಿರುವ ತಪ್ಪಿಗೆ ಶ್ರೀದೇವಿ ಕ್ಷಮೆಯಾಚನೆ ಮಾಡಬೇಕು. ಒಂದು ವೇಳೆ ಮಾಡದೇ ಇದ್ದಲ್ಲಿ 10 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ಅಂತ ವಾದಿಸಿದರು. ಇವರ ವಾದ ಕೇಳಿದ ನ್ಯಾಯಾಲಯ ಶ್ರೀದೇವಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ