/newsfirstlive-kannada/media/post_attachments/wp-content/uploads/2024/11/HVR_ballot_box.jpg)
ಹಾವೇರಿ: ಶಿಗ್ಗಾಂವಿ ಉಪ ಚುನಾವಣೆಯ ಮತದಾನದ ಬೆನ್ನಲ್ಲೇ ಯತ್ತಿನಹಳ್ಳಿ ಗ್ರಾಮದ ಬಳಿಯ ಲೇಔಟ್ ಒಂದರಲ್ಲಿ ಬಳಕೆ ಇಲ್ಲದ 10 ಬ್ಯಾಲೆಟ್ ಬಾಕ್ಸ್ ಪತ್ತೆಯಾಗಿವೆ. ಆದರೆ ಈ ಬಾಕ್ಸ್ಗಳಿಗೂ ಉಪ ಚುನಾವಣೆ ಮತದಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಾವೇರಿ ತಾಲೂಕಿನ ಯತ್ತಿನಗಳ್ಳಿ ಗ್ರಾಮದ ಬಳಿ ಬಳಸಲು ಯೋಗ್ಯವಲ್ಲದ 10 ಬ್ಯಾಲೆಟ್ ಬಾಕ್ಸ್ ಪತ್ತೆಯಾಗಿವೆ. ಈ ಬಾಕ್ಸ್ಗಳನ್ನು ಹಾವೇರಿ ನಗರದ ಎಪಿಎಂಸಿ ಹಳೆ ಗೋದಾಮಿನಲ್ಲಿ ಇರಿಸಲಾಗಿತ್ತು. ಇವುಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಹಲವು ವರ್ಷಗಳ ಹಿಂದೆ ಗೋದಾಮಿನಲ್ಲಿ ತಂದಿಟ್ಟಿದ್ದರು. ಆದರೆ ಇದೀಗ ಕಿಡಿಗೇಡಿಗಳು ಬಾಕ್ಸ್ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ:500ಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳು.. SI, ಹೆಡ್ ಕಾನ್ಸ್ಟೆಬಲ್, ಕಾನ್ಸ್ಟೆಬಲ್ ಹುದ್ದೆಗಳು ಖಾಲಿ
10 ಬಾಕ್ಸ್ಗಳನ್ನು ಒಂದೇ ಬಾರಿ ಸಾಗಿಸಲು ಆಗದೇ ಅವುಗಳನ್ನು ಲೇಔಟ್ನ ಕಾಲುವೆಯಲ್ಲಿ ಎಸೆದು ಹೋಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಸದ್ಯ ಹಾವೇರಿ ತಹಶೀಲ್ದಾರ್ ಶರಣಮ್ಮ ಹಾಗೂ ಪೊಲೀಸರು ಬಾಕ್ಸ್ಗಳನ್ನು ಇಟ್ಟಿದ್ದ ಹಳೆ ಗೋದಾಮಿಗೆ ಭೇಟಿ ನೀಡಿದ್ದಾರೆ. ಕಂದಾಯ ಇಲಾಖೆಯವರಿಂದ ದೂರು ಪಡೆದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಯೋಗೇಶ್ವರ್ ವಿರುದ್ಧ ಟಿಕೆಟ್ ಪ್ಲಸ್ ₹30 ಕೋಟಿ ಕೇಳಿದ ಆರೋಪ- ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ..!
ಶಿಗ್ಗಾಂವಿ ಉಪಚುನಾವಣೆ ಮತದಾನ ಮುಗಿದ ಬೆನ್ನಲ್ಲೇ ಈ ಬ್ಯಾಲೆಟ್ ಬಾಕ್ಸ್ ಪತ್ತೆ ಆಗಿದ್ದರಿಂದ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಶಿಗ್ಗಾಂವಿ ಉಪಚುನಾವಣೆಯ ಮತದಾನಕ್ಕೂ ಈ ಬಾಕ್ಸ್ಗಳಿಗೂ ಯಾವುದೇ ಸಂಬಂಧ ಇಲ್ಲ. ಈ ಬೈಎಲೆಕ್ಷನ್ಗೆ EVM ಮಿಷನ್ ಬಳಸಲಾಗಿದೆ. ಹಲವು ವರ್ಷಗಳಿಂದ ಬಳಕೆಯಲ್ಲಿ ಇಲ್ಲದ ಬಾಕ್ಸ್ಗಳು ಇವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ