ಪಂತ್​, ಮ್ಯಾಕ್ಸಿ ಸೇರಿ IPL ತಂಡಗಳಿಗೆ ಭಾರವಾದ ಸ್ಟಾರ್​ ಪ್ಲೇಯರ್ಸ್​.. RCBಯಲ್ಲೂ ಒಬ್ಬರಿದ್ದಾರೆ?

author-image
Bheemappa
RCB 7 ಪಂದ್ಯ ಗೆದ್ದರೂ ಪ್ಲೇ ಆಫ್ ಎಂಟ್ರಿ ಸುಲಭ ಇಲ್ಲ.. ಬೆಂಗಳೂರಲ್ಲಿ ಅಗ್ನಿಪರೀಕ್ಷೆನಾ?
Advertisment
  • ಕೊಟ್ಟಿರುವ ಹಣಕ್ಕೂ ಸರಿಯಾದ ಬ್ಯಾಟ್​ ಬೀಸದ ಆಟಗಾರರು
  • ಸಿಎಸ್​ಕೆಯಲ್ಲಿ ಸಾಲು ಸಾಲು ಆಟಗಾರರು ಈ ಬಾರಿ ಫೇಲ್ಯೂರ್​
  • SRHನಲ್ಲಿ ಯುವ ಆಟಗಾರ ಒಂದು ಸೆಂಚುರಿ, ಆ ಮೇಲೆ ವಿಫಲ

ಸೀಸನ್-​ 18ರ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಹೊಸ ಪ್ರತಿಭೆಗಳು, ಹೊಸ ಹೊಸ ಭರವಸೆಯನ್ನ ಹುಟ್ಟು ಹಾಕಿದ್ದಾರೆ. ಮಿಂಚಿನ ಪ್ರದರ್ಶನದ ಮೂಲಕ ಸಖತ್​ ಸೌಂಡ್​ ಮಾಡ್ತಿದ್ದಾರೆ. ಆದ್ರೆ, ಸೋ ಕಾಲ್ಡ್​ ಸೂಪರ್ ಸ್ಟಾರ್ಸ್​​​ ಮಾತ್ರ, ಫ್ಲಾಪ್​ ಸ್ಟಾರ್ಸ್ ಆಗಿದ್ದಾರೆ. ಆ ಸೂಪರ್ ಸ್ಟಾರ್​ಗಳ ಫ್ಲಾಫ್ ಕಥೆ ಏನು?.

ಸೀಸನ್​​- 18ರ ಐಪಿಎಲ್​​ ದಿನೇ ದಿನೇ ಸಖತ್ ಕಿಕ್ ನೀಡ್ತಿದೆ. ಯುವ ಆಟಗಾರರು ನಿರೀಕ್ಷೆಗೂ ಮೀರಿದ ಪ್ರದರ್ಶನದಿಂದ ಸಪ್ರೈಸ್ ನೀಡ್ತಿದ್ದಾರೆ. ಮೂಲ ಬೆಲೆಗೆ ಸೇಲಾದ ಆಟಗಾರರು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್​ ನೀಡಿ ಮೆರೆದಾಡ್ತಿದ್ದಾರೆ. 14 ವರ್ಷದ ವೈಭವ್ ಸೂರ್ಯವಂಶಿ, 17 ವರ್ಷದ ಆಯುಷ್ ಮ್ಹಾತ್ರೆಯಂತ ಯುವ ಆಟಗಾರರು ಸಾಮರ್ಥ್ಯಕ್ಕೂ ಮೀರಿದ ಆಟವಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಆದ್ರೆ, ಸೋ ಕಾಲ್ಡ್​ ಸೂಪರ್ ಸ್ಟಾರ್ಸ್ ಐಪಿಎಲ್ ಅಖಾಡದಲ್ಲಿ ಪ್ಲಾಪ್ ಸ್ಟಾರ್ಸ್ ಆಗಿದ್ದಾರೆ.

publive-image

ಡೈನಾಮಿಕ್ ಅಲ್ಲ.. ‘ಡಿಸಾಸ್ಟರ್​’ ಪಂತ್..!

ಒಂದಲ್ಲ, ಎರಡಲ್ಲ ಬರೋಬ್ಬರಿ 27 ಕೋಟಿ ರೂಪಾಯಿ. ಈ ದಾಖಲೆಯ ಹಣಕ್ಕೆ ರಿಷಭ್ ಪಂತ್ ಮೆಗಾ ಆಕ್ಷನ್​ನಲ್ಲಿ ಸೇಲಾಗಿದ್ದರು. ಹರಾಜಿನಲ್ಲಿ ದಾಖಲೆ ಬರೆದ ಪಂತ್​, ಆನ್​ಫೀಲ್ಡ್​​​ ಅಟ್ಟರ್​​ಫ್ಲಾಪ್​ ಪರ್ಫಾಮೆನ್ಸ್​​ ನೀಡ್ತಿದ್ದಾರೆ. 9 ಪಂದ್ಯಗಳನ್ನಾಡಿ ಕೇವಲ 13ರ ಅವರೇಜ್​ನಲ್ಲಿ 106 ರನ್​ ಗಳಿಸಿದ್ದಾರೆ. ಅದು ಕೂಡ 96ರ ಕಳಪೆ ಸ್ಟ್ರೈಕ್​ರೇಟ್​ನಲ್ಲಿ. ನಾಯಕನಾಗಿ ಕನಿಷ್ಠ ಅವರೇಜ್ ಪರ್ಫಾಮೆನ್ಸ್​ ಕೂಡ ನೀಡುವಲ್ಲಿ ಪಂತ್​ ಫೇಲ್​ ಆಗಿದ್ದಾರೆ.

ಒನ್​ ಮ್ಯಾಚ್ ಕಾ ಹೀರೋ ಇಶನ್ ಕಿಶನ್..!

ಹೈದ್ರಾಬಾದ್​ ಪರ ಡೆಬ್ಯೂ ಮಾಡಿದ ಪಂದ್ಯದಲ್ಲಿ ಇಶನ್​ ಕಿಶನ್​ ಘರ್ಜಿಸಿದರು. ರಾಜಸ್ಥಾನ್ ರಾಯಲ್ಸ್ ಎದುರು ರಾಯಲ್​ ಆಟವಾಡಿದ ಕಿಶನ್​ ಸೆಂಚುರಿ ಸಿಡಿಸಿದರು. ಅಬ್ಬಾ, ಆ ಬಳಿಕ ಮಾಡಿದ ಆ ಸೆಲೆಬ್ರೇಷನ್ ಏನು, ಆ ಅಗ್ರೆಷನ್ ಏನು. ಅವತ್ತು ಸಿಡಿಸಿದ್ದ ಸ್ಫೋಟಕ ಶತಕ ಇಶನ್ ಮೇಲಿನ ನಿರೀಕ್ಷೆಯನ್ನೇ ಡಬಲ್ ಮಾಡಿತ್ತು. ಆದ್ರೆ, ಆ ಬಳಿಕ ಕಿಶನ್​ ಫುಲ್​ ಫ್ಲಾಪ್​ ಆಗಿದ್ದಾರೆ. ಸೆಂಚುರಿ ಬಳಿಕ ಆಡಿದ 7 ಪಂದ್ಯಗಳಿಂದ ಗಳಿಸಿರೋದು ಜಸ್ಟ್​ 33 ರನ್​.

ಇದನ್ನೂ ಓದಿ: RCB ವಿಕೆಟ್ ಕೀಪರ್​ ಸೇರಿ 5 ಪ್ಲೇಯರ್ಸ್​ಗೆ ಬಿಗ್​ ಶಾಕ್​.. ಸೆಂಟ್ರಲ್​ ಕಂಟ್ರಾಕ್ಟರ್​​ನಿಂದ ಔಟ್

publive-image

ಕೆಕೆಆರ್​ಗೆ ಕೈ ಕೊಟ್ಟ ವೆಂಕಟೇಶ್ ಅಯ್ಯರ್.!

ಕೆಕೆಆರ್ ಫ್ರಾಂಚೈಸಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಹಣ ಸುರಿಸುವಂತೆ ವೆಂಕಟೇಶ್ ಅಯ್ಯರ್ ಜೇಬಿಗೆ 23.75 ಕೋಟಿ ಹಣ ಸುರಿದಿತ್ತು. ಉಪ ನಾಯಕನ ಪಟ್ಟವೂ ನೀಡ್ತು. ಆದ್ರೆ, ವೆಂಕಟೇಶ್​ ಅಯ್ಯರ್​​ ಪರ್ಫಾಮ್​ ಮಾಡೋಕಾಗದೇ ತಿಣುಕಾಡ್ತಿದ್ದಾರೆ. ಸನ್​​ರೈಸರ್ಸ್ ಎದುರು 60, ಲಕ್ನೋ ಎದುರು 45 ರನ್ ಗಳಿಸಿದ್ದು ಬಿಟ್ರೆ, ಉಳಿದೆಲ್ಲಾ ಮ್ಯಾಚ್​ಗಳಿಂದ ವೆಂಕಟೇಶ್​​ ಅಯ್ಯರ್​ಗಳಿಸಿರೋದು ಕೇವಲ​ ಮೂವತ್ತೇ ಮೂವತ್ತು ರನ್​ ಮಾತ್ರ.

ಆರ್​ಸಿಬಿಗೆ ಹೊರೆಯಾದ ಲಿವಿಂಗ್​ಸ್ಟೋನ್​​.!

ಆರ್​​ಸಿಬಿ ಹೊಸದಾಗಿ ಎಂಟ್ರಿ ಕೊಟ್ಟಾಗ ಲಿವಿಂಗ್​ಸ್ಟೋನ್​ನ ಮಿಡಲ್ ಆರ್ಡರ್​ನ ಪವರ್ ಹಿಟ್ಟರ್, ಗೇಮ್ ಚೇಂಜರ್ ಅಂತೆಲ್ಲಾ ಕೊಂಡಾಡಿದ್ದೆ ಕೊಂಡಾಡಿದ್ದು. ಆದ್ರೆ, ಆರ್​ಸಿಬಿ ಪಾಲಿಗೆ ಈ ಲಿವಿಂಗ್​​ಸ್ಟೋನ್ ವಿಲನ್​ ಆಗ್ಬಿಟ್ಟರು. 7 ಪಂದ್ಯಗಳಿಂದ ಕೇವಲ 17.40ರ ಎವರೇಜ್​ನಲ್ಲಿ 87 ರನ್ ಗಳಿಸಿದ್ದಾರಷ್ಟೇ. ಸ್ಫೋಟಕ ಆಟದ ನಿರೀಕ್ಷೆ ಹುಟ್ಟಿಸಿದ್ದ ಲಿವಿಂಗ್​ಸ್ಟೋನ್ ಕೇವಲ 127.94ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸಿದರು.

ಚೆನ್ನೈಗೆ ಜಡೇಜಾ, ಪಂಜಾಬ್​ಗೆ ಮ್ಯಾಕ್ಸಿ ಭಾರ!

ರವೀಂದ್ರ ಜಡೇಜಾ, ಗ್ಲೇನ್​ ಮ್ಯಾಕ್ಸ್​​ವೆಲ್ ವಿಶ್ವ ಕ್ರಿಕೆಟ್​ನಲ್ಲಿ ಇವರಿಬ್ಬರೂ ಮ್ಯಾಚ್ ವಿನ್ನರ್​​ಗಳು ಅಂತಾನೇ ಫೇಮಸ್. ಆದ್ರೆ, ಈ ಸ್ಟಾರ್​ ಆಲ್​ರೌಂಡರ್​ಳು ಈ ಸೀಸನ್​ನಲ್ಲಿ ಅತ್ತ ಬ್ಯಾಟಿಂಗ್, ಇತ್ತ ಬೌಲಿಂಗ್​ನಲ್ಲೂ ಮಿಂಚುತ್ತಿಲ್ಲ. ಚೆನ್ನೈಗೆ ರವೀಂದ್ರ ಜಡೇಜಾ ಭಾರವಾದ್ರೆ. ಪಂಜಾಬ್​​ಗೆ ಮ್ಯಾಕ್ಸ್​ವೆಲ್ ಹೊರೆಯಾಗಿದ್ದಾರೆ.

publive-image

ಆ್ಯಂಡ್ರೆ ರಸೆಲ್​ ಮಸಲ್ ಪವರ್ ಮಾಯ..!

ಕೆಕೆಆರ್ ತಂಡಕ್ಕೆ ಕೆರಬಿಯನ್​ ದೈತ್ಯ ಆ್ಯಂಡ್ರೆ ರಸೆಲ್ ವಿಲನ್​ ಆಗಿದ್ದಾರೆ. ತನ್ನ ಮಸಲ್ ಪವರ್​ ಈ ಸೀಸನ್​ನಲ್ಲಿ ಮಾಯವಾಗಿದೆ. ಈ ಕರಿಬಿಯನ್ ದೈತ್ಯ 8 ಪಂದ್ಯಗಳಿಂದ 9.17ರ ಹೀನಾಯ ಬ್ಯಾಟಿಂಗ್ ಅವರೇಜ್​ನಲ್ಲಿ ಕೇವಲ 55 ರನ್​ಗಳಿಸಿದ್ದಾರೆ.

ಬೌಲಿಂಗ್​ನಲ್ಲೂ ರಸೆಲ್​ ಪರಿಣಾಮಕಾರಿ ಅನ್ನಿಸಿಲ್ಲ. ಸನ್ ರೈಸರ್ಸ್ ಪರ ಮೊಹಮ್ಮದ್ ಶಮಿ, ಚೆನ್ನೈ ಪರ ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಆರ್​.ಅಶ್ವಿನ್ ಸಹ ಪ್ರಸಕ್ತ ಐಪಿಎಲ್​ನ ಫ್ಲಾಪ್ ಸ್ಟಾರ್ಸ್ ಆಗಿದ್ದಾರೆ. ಫಸ್ಟ್​​ ಹಾಫ್​​ನಲ್ಲಿ ಫೇಲ್​ ಆದ ಇವ್ರು ಸೆಕೆಂಡ್​ ಹಾಫ್​ನಲ್ಲಾದ್ರೂ ಕಮ್​​ಬ್ಯಾಕ್​ ಮಾಡ್ತಾರಾ ಅಥವಾ ಮ್ಯಾನೇಜ್​​ಮೆಂಟ್​ ಇವರನ್ನ ಬೆಂಚ್​ಗೆ ಫಿಕ್ಸ್​ ಮಾಡುತ್ತಾ ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment