/newsfirstlive-kannada/media/post_attachments/wp-content/uploads/2024/11/10-BAD-FOODS-FOR-KID.jpg)
ಮಕ್ಕಳು ಅಂತ ಬಂದಾಗ ಪೋಷಕರಿಗೆ ಅವರ ಊಟದ ಬಗ್ಗೆಯೇ ಹೆಚ್ಚು ಚಿಂತೆ. ಯಾವ ರೀತಿಯ ಆಹಾರ ನೀಡಬೇಕು. ಯಾವೆಲ್ಲಾ ನ್ಯೂಟ್ರಿಷನ್ಗಳಿರುವ ಫುಡ್ ಒಳ್ಳೆಯದು ಎಂದು ತಲೆ ಕೆಡಿಸಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ 0 ಯಿಂದ 5 ವರ್ಷದವರೆಗಿನ ಮಕ್ಕಳಿಗೆ ಏನು ನೀಡಬೇಕು ಎಂಬುದನ್ನು ಕೂಡ ಬಹಳ ಮುಖ್ಯವಾಗಿ ವಿಚಾರ ಮಾಡುತ್ತಾರೆ. ಆದ್ರೆ ಈ ವಯಸ್ಸಿನೊಳಗಿನ ಮಕ್ಕಳಿಗೆ ಏನು ಕೊಡಬಾರದು. ಯಾವ ಪದಾರ್ಥಗಳು ಈ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂಬುದನ್ನು ಪೋಷಕರು ಅರಿಯುವುದು ಬಹಳ ಮುಖ್ಯ. ಮಕ್ಕಳನ್ನು ಕೆಲವು ಆಹಾರಗಳಿಂದ ದೂರ ಇಡಬೇಕಾಗುತ್ತದೆ. ಅವುಗಳನ್ನು ಯಾವುದೇ ಕಾರಣಕ್ಕೂ ತಿನ್ನಲು ಕೊಡಬಾರದು ಅವುಗಳಲ್ಲಿ ಇವು
ಕಾಫೀನ್
ಕಾಫೀನ್ ಅಂಶವಿರುವ ಪಾನೀಯವನ್ನು ಮಕ್ಕಳಿಗೆ ನೀಡಬಾರದು.ಅದರಲ್ಲೂ 0 ಯಿಂದ 5 ವರ್ಷದೊಳಗಿನ ಮಕ್ಕಳಿಗೆ ನೀಡಲೇಬಾರದು. ಕಾಫೀನ್ನಿಂದಾಗಿ ಕೇಂದ್ರ ನರಮಂಡಲಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇರುತ್ತದೆ. ಅದು ಮಾತ್ರವಲ್ಲ ನಿದ್ರಾಹೀನತೆಯನ್ನು ಕೂಡ ತಂದು ಕೊಡುತ್ತದೆ ಹೀಗಾಗಿ ಕಾಫೀನ್ನನ್ನು ಮಕ್ಕಳಿಗೆ ನೀಡಬೇಡಿ.
ಸಂಸ್ಕರಿಸದ ಮಾಂಸ
ಇನ್ನು ಮಕ್ಕಳಿಗೆ ಸಂಸ್ಕರಿಸದ ಮಾಂಸಾಹಾರ ನೀಡುವುದು ತುಂಬಾ ಅಪಾಯಕಾರಿ ಎಂದು ಮಕ್ಕಳ ತಜ್ಞರು ಹೇಳುತ್ತಾರೆ. ಇದರಲ್ಲಿ ಅತಿಹೆಚ್ಚು ಸೋಡಿಯಂ ಇರುವುದರಿಂದ ಇದು ಅನಾರೋಗ್ಯಕ್ಕೆ ಹಲವು ದಾರಿಗಳನ್ನು ಉಂಟು ಮಾಡುತ್ತದೆ. ಅದು ಮಾತ್ರವಲ್ಲ ಮಕ್ಕಳ ದೇಹದಲ್ಲಿ ಅನಾರೋಗ್ಯಕರ ಫ್ಯಾಟ್ ಉತ್ಪನ್ನ ಮಾಡುತ್ತದೆ. ಹೀಗಾಗಿ ಈ ರೀತಿಯ ಮಾಂಸಹಾರ ನೀಡಬಾರದು
ಸಕ್ಕರೆ ಅಂಶ ಇರುವ ಪಾನೀಯ
ಸಕ್ಕರೆ ಅಂಶ ಇರುವ ಪಾನೀಯ ಅಂದ್ರೆ ಶುಗರಿ ಡ್ರಿಂಕ್ಗಳಾದ ಸೋಡಾ, ಹಣ್ಣಿನ ಜ್ಯೂಸ್, ಇದು ಮಕ್ಕಳ ದೇಹದ ತೂಕವನ್ನು ಹೆಚ್ಚು ಮಾಡುವ ಸಂಭವವಿರುತ್ತದೆ. ಅಗತ್ಯಕ್ಕೆ ಮೀರದ ತೂಕವನ್ನು ಮಕ್ಕಳು ಹೊಂದುತ್ತಾರೆ. ಹೀಗಾಗಿ ಇಂತಹ ಪಾನೀಯಗಳಿಂದ ಕೊಂಚ ದೂರ ಇರಿ.
ಆರ್ಟಿಫಿಷಲ್ ಸ್ವೀಟನರ್
ಆರ್ಟಿಫಿಷಲ್ ಸ್ವೀಟನರ್ಗಳನ್ನು ಮಕ್ಕಳಿಗೆ ನೀಡಬಾರದು ಇದು ಮಕ್ಕಳ ಚಯಾಪಚಯ ಕ್ರಿಯೆಯ ಮೇಲೆ ಭಯಂಕರ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ದೀರ್ಘಕಾಲ ಉಳಿಯುವಂತಹ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತವೆ.
ಕರಿದ ಪದಾರ್ಥಗಳು
ಕರಿದ ಪದಾರ್ಥಗಳನ್ನು ಆಚೆಯಿಂದ ತಂದು ಮಕ್ಕಳಿಗೆ ನೀಡುವಾಗ ಬಹಳ ಎಚ್ಚರಿಕೆಯನ್ನು ವಹಿಸಿ. ಅವುಗಳನ್ನು ತಂಬಾ ಕಳಪೆ ಗುಣಮಟ್ಟದ ಆಯಿಲ್ನಲ್ಲಿ ಕರೆಯುತ್ತಾರೆ ಆದ್ದರಿಂದ ಮಕ್ಕಳಲ್ಲಿ ಫ್ಯಾಟ್ ಬೆಳೆಯುವ ಸಂಭವ ಹೆಚ್ಚು ಇರುತ್ತದೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಇದರ ಜೊತೆಗೆ ಹೈ ಶುಗರ್ ಇರುವ ಸಿರಿಯಲ್ಸ್, ಚಿಪ್ಸ್ ಬಿಸ್ಕಟ್ಸ್, ಕುಕ್ಕೀಸ್ ತರಹದ ಸ್ನಾಕ್ಸ್ಗಳು, ಅನಾರೋಗ್ಯಕರ ಕೊಬ್ಬು ಸೃಷ್ಟಿಸುವ ಫಾಸ್ಟ್ ಫುಡ್ಗಳು, ಕ್ಯಾಂಡೀಸ್ ಹಾಗೂ ಪಾಶ್ಚರೀಕರಿಸದ ಹಾಲು ಇವೆಲ್ಲವೂ ಕೂಡ 0 ಯಿಂದ 5 ವರ್ಷದೊಳಗಿನ ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿಯೇ. ಹೀಗಾಗಿ ಇವುಗಳಿಂದ ನಿಮ್ಮ ಮಕ್ಕಳನ್ನು ದೂರ ಇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ