/newsfirstlive-kannada/media/post_attachments/wp-content/uploads/2024/11/10-Raw-Foods.jpg)
ತರಕಾರಿಗಳಾಗಲಿ ಕೆಲವು ಆಹಾರ ಪದಾರ್ಥಗಳಾಗಲಿ ಹಸಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ದೇಹಕ್ಕೆ ತುಂಬಾ ಒಳ್ಳೆಯದು ಎಂಬ ಮಾತುಗಳನ್ನು ಆಗಾಗ ನಾವು ಕೇಳುತ್ತಿರುತ್ತೇವೆ. ಆದರೆ ಇದು ಯಾವಾಗಲೂ ಕೂಡ ಅಷ್ಟೊಂದು ಸುರಕ್ಷಿತವಲ್ಲ. ಅನೇಕ ಆಹಾರ ಪದಾರ್ಥಗಳನ್ನು ಹಸಿಯಾಗಿ ತಿನ್ನುವುದದಿಂದ ನಿಮ್ಮ ದೇಹಕ್ಕೆ ಅಪಾಯಕಾರಿ ವಿಷವನ್ನು ಉಣಿಸಿದಂತೆ ಆಗುತ್ತದೆ. ಅದು ಮಾತ್ರವಲ್ಲ ಅನೇಕ ಕೀಟಾಣುಗಳು ಕೂಡ ನಿಮ್ಮ ದೇಹದಲ್ಲಿ ಪ್ರವೇಶ ಪಡೆಯುತ್ತವೆ.
ಕೆಲವು ಆಹಾರ ಪದಾರ್ಥಗಳು ಉದಾಹರಣೆಗೆ ಹಸಿ ಮಾಂಸ, ಮೊಟ್ಟೆ, ಅದರ ಜೊತೆಗೆ ಕೆಲವು ಹಣ್ಣುಗಳು ಹಾಗೂ ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಇವುಗಳನ್ನು ಬೇಯಿಸದೇ, ಫ್ರೈ ಮಾಡದೇ ತಿನ್ನುವುದು ತುಂಬಾ ಅಪಾಯಕಾರಿ ಅವುಗಳಲ್ಲಿ ಪ್ರಮುಖವಾದವು ಹೀಗಿವೆ.
1. ಮೊಟ್ಟೆ: ಮೊಟ್ಟೆಯನ್ನು ಹಸಿಯಾಗಿ ಸೇವಿಸುವುದು ತುಂಬಾ ಅಂದ್ರೆ ತುಂಬಾನೇ ಅಪಾಯಕಾರಿ. ಡಾ ಸಿಮ್ರತಾ ಕಥುರಿಯಾ ಅವರು ಹೇಳುವ ಪ್ರಕಾರ ಹಸಿ ಮೊಟ್ಟೆಯಲ್ಲಿ ಅನೇಕ ಅಪಾಯಕಾರಿ ಬ್ಯಾಕ್ಟಿರಿಯಾಗಳು ಇರುತ್ತವೆ. ಇದನ್ನು ಹಸಿಯಾಗಿ ಸೇವಿಸುವುದರಿಂದ ಫುಡ್ ಪಾಯ್ಸನ್ನಂತಹ ಸಮಸ್ಯೆಗಳು ಉಂಟಾಗುತ್ತವೆ. ಬೇಯಿಸಲಾಗದ ಅಥವಾ ಹಸಿಮೊಟ್ಟೆಯನ್ನು ತಿನ್ನುವುದರಿಂದ ವಾಂತಿ, ಡಿಹೈಡ್ರೇಷನ್, ಡಯೇರಿಯಾಯಂತಹ ಲಕ್ಷಣಗಳು ನಮ್ಮಲ್ಲಿ ಕಾಣಿಸುತ್ತವೆ ಎಂದು ಸಿಮ್ರತಾ ಹೇಳುತ್ತಾರೆ ಹೀಗಾಗಿ ಮೊಟ್ಟೆಯನ್ನು ಆದಷ್ಟು ಬೇಯಿಸಿ ತಿನ್ನುವುದು ತುಂಬಾ ಉತ್ತಮ.
2. ಮಶ್ರೂಮ್: ಮಶ್ರೂಮ್ನಲ್ಲಿ ಹಲವು ಬಗೆಗಳಿರುತ್ತವೆ. ಪ್ರಮುಖವಾಗಿ ಬಟನ್ ಮಶ್ರೂಮ್ಗಳನ್ನು ಹಸಿಯಾಗಿ ತಿನ್ನಬಹುದು ಅದು ಸ್ವಲ್ಪ ಸುರಕ್ಷಿತ. ಆದ್ರೆ ಕೆಲವು ಕೃಷಿ ಮಾಡಿರುವ ಮಶ್ರೂಮ್ಗಳನ್ನು ಹಸಿಯಾಗಿ ತಿನ್ನುವುದು ವಿಷವನ್ನು ಕುಡಿಯುವುದು ಎರಡು ಒಂದೇ ಎಂದು ಹೇಳಲಾಗುತ್ತದೆ. ಇದು ದೇಹದ ಹಲವು ಅಂಗಗಳಿಗೆ ಹಾನಿ ಮಾಡುವ ಸಾಧ್ಯತೆ ಇದೆ. ಇವುಗಳನ್ನು ತಿನ್ನುವುದರಿಂದ ವಾಮಿಟಿಂಗ್, ವಾಕರಿಗೆ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಅವುಗಳನ್ನು ಸರಿಯಾಗಿ ಬೇಯಿಸಿ ತಿನ್ನುವುದರಿಂದ ಸರಳವಾಗಿ ಜೀರ್ಣವಾಗುತ್ತವೆ ಹಾಗೂ ಅವುಗಳಲ್ಲಿರುವ ವಿಷಕಾರಿ ರಾಸಾಯನಿಕ ಅಂಶಗಳು ನಿರ್ನಾಮ ಆಗಿರುತ್ತವೆ.
ಇದನ್ನೂ ಓದಿ:Health Tips: ಉಪವಾಸದಿಂದಲೂ ರೋಗಗಳಿಗೆ ಇದೆ ಪರಿಹಾರ.. ರೋಗ ನಿಯಂತ್ರಣ ಹೇಗೆ..?
3. ಗೋಡಂಬಿ: ಕಚ್ಚಾ ಗೋಡಂಬಿಯಲ್ಇ ಇವ್ಯಾ ಹಾಗೂ ಉರೊಶೋಲ್ ಎಂಬ ವಿಷಕಾರಿ ಅಂಶಗಳು ಇರುತ್ತವೆ. ಕಚ್ಚಾ ಗೋಡಂಬಿಗಳನ್ನು ತಿನ್ನುವುದರಿಂದ ಅಲರ್ಜಿಯಂತಹ ಸಮಸ್ಯೆಗಳು ಕಾಡುತ್ತವೆ ಎಂದು ವೈದ್ಯರು ಹೇಳುತ್ತಾರೆ. ಚರ್ಮದ ಮೇಲೆ ಗುಳ್ಳೆಗಳು ಏಳುವ ಸಂಭವಗಳಿರುತ್ತವೆ. ಉಸಿರಾಟದ ತೊಂದರೆಯೂ ಕೂಡ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಗೋಡಂಬಿಯನ್ನು ಹುರಿದು ತಿನ್ನುವುದು ಹಾಗೂ ನೀರಿನಲ್ಲಿ ನೆನೆಯಿಟ್ಟು ತಿನ್ನುವುದು ತುಂಬಾ ಸುರಕ್ಷಿತ.
4. ಆಲೂಗಡ್ಡೆ: ಆಲೂಗಡ್ಡೆಯನ್ನು ಹಸಿಯಾಗಿ ತಿನ್ನುವುದು ಕೂಡ ಅಪಾಯಕಾರಿ. ಇದರಿಂದಲೂ ವಾಕರಿಕೆ, ವಾಂತಿ, ನರಮಂಡಲಗಳಿಗೆ ಸಮಸ್ಯೆಯಾಗುವ ಸಾಧ್ಯತೆಗಳು ಇರುತ್ತವೆ. ಆಲೂಗಡ್ಡೆಯನ್ನು ಸರಿಯಾಗಿ ಬೇಯಿಸುವುದರಿಂದ ಅವುಗಳಲ್ಲಿರುವ ವಿಷಕಾರಿ ಅಂಶಗಳು ಹೊರಟು ಹೋಗಿ ಸೇವಿಸಲು ಯೋಗ್ಯವಾಗುತ್ತವೆ.
ಇದನ್ನೂ ಓದಿ: ಹಸಿ ಹಾಲು ಕುಡಿಯೋದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ? ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!
5. ಬೀನ್ಸ್: ನೋಯ್ಡಾದ ಇಂಟರ್ನ್ಯಾಷನಲ್ ಇನ್ಸ್ಟೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಝ್ನ ಡೈಟಿಷಿಯನ್ ಡಾ. ಪ್ರೀತಿ ನಾಗರ್ ಅವರು ಹೇಳುವ ಪ್ರಕಾರ. ಲ್ಯಾಕ್ಟಿನ್ಸ್ ಎಂಬ ವಿಷಕಾರಿ ಅಂಶ ಇರುತ್ತದೆ. ಇದು ವಾಕರಿಕೆ ಹಾಗೂ ಹೊಟ್ಟೆಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಹೀಗಾಗಿ ಬೀನ್ಸ್ ನೇರವಾಗಿ ಸೇವಿಸುವುದು ತುಂಬಾ ಅಪಾಯಕಾರಿ. ಯಾವಾಗ ಬೀನ್ಸ್ನ್ನು ಚೆನ್ನಾಗಿ ಬೇಯಿಸಿಕೊಂಡರೇ ಅದರಲ್ಲಿರುವ ಲ್ಯಾಕ್ಸಿನ್ಸ್ ಎಂಬ ವಿಷಕಾರಿ ಅಂಶ ಇಲ್ಲವಾಗುತ್ತದೆ. ಅದು ಸೇವಿಸಲು ಯೋಗ್ಯವಾದ ಆಹಾರ ಪದಾರ್ಥವಾಗಿ ಮಾರ್ಪಡುತ್ತದೆ.
6. ಕುಂಬಳಕಾಯಿ: ಕುಂಬಳಕಾಯಿಯನ್ನು ಹಸಿಯಾಗಿ ತಿನ್ನುವುದು ತುಂಬಾ ಅಪಾಯಕಾರಿ. ಮಿತವಾಗಿ ಸೇವಿಸಿದರೆ ಅಷ್ಟು ಅಪಾಯಕಾರಿ ಅಲ್ಲ ಎಂದು ಹೇಳಲಾಗುತ್ತದೆ ಆದರೂ, ಸುರಕ್ಷತೆಯ ದೃಷ್ಟಿಯಿಂದ ಈ ಒಂದು ತರಕಾರಿಯನ್ನು ಬೇಯಿಸಿ ತಿನ್ನುವುದು ತುಂಬಾ ಉತ್ತಮ.
7. ಸೋರೆಕಾಯಿ: ಸೋರೆಕಾಯಿಯೂ ಕೂಡ ಕುಂಬಳಕಾಯಿಯ ಹಾಗೆ ಒಂದು ಮಿತಿಯಲ್ಲಿ ಹಸಿಯಾಗಿದ್ದಾಗ ತಿಂದರೆ ಉತ್ತಮ. ಆದರೂ ಇದು ಜೀರ್ಣಕ್ರಿಯೆಗೆ ತುಂಬಾ ಅಪಾಯದ ತಂದೊಡ್ಡುವ ಸಾಧ್ಯತೆ ಇದ್ದು, ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೂ ಹಾಗೂ ದೇಹಕ್ಕೂ ಕೂಡ ಒಳ್ಳೆಯದು.
ಇದನ್ನೂ ಓದಿ:ಸ್ನಾಯುಗಳ ಬೆಳವಣಿಗೆಗೆ ಹಣ್ಣುಗಳು ಬಹಳ ಸಹಕಾರಿ; ಆ ಪ್ರಮುಖ 10 ಹಣ್ಣುಗಳು ಯಾವುವು?
8. ಎಲೆಕೋಸು(ಕ್ಯಾಬೀಜ್): ಅನೇಕರು ಕ್ಯಾಬೀಜ್ನ್ನು ತರಕಾರಿ ಸಲಾಡ್ನಲ್ಲಿ ಹಸಿಯಾಗಿ ತಿನ್ನಲು ಇಷ್ಟಪಡುತ್ತಾರೆ. ಆದ್ರೆ ಒಂದು ನೆನಪಿರಲಿ ಅನೇಕ ಪದರಗಳಲ್ಲಿ ಇದು ಸೃಷ್ಟಿಯಾಗಿರುವುದರಿಂದ ಇದರಲ್ಲಿ ಅನೇಕ ರೀತಿಯ ಕೀಟಗಳು ವಾಸಗೊಂಡಿರುವ ಸಾಧ್ಯತೆಗಳು ಇರುತ್ತವೆ ಹೀಗಾಗಿ ಆದಷ್ಟು ಇದನ್ನು ಬೀಸಿನೀರಿನಲ್ಲಿ ತೊಳೆದು ಆಮೇಲೆ ಬೇಯಿಸಿ ತಿಂದರೆ ತುಂಬಾ ಉತ್ತಮ ಎಂದು ಹೇಳಲಾಗುತ್ತದೆ.
9. ಬದನೆಕಾಯಿ: ಬದನೆಕಾಯಿಯಲ್ಲಿ ಸೋಲಾನೈನ್ ಎಂಬ ಅಂಶವಿರುವುದರಿಂದ ಇದನ್ನು ಹಸಿಯಾಗಿ ತಿನ್ನುವುದು ನಮಗೆ ನಾವೇ ಆಪತ್ತನ್ನು ತಂದುಕೊಂಡಂತೆ. ದೇಹಕ್ಕೆ ಈ ಅಂಶವು ಅತಿಯಾಗಿ ಹೋಗುವುದರಿಂದ ನರರೋಗ ಹಾಗೂ ಗ್ಯಾಸ್ಟ್ರೀಕ್ ಸಮಸ್ಯೆಗಳು ಉಂಟಾಗುತ್ತವೆ. ತಲೆನೋವು, ಹೊಟ್ಟೆಯಲ್ಲಿ ಸೆಳೆದಂತೆ ಆಗುವುದು, ಡಯೆರಿಯಾ, ವಾಕರಿಕೆ, ವಾಂತಿ, ಈ ರೀತಿಯ ಅನೇಕ ಸಮಸ್ಯೆಗಳನ್ನು ಇದು ತಂದೊಡ್ಡುತ್ತದೆ.
10 ಹೂಕೋಸು: ಇದನ್ನು ಹಸಿಯಾಗಿ ತಿನ್ನುವುದು ಕೂಡ ಅಪಾಯಕಾರಿ. ಇದರ ಗಾತ್ರ ಹಾಗೂ ಆಕಾರದಲ್ಲಿಯೇ ನಾವು ತಿಳಿದುಕೊಳ್ಳಬಹುದು. ಈ ತರಕಾರಿಯೊಳಗೆ ಅನೇಕ ರೀತಿಯ ಕ್ರಿಮಿ ಕೀಟಗಳು ಸೇರಿಕೊಂಡಿರುತ್ತವೆ. ಹೀಗಾಗಿ ಇದನ್ನು ಆದಷ್ಟು ಬೇಯಿಸಿ ತಿನ್ನುವುದು ಒಳ್ಳೆಯದು. ಬೇಯಿಸುವ ಮೊದಲು ಅದನ್ನು ಬಿಸಿನೀರಿನಲ್ಲಿ ಹತ್ತು ನಿಮಿಷವಿಡುವುದು ಇನ್ನೂ ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ