/newsfirstlive-kannada/media/post_attachments/wp-content/uploads/2024/11/10-FRUITS.jpg)
ದೇಹದ ಸ್ನಾಯುಗಳನ್ನು ಮಾಂಸಖಂಡಗಳನ್ನು ಹುರಿಗೊಳಿಸುವು ಯಾರಿಗೆ ತಾನೆ ಇಷ್ಟವಿಲ್ಲ. ಒಂದೊಂದು ಮಸಲ್ಗಳು ಕಟೆದಿಟ್ಟ ಮೂರ್ತಿಯಂತೆ ಮಾಡಲು ಎಲ್ಲರೂ ಹಲವು ಸಾಹಸಗಳನ್ನು ಮಾಡುತ್ತಾರೆ. ವ್ಯಾಯಾಮ, ಯೋಗ, ಜಿಮ್ ಹೀಗೆ ಹಲವು ಕಸರತ್ತುಗಳನ್ನು ಮಾಡಿ ಇಡೀ ದೇಹವನ್ನೇ ಹುರಿಗೊಳಿಸುತ್ತಾರೆ. ಸ್ನಾಯು ಅಥವಾ ಮಾಂಸಖಂಡಗಳು ಬೆಳವಣಿಗೆ ಹೊಂದುವಲ್ಲಿ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ ಅದರಲ್ಲಿಯೂ ಪ್ರಮುಖವಾಗಿ ಈ ಹತ್ತು ಹಣ್ಣುಗಳು ಸ್ನಾಯುಗಳ ಬೆಳವಣಿಗೆಗೆ ತುಂಬಾ ಸಹಾಯಕ.
ಸ್ನಾಯುಗಳ ಬೆಳವಣಿಗೆಗೆ ಪ್ರಮುಖವಾಗಿ ಬೇಕಾಗಿರುವುದು ಪೋಷಕಾಂಶಗಳು. ಹಣ್ಣುಗಳು ಅಂದ್ರೆನೇ ಪೋಷಕಾಂಶಗಳ ಆಗರ. ಅದರಲ್ಲಿಯೂ ಕೆಲವು ಪ್ರಮುಖ ಹಣ್ಣುಗಳಂತೂ ಈ ವಿಷಯದಲ್ಲಿ ಶ್ರೀಮಂತ ಅಂತಹ ಹಣ್ಣುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ವಿವರವಿದೆ.
1. ಬಾಳೆ ಹಣ್ಣು
ಸ್ನಾಯುಗಳು ಬೆಳವಣಿಗೆಗೆ ಪ್ರಮುಖ ಪಾತ್ರವಹಿಸುವ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು ಇದರಲ್ಲಿರುವ ಕಾರ್ಬ್ ಹಾಗೂ ಪೋಟ್ಯಾಶಿಯಂ ಅಂಶಗಳು ಸ್ನಾಯುಗಳನ್ನು ಗಟ್ಟಿಗೊಳಿಸುತ್ತವೆ. ನೀವು ಬಾಳೆಹಣ್ಣುಗಳನ್ನು ನೇರವಾಗಿ ತಿನ್ನಬಹುದು ಅಥವಾ ಸ್ಮೂತಿ ಮಾಡಿಕೊಂಡು ಕೂಡ ಸೇವಿಸಬಹುದು. ಈ ಹಣ್ಣು ಸ್ನಾಯುಗಳನ್ನು ಹುರಿಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
2. ಪೇರಲು ಹಣ್ಣು
ಪ್ರೋಟಿನ್, ಫೈಬರ್, ವಿಟಮಿನ್ ಸಿ ಹೀಗೆ ಸಾಕಷ್ಟು ಪೋಷಕಾಂಶಗಳನ್ನು ಖನಿಜಾಂಶಗಳನ್ನು ಹೊಂದಿದ ಹಣ್ಣು ಪೇರಲು ಹಣ್ಣು. ಈ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಸ್ನಾಯುಗಳ ಶಕ್ತಿ ವೃದ್ಧಿಯಾಗಲು ಸಹ ಸಹಾಯಕವಾಗುತ್ತವೆ. ಸಂಜೆ ಸಮಯದಲ್ಲಿ ಕುರುಕಲು ತಿಂಡಿಯ ಬದಲು ಈ ಹಣ್ಣುಗಳನ್ನು ಸೇವಿಸುವುದು ತುಂಬಾ ಉತ್ತಮ
3. ಮಾವಿನ ಹಣ್ಣು
ಮಾವಿನ ಹಣ್ಣು ವಿಟಮಿನ್ ಹಾಗೂ ಕಾರ್ಬ್ಸ್ಗಳ ಆಗರ. ಇದನ್ನು ಸೇವಿಸುವುರಿಂದ ಸ್ನಾಯುಗಳು ಶಕ್ತಿಯುತಗೊಳ್ಳುತ್ತವೆ. ಅದರಲ್ಲೂ ವರ್ಕ್ಔಟ್ಗೂ ಮುನ್ನ ಇವುಗಳ ಸ್ಲೈಸ್ ಅಥವಾ ಸ್ಮೂತಿ ಮಾಡಿಕೊಂಡು ಸೇವಿಸುವುದರಿಂದ ತುಂಬಾ ಲಾಭಗಳಿವೆ.
4. ದಾಳಿಂಬೆ ಹಣ್ಣು
ಅತಿಹೆಚ್ಚು ಆ್ಯಂಟಿ ಆಕ್ಸಿಡೆಂಟ್ಸ್ಗಳನ್ನು ಹೊಂದಿರುವ ಹಣ್ಣು ಅಂದ್ರೆ ಅದು ದಾಳಿಂಬೆ ಹಣ್ಣು. ಇದು ಉರಿಯೂತದಂತಹ ಸಮಸ್ಯೆಗಳು ಹತ್ತಿರ ಬರದಂತೆ ತಡೆದು ಸ್ನಾಯುಗಳಿಗೆ ಹೆಚ್ಚು ಹೆಚ್ಚು ರಕ್ತ ಹರಿದು ಹೋಗುವಂತೆ ಮಾಡುವಲ್ಲಿ ಸಹಾಯಕಾರಿಯಾಗಿ ನಿಲ್ಲುತ್ತದೆ. ವರ್ಕೌಟ್ ಮಾಡಿದ ಬಳಿಕ ಈ ದಾಳಿಂಬೆ ಜ್ಯೂಸ್ ಕುಡಿಯುವುದು ತುಂಬಾ ಒಳ್ಳೆಯದು
5. ಪಪ್ಪಾಯಿ ಹಣ್ಣು
ಪಪ್ಪಾಯಿ ಹಣ್ಣಿನಲ್ಲಿ ಪಾಪೇನ್ ಹಾಗೂ ಪ್ರೊಟೀನ್ ಅಂಶಗಳು ಹೆಚ್ಚು ಇವೆ. ಇದು ಪಚನಕ್ರಿಯೆಯನ್ನು ಸುಲಭಗೊಳಿಸಿ ಸ್ನಾಯುಗಳಲ್ಲಿ ಊತ ಬರದಂತೆ ಕಾಪಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಹಣ್ಣನ್ನು ಸಲಾಡ್ ರೂಪದಲ್ಲಿ ಇಲ್ಲವೇ ನೇರವಾಗಿ ಸೇವಿಸಬಹುದು. ಇದನ್ನು ಊಟದ ಮೊದಲು ಇಲ್ಲವೇ ಮಿಡ್ ಡೇ ಸ್ನಾಕ್ಸ್ ರೀತಿಯಲ್ಲಿ ನೀವು ಸೇವಿಸಬಹುದು.
ಇದನ್ನೂ ಓದಿ:ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೇವಿಸಿ ಕ್ಯಾರೆಟ್; ಪ್ರತಿದಿನ ಈ ತರಕಾರಿ ತಿನ್ನುವುದರಿಂದ ಇವೆ 8 ಆರೋಗ್ಯಕರ ಲಾಭಗಳು
6. ಚಿಕ್ಕೂ ಹಣ್ಣು
ಚಿಕ್ಕೂ ಹಣ್ಣಿನಲ್ಲಿಯೂ ಕೂಡ ಹೆಚ್ಚು ಕಾರ್ಬ್ಸ್ ಹಾಗೂ ಆ್ಯಂಟಿಆಕ್ಸಿಡೆಂಟ್ಗಳು ಇರುತ್ತವೆ. ನಿಮ್ಮ ವರ್ಕೌಟ್ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಚಿಕ್ಕೂ ಹಣ್ಣು ತುಂಬಾ ಸಹಕಾರಿ ಇದನ್ನು ಜ್ಯೂಸ್ ಮಾಡಿಕೊಂಡು ವರ್ಕೌಟ್ಗೂ ಕೆಲವು ಗಂಟೆಗಳ ಮುಂಚೆ ಸೇವಿಸುವುದು ಒಳ್ಳೆಯದು ಎನ್ನುತ್ತಾರೆ.
7. ಕಲ್ಲಂಗಡಿ ಹಣ್ಣು
ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚು ಮಾಡಿ ಆಯಾಸವಾಗದಂತೆ ತಡೆಯುವ ಶಕ್ತಿ ಕಲ್ಲಂಗಡಿ ಹಣ್ಣಿಗಿದೆ. ನಿಮ್ಮ ದೇಹವನ್ನು ಹೈಡ್ರೇಡ್ ಆಗಿ ಇಡುವಲ್ಲಿ ಇದು ಮಹತ್ವದ ಪಾತ್ರವಹಿಸುತ್ತದೆ. ಇದನ್ನು ವರ್ಕೌಟ್ಗೂ ಮೊದಲು ಇಲ್ಲವೇ ವರ್ಕೌಟ್ ನಂತರ ಸೇವಿಸಬಹುದು.
ಇದನ್ನೂ ಓದಿ:Black Diamond Apple! ವಿಶ್ವದ ಅತ್ಯಂತ ದುಬಾರಿ ಸೇಬು ಇದು, ಆರೋಗ್ಯಕ್ಕೆ ಎಷ್ಟು ಒಳ್ಳೆಯದು?
8. ಬೆಟ್ಟದ ನೆಲ್ಲಿಕಾಯಿ
ವಿಟಮಿನ್ ಸಿ ಹೆಚ್ಚು ಬೇಕು ಅಂದರೆ ಬೆಟ್ಟದ ನೆಲ್ಲೆಕಾಯಿ ಇದು ಸ್ನಾಯುಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ತುಂಬುತ್ತದೆ. ಇದನ್ನು ಬೆಳಗು ಮುಂಜಾನೆ ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ. ಇಲ್ಲವೇ ವರ್ಕೌಟ್ ಬಳಿಕ ಸ್ನ್ಯಾಕ್ಸ್ ರೂಪದಲ್ಲಿಯೂ ಕೂಡ ಇದನ್ನು ತಿನ್ನಬಹುದು.
9. ಸೀತಾಫಲ ಹಣ್ಣು
100 ಗ್ರಾಂ ಸೀತಾಫಲ ಹಣ್ಣಿನಲ್ಲಿ 1.7 ಗ್ರಾಂನಷ್ಟು ಪ್ರೊಟೀನ್ ಅಂಶ ಇರುತ್ತದೆ. ಅದರ ಜೊತೆಗೆ ಕರ್ಬ್ಸ್ ಅಂಶವೂ ಕೂಡ ಹೇರಳವಾಗಿರುತ್ತದೆ. ಇದನ್ನು ಸಾಯಂಕಾಲ ತಾಜಾ ಸ್ನ್ಯಾಕ್ಸ್ ರೂಪದಲ್ಲಿ ಸೇವಿಸಬಹುದು ಇಲ್ಲವೇ ವ್ಯಾಯಾಮದ ಬಳಿಕವೂ ಕೂಡ ಸೇವಿಸಬಹುದು.
10. ಹಲಸಿನ ಹಣ್ಣು
ಹಲಸಿನ ಹಣ್ಣಿನ ಪ್ರತಿ ನೂರ ಗ್ರಾಂನಲ್ಲಿ 1.5 ಗ್ರಾಂನಷ್ಟು ಪ್ರೊಟೀನ್ ಇರುತ್ತದೆ. ಇದರ ಜೊತೆಗೆ ಹೆಚ್ಚು ಪೋಟ್ಯಾಶಿಯಂ ಇದರಲ್ಲಿ ಇರುವುದರಿಂದ ಇದು ಮಸಲ್ಗಳಿಗೆ ಹೆಚ್ಚು ಶಕ್ತಿ ನೀಡುತ್ತದೆ. ಇದನ್ನು ಮಧ್ಯಾಹ್ನ ಊಟದ ಜೊತೆಗೆ ಇಲ್ಲವೇ ವ್ಯಾಯಾಮದ ಬಳಿಕ ಸೇವಿಸುವುದು ಉತ್ತಮ.
ಇದನ್ನೂ ಓದಿ:ಜೀರ್ಣಕ್ರಿಯೆ ಸಮಸ್ಯೆಗಳು ಹೃದಯಾಘಾತಕ್ಕೆ ಆಹ್ವಾನ ಕೊಡುತ್ತದೆಯಾ? ತಜ್ಞರು ಕೊಡುವ ಸಲಹೆಗಳು ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ