/newsfirstlive-kannada/media/post_attachments/wp-content/uploads/2025/03/CHEEP-RATE-GOLD-1.jpg)
ಸಾಮಾನ್ಯವಾಗಿ ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ಹಬ್ಬ ಹರಿದಿನ, ಮದುವೆ ಹೀಗೆ ಯಾವುದೇ ಶುಭ ಸಮಾರಂಭವಿದ್ದರೂ ಮನೆಯಲ್ಲಿ ಚಿನ್ನದ ಖರೀದಿ ಜೋರಾಗಿ ನಡೆಯುತ್ತದೆ. ಹೀಗಾಗಿಯೇ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಿದೆ.
ಇದನ್ನೂ ಓದಿ:ಗ್ರ್ಯಾಂಡ್ ಆಗಿ ಅತ್ತೆ-ಮಾವನ ಮದುವೆ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿದ ರಜತ್ ಕಿಶನ್! PHOTOS
ಇದೀಗ ದಿಲ್ಲಿಯಲ್ಲಿ 10 ಗ್ರಾಂಗೆ 3,400 ರೂ. ಕುಸಿತ ಕಂಡಿದ್ದು, ಬೆಂಗಳೂರಿನಲ್ಲಿಯೂ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡಿದೆ. ಹೌದು, ಇದು ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ ಅಂತಲೇ ಹೇಳಬಹುದು. ಬೆಂಗಳೂರಿನಲ್ಲಿ ಸೋಮವಾರ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,800 ರೂಪಾಯಿ ಇಳಿಕೆ ಕಂಡಿದ್ದು, 96,880 ರೂ ತಲುಪಿತು.
22 ಕ್ಯಾರೆಟ್ಗೆ 1,650 ರೂ, ಇಳಿದು 88,800 ಆಯಿತು. ಇತ್ತ ಬೆಳ್ಳಿ ಬೆಲೆಯಲ್ಲೂ ಕೆ.ಜಿ.ಗೆ 1,100 ಕಡಿಮೆಯಾಗಿ 97,900 ರೂಪಾಯಿ ಆಗಿದೆ. ಇನ್ನೂ, ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನದ ಬೆಲೆಯೂ 10 ಗ್ರಾಂಗೆ 1 ಲಕ್ಷ ರೂ. ಗಡಿ ದಾಟಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ