ಮೊಟ್ಟೆ ತಿನ್ನುವುದರಿಂದ ಆಗೋ 10 ಲಾಭಗಳೇನು? ಸಾರ್ವಜನಿಕರು ಓದಲೇಬೇಕಾದ ಸ್ಟೋರಿ!

author-image
Ganesh Nachikethu
Updated On
ಮೊಟ್ಟೆ ತಿನ್ನುವುದರಿಂದ ಆಗೋ 10 ಲಾಭಗಳೇನು? ಸಾರ್ವಜನಿಕರು ಓದಲೇಬೇಕಾದ ಸ್ಟೋರಿ!
Advertisment
  • ಮೊಟ್ಟೆ ತಿನ್ನುವುದರಿಂದ ಇದೆ ನಮಗೆ ಹತ್ತು ಹಲವು ಪ್ರಯೋಜನಗಳು
  • ನಿತ್ಯ ಆಹಾರದಲ್ಲಿ ಮೊಟ್ಟೆ ಸೇವನೆಯಿಂದ ಹಲವು ಸಮಸ್ಯೆಗಳು ದೂರ
  • ಚರ್ಮ, ಕೂದಲು, ಸ್ನಾಯುವಿಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಮುಕ್ತಿ

ಮೊಟ್ಟೆ ವೆಜ್​ ಅಥವಾ ನಾನ್​ ವೆಜ್​​ ಅನ್ನೋ ಚರ್ಚೆ ನಡೆಯುತ್ತಲೇ ಇದೆ. ಇದೆಲ್ಲದರ ಆಚೆ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ನೋಡಿದಾಗ ಮೊಟ್ಟೆಗಿಂತ ಮತ್ತೊಂದು ಆಹಾರ ಇನ್ನೊಂದಿಲ್ಲ. ಚಿಕನ್ ಮಟನ್ ಇವೆಲ್ಲವುಗಳಿಗಿಂತಲೂ ಮೊಟ್ಟೆಯಲ್ಲಿ ಹೆಚ್ಚಿನ ಪೋಷಕಾಂಶ, ಪೌಷ್ಠಿಕಾಂಶ ಎಲ್ಲಾ ಇದೆ. ಅತ್ಯಂತ ಉತ್ಕರ್ಷ ಪೋಷಕಾಂಶಗಳಾದ ಬಿ12, ಡಿ ಮತ್ತು ಎ ಗಳು ನಮಗೆ ಮೊಟ್ಟೆಯಲ್ಲಿಯೇ ಸಿಗುತ್ತವೆ. ಮೊಟ್ಟೆ ಕಣ್ಣು ಮತ್ತು ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೊಟ್ಟೆಯ ಒಟ್ಟು ಹತ್ತು ಪ್ರಯೋಜನಗಳನ್ನು ನೋಡುವುದಾದ್ರೆ ಹೀಗೀವೆ.

publive-image

ಅತಿಹೆಚ್ಚು, ಸಮೃದ್ಧವಾದ ಪೌಷ್ಠಿಕಾಂಶ:

ಮೊಟ್ಟೆಯಲ್ಲಿ ಅತಿಹೆಚ್ಚು ಪೌಷ್ಠಿಕಾಂಶ ನಮಗೆ ಸಿಗುತ್ತದೆ. ದೇಹಕ್ಕೆ ಬೇಕಾಗುವ ಒಂಬತ್ತು ತರದ ಅಮೈನೋ ಆಮ್ಲಗಳು ಈ ಮೊಟ್ಟೆಯಲ್ಲಿ ಇವೆ. ಇವು ಸ್ನಾಯುಗಳನ್ನು ಬಲಗೊಳಿಸುತ್ತವೆ. ಜೊತೆಗೆ ಇಡೀ ದೇಹದ ಕಾರ್ಯಚಟುವಟಿಕೆಯನ್ನು ಸರಿಯಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

publive-image

ಪೋಷಕಾಂಶಗಳ ಆಗರ ಮೊಟ್ಟೆ:

ಪೌಷ್ಠಿಕಾಂಶಗಳ ಜೊತೆ ಜೊತೆಗೆ ಮೊಟ್ಟೆ ಸಮೃದ್ಧ ವಿಟಮಿನ್ಸ್ ಮತ್ತು ಮಿನರಲ್ಸ್​ಗಳಿಂದ ಕೂಡಿದೆ. ವಿಟಮಿನ್ ಬಿ 12 ಜೊತೆ ಜೊತೆಗೆ ಹಲವು ಪೋಷಕಾಂಶಗಳು ಮೊಟ್ಟೆಯಲ್ಲಿ ಇರುವುದರಿಂದ, ನರಗಳ ಕಾರ್ಯಕ್ಷಮತ, ರಕ್ತದ ಕಣಗಳ ಆರೋಗ್ಯವನ್ನು ನಿರ್ವಹಿಸುವಲ್ಲಿ ಇದು ಸಹಾಯಕಾರಿ.

ಕಣ್ಣಿನ ಆರೋಗ್ಯಕ್ಕೆ ತುಂಬಾ ಸಹಾಯಕಾರಿ:

ಲೂಟಿನ್ ಝೀಯಾಕ್ಸಾಯಥೀನ್ ಹಾಗೂ ಕ್ಯಾರೋಟನಾಯ್ಡ್​ಗಳು ಮೊಟ್ಟೆಯಲ್ಲಿ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ತುಂಬಾ ಸಹಾಯಕಾರಿ. ಇದರಲ್ಲಿರುವ ಆ್ಯಂಟಿಆಕ್ಸಿಡಂಟ್​ಗಳು ವಯಸ್ಸಿಗೆ ಸಂಬಂಧಪಟ್ಟ ಸ್ನಾಯು ಸಮಸ್ಯೆಗಳಿಂದ ಕಾಪಾಡುತ್ತವೆ.

ಮೆದುಳಿನ ಆರೋಗ್ಯಕ್ಕೆ ಮೊಟ್ಟೆಯೇ ಶ್ರೇಷ್ಠ:

ಮೊಟ್ಟೆಯ ಸೇವೆನೆಯಿಂದಾಗಿ ನೆನಪಿನ ಹಾಗೂ ಕಲಿಯುವಿಕೆಯ ಶಕ್ತಿ ಹೆಚ್ಚುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮಕ್ಕಳು ಮೊಟ್ಟೆಯನ್ನು ಹೆಚ್ಚು ಹೆಚ್ಚು ತಿನ್ನುವುದರಿಂದ ಅವರ ಮೆದುಳಿನ ಸರ್ವತೋಮುಖ ವಿಕಾಸಕ್ಕೆ ಇದು ಹೆಚ್ಚು ಸಹಾಯಕಾರಿ.

ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ:

ಮೊಟ್ಟೆ ನೂರಾರು ರೀತಿಯ ಪೋಷಕಾಂಶಗಳನ್ನು ದೇಹಕ್ಕೆ ನೀಡುವುದರಿಂದ ಸಹಜವಾಗಿ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ವಿಟಮಿನ್ ಎ ಅಂತಹ ಪೋಷಕಾಂಶಗಳು ಚರ್ಮ ಸಂಬಂಧಿತ ಸಮಸ್ಯೆಗಳನ್ನು ತಡೆಯುತ್ತದೆ, ಹಲವಾರು ಸೋಂಕುಗಳಿಗೆ ಅಡ್ಡಿಯಾಗಿ ನಮ್ಮ ದೇಹದಲ್ಲಿ ಮೊಟ್ಟೆ ನಿಲ್ಲುತ್ತದೆ.

ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ:

ದಿನಕ್ಕೆ ಸರಿಯಾದ ಪ್ರಮಾಣದಲ್ಲಿ ಮೊಟ್ಟೆ ತಿನ್ನುವುದರಿಂದ ತೂಕದ ಪ್ರಮಾಣವನ್ನು ನಾವು ಸರಳವಾಗಿ ನಿರ್ವಹಣೆ ಮಾಡಬಹುದು. ಮೊಟ್ಟೆಯಲ್ಲಿ ಪ್ರೋಟಿನ್ ಅಂಶ ಜಾಸ್ತಿ ಇರುವುದರಿಂದ ಇದು ದೇಹದಲ್ಲಿರುವ ಕ್ಯಾಲರೀಸ್​ಗಳನ್ನ ನಿರ್ಮೂಲನೆ ಮಾಡುತ್ತದೆ.

ಮೂಳೆ ಗಟ್ಟಿಯಾಗಲು ಸೇವಿಸಿ ಮೊಟ್ಟೆ

ಮೊಟ್ಟೆಯಲ್ಲಿ ವಿಟಮಿನ್ ಡಿ ಇರುವುದರಿಂದ ಇದು ರಕ್ತದಲ್ಲಿ ಹೆಚ್ಚು ಹೆಚ್ಚು ಕ್ಯಾಲ್ಸಿಯಂ ಉತ್ಪಾನೆಯಾಗಲು ಸಹಾಯಕ. ಮೂಳೆಯ ಗಟ್ಟಿತನಕ್ಕೆ ಕ್ಯಾಲ್ಸಿಯಂ ಅಗತ್ಯವಿದೆ ಹೀಗಾಗಿ ಮೊಟ್ಟೆ ತಿನ್ನುವುದರಿಂದ ರಕ್ತದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿ ಮೂಳೆಗಳು ಬಲಿಷ್ಠವಾಗುತ್ತವೆ.

publive-image

ನಿಮ್ಮ ಚರ್ಮದ ರಕ್ಷಣೆ

ವಿಟಮಿನ್ ಎ ಮೊಟ್ಟೆಯಲ್ಲಿ ಇರುವುದರಿಂದ ಇದು ನಿಮ್ಮ ಚರ್ಮದ ಆರೋಗ್ಯವನ್ನು ಕಾಯುತ್ತದೆ. ವಿಟಮಿನ್ ಇ ಇಂದಾಗಿ ನಮ್ಮ ಚರ್ಮವು ಆಕ್ಸಿಡೆಟೀವ್ ಹಾನಿಯಿಂದ ರಕ್ಷಣೆ ಆಗುತ್ತದೆ. ಉತ್ತಮ ಚರ್ಮದ ಆರೋಗ್ಯಕ್ಕಾಗಿ ಮೊಟ್ಟೆ ತುಂಬಾ ಒಳ್ಳೆಯದು

ಬಲಿಷ್ಠ ಸ್ನಾಯುಗಳಿಗೆ ಬೇಕು ಮೊಟ್ಟೆ

ನಮ್ಮ ಸ್ನಾಯುಗಳು ಬಲಿಷ್ಠವಾಗಿರಬೇಕು, ಕಟ್ಟುಮಸ್ತಾಗಿರಬೇಕು ಅಂದ್ರೆ ನಾವು ದಿನದ ಊಟದಲ್ಲಿ ಮೊಟ್ಟೆಗೆ ಆದ್ಯತೆ ನೀಡಬೇಕು. ಮೊಟ್ಟೆಯಲ್ಲಿರುವ ಪೌಷ್ಠಿಕಾಂಶ ಸ್ನಾಯುಗಳ ಗಟ್ಟಿಯಾಗುವುದಕ್ಕೆ ದೊಡ್ಡ ಕೊಡುಗೆ ನೀಡುತ್ತದೆ.

publive-image

ಉತ್ತಮ ಕೇಶರಾಶಿಗಾಗಿ ಬಳಸಿ ಮೊಟ್ಟೆ

ಮೊಟ್ಟೆ ಕೂದಲು ಆರೋಗ್ಯಕ್ಕೂ ಕೂಡ ಒಳ್ಳೆಯದು. ಇದರಲ್ಲಿ ವಿಟಮಿನ್ ಬಿ ಬಯೋಟಿನ್ ಇರೋದ್ರಿಂದ, ಕೂದಲು ಉದುರುವಿಕೆಯಿಂದ ಹಾಗೂ ಗಟ್ಟಿಯಾದ ಸಮೃದ್ಧವಾದ ಕೂದಲು ಬೆಳವಣಿಗೆಗೆ ಸಹಾಯಕ

ಇದನ್ನೂ ಓದಿ: ರಾಜ್ಯದಲ್ಲಿ ನಾಳೆಯಿಂದ 4 ದಿನ ಭರ್ಜರಿ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment