newsfirstkannada.com

ಗೋಬಿ ಮಂಚೂರಿ ಮಾಡೋರೆ ಎಚ್ಚರ! ಚೂರು ಯಾಮಾರಿದ್ರೂ 10 ಲಕ್ಷ ದಂಡ; 7 ವರ್ಷ ಜೈಲು!

Share :

Published March 11, 2024 at 9:04pm

    ಚಾಟ್ಸ್​ ಪ್ರಿಯರಿಗೆ ಗುಡ್​ನ್ಯೂಸ್​ ಗೋಬಿ ಬ್ಯಾನ್​ ಇಲ್ಲ

    ಕಾಟನ್​ ಕ್ಯಾಂಡಿ ಬ್ಯಾನ್​ ಮಾಡದ ರಾಜ್ಯ ಸರ್ಕಾರ!

    ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಸ್ಪಷ್ಟನೆ

ಬೆಂಗಳೂರು: ಕಾಟನ್​ ಕ್ಯಾಂಡಿ, ಗೋಬಿ ಮಂಚೂರಿ ಎರಡು ಬ್ಯಾನ್​ ಆಗುತ್ತೆ ಅಂತ ಹರಿದಾಡ್ತಿದ್ದ ಸುದ್ದಿ ಕೇಳಿ ಚಾಟ್ಸ್​ ಪ್ರಿಯರಿಗೆ ನಿರಾಸೆಯಾಗಿತ್ತು. ಆದ್ರೆ, ರಾಜ್ಯ ಸರ್ಕಾರ ನಿಷೇಧ ಮಾಡದೆ ಬಣ್ಣ ಬಳಕೆಯನ್ನ ಬ್ಯಾನ್‌ ಮಾಡೋಕೆ ಮುಂದಾಗಿದೆ. ಗೋಬಿ, ಕಾಟನ್​ ಕ್ಯಾಂಡಿ ಮಾರಾಟಗಾರರಿಗೆ ಖಡಕ್​ ಆಗಿ ಆ ಎರಡು ಪದಾರ್ಥಗಳನ್ನ ಬಳಸದಂತೆ ವಾರ್ನಿಂಗ್​ ಕೊಟ್ಟಿದೆ. ಅದನ್ನ ಬಳಸಿದ್ರೆ ಜೈಲು ಪಾಲಾಗಬೇಕಾಗುತ್ತೆ.

ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ಬ್ಯಾನ್ ಮಾಡದ ಸರ್ಕಾರ

ಗೋಬಿ ಮಂಚೂರಿ ಮತ್ತು ಕಾಟನ್​ ಕ್ಯಾಂಡಿಯನ್ನ ರಾಜ್ಯ ಸರ್ಕಾರ ಬ್ಯಾನ್​ ಮಾಡಿಲ್ಲ. ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​, ಕೃತಕ ಬಣ್ಣ ಬಳಕೆ ಮಾಡಿದ ಕಾಟನ್ ಕ್ಯಾಂಡಿ, ಗೋಬಿಯನ್ನ ಮಾತ್ರ ನಿಷೇಧ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.

ಕೃತಕ ಬಣ್ಣ ಬಳಕೆ ಬ್ಯಾನ್​

ಕಾಟನ್​ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಸ್ಯಾಂಪಲ್​ ಸಂಗ್ರಹ ಮಾಡಲಾಗುತ್ತೆ. ಗೋಬಿ ಮಂಚೂರಿಯ ಒಟ್ಟು 171 ಮಾದರಿಗಳನ್ನ ಸಂಗ್ರಹ ಮಾಡಲಾಗಿದ್ದು, ಅದ್ರಲ್ಲಿ 107 ಮಾದರಿಯಲ್ಲಿ ಕೃತಕ ಬಣ್ಣದ ಅಂಶ ಪತ್ತೆಯಾಗಿದೆ. ಕೃತಕ ಬಣ್ಣ ಮಾದರಿ ಪುಡ್ ಸೇಫ್ಟಿ ಆ್ಯಕ್ಟ್ ಪ್ರಕಾರ ಅಸುರಕ್ಷಿತ. 2011ರ ನಿಯಮದ ಪ್ರಕಾರ ಗೋಬಿಗೆ ಬಣ್ಣ ಬಳಸುವಂತಿಲ್ಲ. ಕಲರ್ ಹಾಕಿರುವ ಕಾಟನ್ ಕ್ಯಾಂಡಿ ಮಾರಾಟಕ್ಕೆ ನಿಷೇಧವಿದೆ. ರೋಡಮೈನ್-ಬಿ ಬಳಕೆ ಮಾಡ್ತಿರೋದು ವರದಿಯಲ್ಲಿ ಬೆಳಕಿಗೆ ಬಂದಿದ್ದು, ಕೃತಕ ಬಣ್ಣ ಹಾಕಿರೋ ಗೋಬಿ ಮಂಚೂರಿ ಮಾರಾಟವನ್ನ ನಿರ್ಬಂಧಿಸಲಾಗಿದ್ದು, ನಿಯಮ ಮೀರಿದ್ರೆ 10 ಲಕ್ಷ ದಂಡ, 7 ವರ್ಷ ಜೀವಾವಧಿ ಶಿಕ್ಷೆ ಗ್ಯಾರಂಟಿ.

ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ, ಗೋಬಿ ಮಾತ್ರ ನಿಷೇಧ!

ಒಟ್ನಲ್ಲಿ, ಗೋಬಿ ಮಂಚೂರಿ, ಕಾಟನ್​ ಕ್ಯಾಂಡಿ ಬ್ಯಾನ್​ ಆಗದೇ ಇರೋದು ಚಾಟ್ಸ್​ ಪ್ರಿಯರಿಗೆ ಖುಷಿ ಕೊಟ್ಟಿದೆ. ಆದ್ರೆ, ಮಾರಾಟಗಾರರು ಕೃತಕ ಬಣ್ಣ ಬಳಸಿದ್ರೆ ಮಾತ್ರ ಜೈಲೂಟ ಗ್ಯಾಂರಟಿ ಫಿಕ್ಸ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೋಬಿ ಮಂಚೂರಿ ಮಾಡೋರೆ ಎಚ್ಚರ! ಚೂರು ಯಾಮಾರಿದ್ರೂ 10 ಲಕ್ಷ ದಂಡ; 7 ವರ್ಷ ಜೈಲು!

https://newsfirstlive.com/wp-content/uploads/2024/03/Gobi-3.jpg

Load More