/newsfirstlive-kannada/media/post_attachments/wp-content/uploads/2024/03/Dinesh-Gunduroa.jpg)
ಬೆಂಗಳೂರು: ರಾಜ್ಯದಲ್ಲಿ ಕೃತಕ ಬಣ್ಣ ಹಾಕಿದ ಗೋಬಿ ಮಂಚೂರಿಯನ್ನು ಬ್ಯಾನ್ ಮಾಡಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಕಠಿಣ ನಿಯಮ ಜಾರಿಗೆ ತರುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದಲ್ಲಿ ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆ ನಿರ್ಬಂಧಿಸಲಾಗಿದೆ. ಒಂದು ವೇಳೆ ಕೃತಕ ಕಲರ್ ಬಳಸಿ ಗೋಬಿ ಮಂಚೂರಿ ಮಾರಾಟ ಮಾಡಿದ್ರೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತೆ. ನಿಯಮ ಉಲ್ಲಂಘಿಸಿದವರ ವಿರುದ್ಧ 7 ವರ್ಷಕ್ಕಿಂತ ಅಧಿಕ ಜೈಲು ಶಿಕ್ಷೆಗೆ ಒಳಪಡಬಹುದು. ತಪ್ಪಿತಸ್ಥರ ವಿರುದ್ಧ ಜೀವಾವಧಿ ಶಿಕ್ಷೆಗೂ ಕಾನೂನಿನಲ್ಲಿ ಅವಕಾಶವಿದೆ ಎಂದಿದ್ದಾರೆ.
ಇದನ್ನೂ ಓದಿ: Breaking News: ರಾಜ್ಯದಲ್ಲಿ ಕೃತಕ ಬಣ್ಣ ಹಾಕಿದ ಗೋಬಿ ಮಂಚೂರಿ ನಿಷೇಧ
ಅಸಲಿಗೆ ಗೋಬಿ ಮಂಚೂರಿ ಅಸುರಕ್ಷಿತ ಅಲ್ಲ. ಅದನ್ನ ರಾಜ್ಯ ಸರ್ಕಾರ ಬ್ಯಾನ್ ಮಾಡಿಲ್ಲ. ಗೋಬಿ ಅನ್ನೋದು ಒಂದು ತರಕಾರಿ, ಅದನ್ನ ಬ್ಯಾನ್ ಮಾಡಲು ಆಗಲ್ಲ. ಆದರೆ ಕೃತಕ ಬಣ್ಣ ಬಳಕೆ ಮಾಡಿ ಗೋಬಿ ಮಂಚೂರಿ ಮಾರುವುದ ಅಪಾಯಕಾರಿಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಎಚ್ಚರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ