/newsfirstlive-kannada/media/post_attachments/wp-content/uploads/2025/01/New-Year-US.jpg)
ಯುಎಸ್: ಹೊಸ ವರ್ಷ ಸೆಲಬ್ರೇಟ್ ಮಾಡಲು ನ್ಯೂ ಓರ್ಲಿಯನ್ಸ್‌ನಲ್ಲಿ ಭಾರೀ ಜನ ಸೇರಿದ್ದರು. ನ್ಯೂ ಇಯರ್ಗಾಗಿ ಸೇರಿದ ಜನರ ಮೇಲೆ ಟ್ರಕ್ ನುಗ್ಗಿದ ಪರಿಣಾಮ 10 ಜನ ಸಾವನ್ನಪ್ಪಿದ್ದಾರೆ. ಇಷ್ಟೇ ಅಲ್ಲ ದುರ್ಘಟನೆಯಲ್ಲಿ ಸುಮಾರು 30 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಏನಿದು ಘಟನೆ?
ಪಿಕಪ್ ಟ್ರಕ್ ಚಾಲಕ ಜನರ ಮೇಲೆ ನುಗಿಸಿದ್ದು ಅಲ್ಲದೇ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. ಕೆನಾಲ್ ಮತ್ತು ಬೌರ್ಬನ್ ಅನ್ನೋ ಪ್ರದೇಶದಲ್ಲಿ ಸೆಲಬ್ರೇಟ್ ಮಾಡುವಾಗ ಜನರ ಮೇಲೆ ಟ್ರಕ್ ನುಗ್ಗಿಸಲಾಗಿದೆ.
ಇನ್ನು, ಜನರ ಮೇಲೆ ಟ್ರಕ್ ಹತ್ತಿಸಿದ ಚಾಲಕನ ಮೇಲೆ ಪೊಲೀಸ್ರು ಗುಂಡು ಹಾರಿಸಿದ್ರು. ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದು, ಗಾಯಗೊಂಡ ಎಲ್ಲರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಟ್ರಕ್ ಚಾಲಕನ ಅರೆಸ್ಟ್ ಆಗಿದ್ದು, ಯಾವ ಕಾರಣಕ್ಕಾಗಿ ಹೀಗೆ ಮಾಡಿದ ಎಂದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
ಈ ಹಿಂದೆ ಜರ್ಮನಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅಂದು ದಾಳಿಯಲ್ಲಿ 5 ಜನ ಸಾವನ್ನಪ್ಪಿದ್ದರು. ಇಡೀ ಜರ್ಮನ್ ಈ ಸುದ್ದಿ ಕೇಳಿ ಬೆಚ್ಚಿಬಿದ್ದಿತ್ತು. ಸದ್ಯ ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದು ಹೋಗಿದೆ.
ಇದನ್ನೂ ಓದಿ:ಬಿಸಿಸಿಐನಿಂದ ಬುಮ್ರಾಗೆ ಬಿಗ್ ಶಾಕ್; ಸ್ಟಾರ್ ವೇಗಿ ಮಾತಿಗೆ ಕ್ಯಾರೇ ಎನ್ನದ ಮ್ಯಾನೇಜ್ಮೆಂಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ