/newsfirstlive-kannada/media/post_attachments/wp-content/uploads/2025/02/PRAYAGARAJ-ACCIDENT.jpg)
ಛತ್ತಿಸ್​​ಗಢದಿಂದ ಪ್ರಯಾಗರಾಜ್​​ಗೆ ಹೊರಟಿದ್ದ ಸಮಯದಲ್ಲಿ ಬಸ್​ ಹಾಗು ಬುಲೆರೋ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದಾಗಿ ಸುಮಾರು 10 ಜನರ ಅಸುನೀಗಿದ್ದು. 19 ಜನರು ಭೀಕರವಾಗಿ ಗಾಯಗೊಂಡಿದ್ದಾರೆ. ಪ್ರಯಾಗರಾಜ್ ಹಾಗೂ ಮಿರ್ಜಾಪುರ್ ಹೆದ್ದಾರಿಯಲ್ಲಿ ಮಧ್ಯರಾತ್ರಿ ಈ ಒಂದು ಘಟನೆ ನಡೆದಿದ್ದು
ಛತ್ತೀಸ್​ಗಢದ ಭಕ್ತಾದಿಗಳು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಅಂತ ಪ್ರಯಾಣ ಬೆಳೆಸಿದ್ದರು. ಇತ್ತ ಪ್ರಯಾಗ್​ರಾಜ್​ಗೆ ಹೊರಟಿದ್ದ ಬಸ್​ನಲ್ಲಿಯೂ ಕೂಡ ರಾಜಘರ್ ಹಾಗೂ ಮಧ್ಯಪ್ರದೇಶದ ಭಕ್ತಾದಿಗಳು ಕೂಡ ಇದ್ದರು.
ಇದನ್ನೂ ಓದಿ:ಕುಂಭ ಮೇಳ ಕಾಲ್ತುಳಿತಕ್ಕೆ ಹೋಗ್ಬಿಟ್ಟ ಅಂದ್ಕೊಂಡ ಕುಟುಂಬ.. ತಿಥಿ ಕಾರ್ಯದ ವೇಳೆ ನಗುನಗುತ್ತ ಎಂಟ್ರಿ ಕೊಟ್ಟ..!
ಹತ್ತು ಜನರನ್ನು ಕರೆದುಕೊಂಡು ಹೋಗಿತ್ತಿದ್ದ ಬುಲೆರೋ ಕಾರ್​ನಲ್ಲಿದ್ದ ಎಲ್ಲಾ ಹತ್ತು ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಪಕ್ಕದಲ್ಲಿರುವ ಸ್ವರೂಪ ರಾಣಿ ಮೆಡಿಕಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಗಾಯಾಳುಗಳಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪ್ರಯಾಗರಾಜ್​​ನ ಹೆಚ್ಚುವರಿ ಎಸ್​ಪಿ ವಿವೇಕ್ ಯಾದವ್ ಹೇಳಿದ್ದಾರೆ.
ಇನ್ನು ಭೀಕರ ಅಪಘಾತದ ಸುದ್ದಿ ತಿಳಿದ ಸಿಎಂ ಯೋಗಿ ಆದಿತ್ಯನಾಥ್​, ಆಡಳೀತಾಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ಧಾವಿಸುವಂತೆ ಸೂಚನೆ ನಿಡಿದ್ದಾರೆ. ಅಲ್ಲದೇ ಆಗಬೇಕಾದ ರಕ್ಷಣಾ ಕಾರ್ಯವನ್ನು ತತಕ್ಷಣ ಕೈಗೊಳ್ಳಿ ಎಂದು ಹೇಳಿದ್ದಾರೆ.ಅಲ್ಲದೇ ವೈದ್ಯಕೀಯ ಸಿಬ್ಬಂದಿಗೆ ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ನೀಡುವಂತೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us