/newsfirstlive-kannada/media/post_attachments/wp-content/uploads/2025/06/Flight-Crashes7.jpg)
ಗುಜರಾತ್ನ ಅಹ್ಮದಾಬಾದ್ನಲ್ಲಿ ವಿಮಾನ ಪತನಗೊಂಡಿದೆ. ಅಹ್ಮದಾಬಾದ್ ಏರ್ಪೋರ್ಟ್ನಿಂದ (Ahmedabad airport) ಏರ್ ಇಂಡಿಯಾ ವಿಮಾನ (Air India ) ಟೇಕ್ ಆಫ್ ಆದ ಐದು ನಿಮಿಷದಲ್ಲಿ ಮೇಘನಿನಗರ್ (Meghaninagar)ದಲ್ಲಿ ಪತನಗೊಂಡಿದೆ. ಪರಿಣಾಮ 133 ಪ್ರಯಾಣಿಕರು ಉಸಿರು ಚೆಲ್ಲಿದ್ದಾರೆ. ಇನ್ನೂ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಷ್ಟೇ ಅಲ್ಲದೇ ಇಡೀ ಭಾರತವನ್ನೇ ಬೆಚ್ಚಿಬೀಳಿಸಿದ 10 ಪ್ರಮುಖ ವಿಮಾನ ಅಪಘಾತಗಳ ಪಟ್ಟಿ ಇಲ್ಲಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಇಂದು ಭಾರೀ ಮಳೆ.. ಈ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಕಡ್ಡಾಯ ರಜೆ ಘೋಷಣೆ
ಭಾರತ ಕಂಡ ಅತ್ಯಂತ ಭೀಕರ ವಿಮಾನ ದುರಂತವೆಂದರೆ 1996 ನವೆಂಬರ್ 12ರಂದು ಚರ್ಖಿ ದಾದ್ರಿ ವಿಮಾನಗಳ ನಡುವೆ ಡಿಕ್ಕಿಯಿಂದ ಬರೋಬ್ಬರಿ 349 ಜನರು ನಿಧನರಾಗಿದ್ದರು. ಇದು ಭೀಕರ ವಾಯು ದುರಂತವಾಗಿ ಉಳಿದುಕೊಂಡಿದೆ.
ಆಗಸ್ಟ್ 7, 2020, ಕ್ಯಾಲಿಕಟ್ (ಕೋಝಿಕೋಡ್) ವಿಮಾನ ಅಪಘಾತ:ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 1344 ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪತನಗೊಂಡು 21 ಜನರು ನಿಧನರಾಗಿದ್ದರು. ವಿಮಾನವು ತೇವವಾದ ರನ್‌ವೇಯಿಂದ ಜಾರಿ ಎರಡು ಭಾಗಗಳಾಗಿ ಮುರಿದು ಹೋಯಿತು..
ಮೇ 22, 2010, ಮಂಗಳೂರು ವಿಮಾನ ಅಪಘಾತ:ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 812 ಮಂಗಳೂರಿನಲ್ಲಿ ರನ್‌ವೇಯಿಂದ ಜಾರಿ 158 ಜನರ ಸಾವುನೋವು ಸಂಭವಿಸಿತು. ವಿಮಾನವು ಕಂದಕಕ್ಕೆ ಬಿದ್ದ ನಂತರ ಬೇರ್ಪಟ್ಟಿತು.
ಜುಲೈ 17, 2000, ಪಾಟ್ನಾ ವಿಮಾನ ಅಪಘಾತ: ಅಲೈಯನ್ಸ್ ಏರ್ ಫ್ಲೈಟ್ 7412ರ ಬೋಯಿಂಗ್ 737 ವಿಮಾನವು ಪಾಟ್ನಾದಲ್ಲಿ ಇಳಿಯುವಾಗ ಪತನಗೊಂಡು 60ಕ್ಕೂ ಹೆಚ್ಚು ಜನರು ಜೀವ ಬಿಟ್ಟಿದ್ದರು. ಪೈಲಟ್ ನಿಯಂತ್ರಣ ತಪ್ಪಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ನವೆಂಬರ್ 12, 1996, ಚರ್ಖಿ ದಾದ್ರಿ ವಿಮಾನಗಳ ನಡುವೆ ವಿಮಾನ ಡಿಕ್ಕಿ: ಸೌದಿ ಅರೇಬಿಯನ್ ಏರ್ಲೈನ್ಸ್ ಬೋಯಿಂಗ್ 747 ಮತ್ತು ಖಜಕಿಸ್ತಾನ್ ಏರ್ಲೈನ್ಸ್ ಇಲ್ಯುಶಿನ್ ಇಲ್-76 ವಿಮಾನಗಳು ದೆಹಲಿ ಬಳಿ ಡಿಕ್ಕಿ ಹೊಡೆದು, ಎರಡೂ ವಿಮಾನಗಳಲ್ಲಿದ್ದ ಎಲ್ಲಾ 349 ಜನರು ಬಲಿಯಾಗಿದ್ದರು. ಪೈಲಟ್ ದೋಷ ಮತ್ತು ವಾಯು ಸಂಚಾರ ನಿಯಂತ್ರಣದೊಂದಿಗೆ ಸಂವಹನದ ಕೊರತೆಯೇ ಇದಕ್ಕೆ ಕಾರಣ.
ಏಪ್ರಿಲ್ 26, 1993, ಔರಂಗಾಬಾದ್ ವಿಮಾನ ಅಪಘಾತ:ಇಂಡಿಯನ್ ಏರ್ಲೈನ್ಸ್ ವಿಮಾನ 491, ಬೋಯಿಂಗ್ 737, ಔರಂಗಾಬಾದ್ ನಿಂದ ಟೇಕ್ ಆಫ್ ಆದ ನಂತರ ಅಪಘಾತಕ್ಕೀಡಾಗಿ, ಟ್ರಕ್ ಮತ್ತು ವಿದ್ಯುತ್ ತಂತಿಗಳಿಗೆ ಡಿಕ್ಕಿ ಹೊಡೆದು 55 ಜನರು ಮೃತಪಟ್ಟಿದ್ದರು.
ಆಗಸ್ಟ್ 16, 1991, ಇಂಫಾಲ್ ವಿಮಾನ ಅಪಘಾತ:ಇಂಡಿಯನ್ ಏರ್ಲೈನ್ಸ್ ವಿಮಾನ 257 ಇಂಫಾಲ್ ಬಳಿ ಪತನಗೊಂಡು ವಿಮಾನದಲ್ಲಿದ್ದ ಎಲ್ಲಾ 69 ಜನರು ಪ್ರಾಣ ಕಳೆದುಕೊಂಡಿದ್ದರು.
ಫೆಬ್ರವರಿ 14, 1990, ಬೆಂಗಳೂರು ವಿಮಾನ ಅಪಘಾತ:ಇಂಡಿಯನ್ ಏರ್ಲೈನ್ಸ್ ಫ್ಲೈಟ್ 605, ಏರ್ಬಸ್ A320, ಬೆಂಗಳೂರಿಗೆ ಸಮೀಪಿಸುತ್ತಿದ್ದಾಗ ಅಪಘಾತಕ್ಕೀಡಾಗಿ 92 ಜನರು ಜೀವ ಬಿಟ್ಟಿದ್ದರು.
ಅಕ್ಟೋಬರ್ 19, 1988, ಅಹಮದಾಬಾದ್ ವಿಮಾನ ಅಪಘಾತ:ಇಂಡಿಯನ್ ಏರ್ಲೈನ್ಸ್ ವಿಮಾನ 113 ಅಹಮದಾಬಾದ್‌ನಲ್ಲಿ ಪತನಗೊಂಡು 133 ಜನರು ಸಾವನ್ನಪ್ಪಿದ್ದರು.
ಜೂನ್ 21, 1982, ಬಾಂಬೆ ವಿಮಾನ ಅಪಘಾತ:ಏರ್ ಇಂಡಿಯಾ ವಿಮಾನ 403 ಬಾಂಬೆ ವಿಮಾನ ನಿಲ್ದಾಣದಲ್ಲಿ ಪತನಗೊಂಡು 17 ಜನರು ಸಾವನ್ನಪ್ಪಿದ್ದರು.
ಜನವರಿ 1, 1978, ಬಾಂಬೆ ವಿಮಾನ ಅಪಘಾತ:ಏರ್ ಇಂಡಿಯಾ ಫ್ಲೈಟ್ 855ರ ಬೋಯಿಂಗ್ 747 ಮುಂಬೈನಿಂದ ಟೇಕ್ ಆಫ್ ಆದ ನಂತರ ಅರೇಬಿಯನ್ ಸಮುದ್ರಕ್ಕೆ ಅಪ್ಪಳಿಸಿತು, ವಿಮಾನದಲ್ಲಿದ್ದ ಎಲ್ಲಾ 213 ಜನರು ಸಾವನ್ನಪ್ಪಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ