ಯೋಗದ ಅಂತರಂಗ ತೆರೆದಿಡುವ 10 ನುಡಿಮುತ್ತುಗಳು -ರವಿ ಶಂಕರ ಗುರೂಜಿ ಕಿವಿಮಾತುಗಳು ಏನೇನು..?

author-image
Veena Gangani
Updated On
ಯೋಗದ ಅಂತರಂಗ ತೆರೆದಿಡುವ 10 ನುಡಿಮುತ್ತುಗಳು -ರವಿ ಶಂಕರ ಗುರೂಜಿ ಕಿವಿಮಾತುಗಳು ಏನೇನು..?
Advertisment
  • ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ
  • ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಪರಿಹಾರ
  • ‘ಯೋಗ ಲಾಭ’ದ ಬಗ್ಗೆ ರವಿ ಶಂಕರ ಗುರೂಜಿ ಹೇಳೋದು ಏನು..?

ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. ಈ ದಿನದಂದು ಯೋಗ ಮಾಡೋದ್ರಿಂದ ಆಗುವ ಪ್ರಯೋಜನಗಳು ಮತ್ತು ಜಾಗತಿಕ ಮಟ್ಟದಲ್ಲಿ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲದೇ ಆಧ್ಯಾತ್ಮಿಕವಾಗಿಯೂ ಒಳ್ಳೆಯದಾಗಿದೆ. ಯೋಗದ ಕುರಿತು ಆರ್ಟ್ ಆಫ್ ಲಿವಿಂಗ್​ನ ಸಂಸ್ಥಾಪಕರೂ, ಜಾಗತಿಕ ಆಧ್ಯಾತ್ಮಿಕ ಗುರುಗಳಾಗಿರುವ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿರುವ 10 ನುಡಿಮುತ್ತುಗಳು ಇಲ್ಲಿವೆ.

ಇದನ್ನೂ ಓದಿ: Yoga Day: ನೀವು ಸ್ಲಿಮ್​​ ಅಂಡ್​ ಫಿಟ್​ ಆಗಿ ಕಾಣಬೇಕೇ? ಯೋಗಾಸನದಿಂದ ಇರೋ ಲಾಭಗಳೇನು?

ಯೋಗದ ಅಂತರಂಗ ತೆರೆದಿಡುವ 10 ನುಡಿಮುತ್ತುಗಳು..

  1. ಯೋಗವು ನಿಮ್ಮಲ್ಲಿ ಆರೈಕೆಯ, ಹಂಚಿಕೊಳ್ಳುವಿಕೆಯ ಹಾಗೂ ಜವಾಬ್ದಾರಿಯ ಗುಣಗಳನ್ನು ಸುಲಭವಾಗಿ ಪೋಷಿಸುತ್ತದೆ.
  2. ಯೋಗವು ದುಃಖ ಬರುವ ಮೊದಲೇ ತಡೆಯುತ್ತದೆ.
  3. ದ್ರಷ್ಟಾನ ಸ್ವರೂಪದಲ್ಲಿ, ಸ್ವಭಾವದಲ್ಲಿ ನೆಲೆಸುವುದು ಯೋಗ. ನೀವು ತಿಳಿದೋ ತಿಳಿಯದೆಯೋ ಆನಂದ, ಉಲ್ಲಾಸ, ಪರಮಾನಂದವನ್ನು ಅನುಭವಿಸಿದಾಗಲೆಲ್ಲಾ, ನೀವು ದ್ರಷ್ಟಾನ ಸ್ವಭಾವದಲ್ಲಿ ನೆಲೆಸಿರುತ್ತೀರಿ.
  4. ಪ್ರಕೃತಿಯ ಬೆಂಬಲ ನಿಮಗೆ ಸದಾ ಇದೆ ಮತ್ತು ನೀವು ಗೆಲ್ಲುತ್ತೀರಿ ಎಂಬ ನಂಬಿಕೆ ಇರಲಿ. ಯೋಗ, ಧ್ಯಾನದ ಅಭ್ಯಾಸ ನಿಮಗೆ ಪ್ರಬಲವಾಗಿ ಸಹಾಯ ಮಾಡುತ್ತದೆ.
  5. ನೀವು ಆಳವಾದ ಪ್ರೀತಿಯಲ್ಲಿದ್ದಾಗ, ಅಲ್ಲಿ ದ್ವಂದ್ವ ಇರುವುದಿಲ್ಲ. ಯೋಗದ ಉದ್ದೇಶವು, ಯಾವುದೇ ಷರತ್ತುಗಳನ್ನು ಮೀರಿದ ಪ್ರೀತಿಯನ್ನು ಹೊಂದಿರುವುದು.
  6. ನೀವು ಆತ್ಮಾವಲೋಕನ ಮಾಡಿ, ಮತ್ತು ಸ್ವಲ್ಪ ಯೋಗ, ಧ್ಯಾನವನ್ನು ಮಾಡಿ. ಆಗ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಮನಸ್ಸಿನಲ್ಲಿ ಸ್ಪಷ್ಟತೆ ಬರುತ್ತದೆ.
  7. ಯೋಗದ ಜ್ಞಾನವು ವ್ಯಕ್ತಿಯನ್ನು ಸ್ವಾತಂತ್ರ್ಯದ ಹಂಬಲದಿಂದ, ಅಪರಿಮಿತತೆಯನ್ನು ಗುರುತಿಸುವೆಡೆಗೆ, ಹಾಗೂ ಸೀಮಿತ "ಸ್ವಾಮಿತ್ವ"ದಿಂದ ಎಲ್ಲದರೊಂದಿಗೆ ಒಂದಾಗಿರುವ ಕಡೆಗೆ ಪರಿವರ್ತಿಸುತ್ತದೆ.
  8. ಶಾಂತಿ ನಮ್ಮ ಸಹಜ ಸ್ವಭಾವ, ಮತ್ತು ಯೋಗವು ನಿಮ್ಮನ್ನು ಆಂತರಿಕ ಶಾಂತಿಯ ಕಡೆಗೆ ಕರೆದೊಯ್ಯುತ್ತದೆ.
  9. ನಿಮಗೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬರುತ್ತಿದ್ದರೆ ಅದರ ಅರ್ಥ ನಿಮ್ಮ ಪ್ರಾಣಶಕ್ತಿ ಕಡಿಮೆಯಾಗಿದೆ ಎಂದು, ಅಷ್ಟೇ. ಹಾಗಾಗಿ ಹೆಚ್ಚು ಹೆಚ್ಚು ಪ್ರಾಣಾಯಾಮ ಮಾಡಿ.
  10. ಅನುಮಾನ ಬಂದಾಗ ಉಪವಾಸ, ಧ್ಯಾನ, ಪ್ರಾಣಾಯಾಮ, ಪ್ರಾರ್ಥನೆಯನ್ನು ಮಾಡಿ ಮತ್ತು ಅನುಮಾನ ಉಳಿಯುವುದೇ ಎಂದು ಪರೀಕ್ಷಿಸಿ. ಈ ಅಭ್ಯಾಸಗಳಿಂದ ನಿಮ್ಮ ಪ್ರಜ್ಞೆಯಲ್ಲಿ ಸಂಪೂರ್ಣ ಬದಲಾವಣೆಯಾಗುವುದು.

ಇದನ್ನೂ ಓದಿ: ಯೋಗ ಇದ್ದಲ್ಲಿ ಆರೋಗ್ಯ ಭಾಗ್ಯ -ಯೋಗ ಆಚರಣೆಗೆ ಸಂಬಂಧಿಸಿದ ಮುತ್ತಿನಂಥ ಮಾತುಗಳು..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment